ಜೈಪುರ (ರಾಜಸ್ಥಾನ) – ರಾಜಸ್ಥಾನ ಉಚ್ಚನ್ಯಾಯಾಲಯವು ಒಂದು ಮಹತ್ವ ಪೂರ್ಣ ತೀರ್ಪನ್ನು ನೀಡುತ್ತಾ 2 ಕ್ಕಿಂತ ಹೆಚ್ಚು ಮಕ್ಕಳಿರುವ ಸರಕಾರಿ ನೌಕರರಿಗೆ ಬಡ್ತಿ ನೀಡುವುದನ್ನು ನಿಷೇಧಿಸಿದೆ. 2023 ರಲ್ಲಿ, ಆಗಿನ ಕಾಂಗ್ರೆಸ್ ರಾಜ್ಯ ಸರಕಾರವು 2 ಕ್ಕಿಂತ ಹೆಚ್ಚು ಮಕ್ಕಳಿರುವ ಸರಕಾರಿ ನೌಕರರ ಬಡ್ತಿ ಮೇಲಿನ ನಿಷೇಧವನ್ನು ತೆಗೆದುಹಾಕಿತ್ತು. ಆ ನಂತರ ಅವರಿಗೆ ಹಿಂದಿನ ದಿನಾಂಕದಿಂದ ಬಡ್ತಿ ನೀಡಲಾಗುತ್ತಿತ್ತು. (ಮುಸಲ್ಮಾನರನ್ನು ಓಲೈಸುವುದಕ್ಕಾಗಿ ಕಾಂಗ್ರೆಸ್ ಈ ನಿರ್ಧಾರ ತೆಗೆದುಕೊಂಡಿತು. ಇದು ಸ್ಪಷ್ಟವಾಗಿದೆ. – ಸಂಪಾದಕರು)