ಮೂಡಬಿದ್ರೆ ಇಲ್ಲಿಯ ಘಟನೆ
ಮೂಡಬಿದ್ರೆ – ಓರ್ವ ಯುವತಿಗೆ ಪ್ರೀತಿಸುವಂತೆ ಆಕೆಯ ಮೇಲೆ ಒತ್ತಡ ಹೇರಿ ಥಳಿಸಿರುವ ಪ್ರಕರಣದಲ್ಲಿ ಪೊಲೀಸರು ಅರ್ಷದ ಎಂಬ ಯುವಕನನ್ನು ಬಂಧಿಸಿದ್ದಾರೆ. ಮೂಡಬಿದ್ರೆಯಲ್ಲಿನ ಕೋಟೆಬಾಗಿಲ ಇಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅರ್ಷದ್ ನ ಅದೇ ಪರಿಸರದಲ್ಲಿನ ಓರ್ವ ಯುವತಿಯ ಜೊತೆಗೆ ಪರಿಚಯವಾಗಿತ್ತು. ಅದರ ನಂತರ ಅವರ ಇಬ್ಬರಲ್ಲಿ ಅನೇಕ ಸಲ ದೂರವಾಣಿಯಲ್ಲಿ ಸಂಭಾಷಣೆ ನಡೆದಿತ್ತು. ಕೋಟೆಬಾಗಿಲನಲ್ಲಿ ಯುವತಿ ಮೂಡಬಿದ್ರೆ ಅಲ್ವಾ ಆಸ್ಪತ್ರೆಯ ರಸ್ತೆಯಲ್ಲಿರುವ ಒಂದು ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದಳು. ಅರ್ಷದ್ ಜೊತೆಗಿನ ನಡೆದಿರುವ ಸಂಭಾಷಣೆಯಿಂದ ಮನೆಯವರು ಆಕೆಗೆ ಕೆಲಸಕ್ಕೆ ಹೋಗಲು ತಡೆದಿದ್ದರು. ಈ ಸಮಯದಲ್ಲಿ ಆಕೆಯನ್ನು ಉಡುಪಿಯಲ್ಲಿನ ಆಕೆಯ ಸಹೋದರಿಯ ಮನೆಗೆ ಕಳುಹಿಸಿದ್ದರು. ಕೆಲವು ದಿನಗಳ ಹಿಂದೆ ಆಕೆ ಊರಿಗೆ ಹಿಂತಿರುಗಿದ್ದಳು. ಸಂಜೆ ಸಮಯದಲ್ಲಿ ಆಕೆ ಮೂಡಬಿದ್ರೆ ಮಾರುಕಟ್ಟೆಗೆ ಹೋಗಿರುವಾಗ ಅರ್ಷದ್ ಆಕೆಯನ್ನು ಅಡ್ಡಗಟ್ಟಿ ದಾಳಿ ನಡೆಸಿದನು. ಅಲ್ಲಿಯ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಅರ್ಷದ್ ನನ್ನು ಬಂಧಿಸಿದ್ದಾರೆ.
ಸಂಪಾದಕೀಯ ನಿಲುವುಈಗ ಇಂಥವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ! |