ಧಾರ್ಮಿಕ ಸೌಹಾರ್ದತೆ ಹಾಳಾಗಬಹುದು ಎಂದು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಪಕ್ಷ ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಆಕ್ಷೇಪ ವ್ಯಕ್ತಪಡಿಸಿದ ನಂತರ ಆದೇಶ
ಗಂಗಾವತಿ – ಇಲ್ಲಿಯ ರಸ್ತೆಗಳಲ್ಲಿ ಅಲಂಕಾರಕ್ಕಾಗಿ ಹಾಕಲಾಗಿರುವ ವಿದ್ಯುತ್ ಕಂಬದ ಮೇಲಿನ ಧಾರ್ಮಿಕ ಚಿಹ್ನೆಗಳನ್ನು ತೆಗೆದು ಹಾಕಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಹಾಗೂ ಕರ್ನಾಟಕ ಗ್ರಾಮೀಣ ಮೂಲಭೂತ ಸೌಲಭ್ಯ ವಿಕಾಸ ಸಂಸ್ಥೆಯ ವಿರುದ್ಧ ದೂರು ದಾಖಲಿಸುವ ಆದೇಶ ಕೂಡ ನೀಡಿದ್ದಾರೆ.
ಗಂಗಾವತಿ ತಾಲೂಕು ಇದು ಶ್ರೀ ಹನುಮಂತನ ಜನ್ಮಸ್ಥಳ ಎಂದು ನಂಬಲಾಗಿದೆ. ಇದರಿಂದ ಈ ದೀಪದ ಕಂಬಗಳಿಗೆ ಭಗವಂತ ಶ್ರೀ ರಾಮ ಮತ್ತು ಭಗವಂತ ಹನುಮಂತನ ಶಸ್ತ್ರಾಸ್ತ್ರದ ಪ್ರತೀಕ ಎಂದು ಗಧೆ ಮತ್ತು ಬಿಲ್ಲುಬಾಣವನ್ನು ಅಲಂಕಾರಕ್ಕಾಗಿ ಹಾಕಲಾಗಿತ್ತು. ಇದಕ್ಕೆ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಪಕ್ಷ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಕಂಬಗಳ ಮೇಲಿನ ಚಿಹ್ನೆಗಳನ್ನು ತೆರವುಗೊಳಿಸಲು ಆಗ್ರಹಿಸಲಾಗಿತ್ತು. ಹಾಗೂ ಸಂಬಂಧಿತರ ವಿರುದ್ಧ ದೂರು ದಾಖಲಿಸಲು ಕೂಡ ಒತ್ತಾಯಿಸಲಾಗಿತ್ತು. ಇದರ ನಂತರ ಅಧಿಕಾರಿಗಳು ನಗರದಲ್ಲಿನ ಧಾರ್ಮಿಕ ಸೌಹಾರ್ದತೆ ಹಾಳಾಗಬಾರದು, ಎಂದು ಕಂಬದ ಮೇಲಿನ ಚಿಹ್ನೆಗಳನ್ನು ತೆರವುಗೊಳಿಸುವ ಆದೇಶ ನೀಡಿದ್ದಾರೆ. (ಈ ರೀತಿಯ ಕಂಬ ಅಳವಡಿಸಿದರೆ ಧಾರ್ಮಿಕ ಸೌಹಾರ್ದತೆ ಹಾಳಾಗುತ್ತಿದ್ದರೆ, ಅದನ್ನು ತೆಗೆಯುವುದರಿಂದ ಧಾರ್ಮಿಕ ಸೌಹಾರ್ದತೆ ಹಾಳಾದರೆ ಆಗ ಅದಕ್ಕೆ ಯಾರು ಜವಾಬ್ದಾರರು ? ಇದರ ಉತ್ತರ ಜಿಲ್ಲಾಧಿಕಾರಿಗಳು ನೀಡುವರೆ ? – ಸಂಪಾದಕರು) ಈ ವಿದ್ಯುತ್ ಕಂಬಗಳು ಗಂಗಾವತಿ ಪ್ರದೇಶದಲ್ಲಿ ರಾಣಾ ಸರ್ಕಲ್ ಮತ್ತು ಜ್ಯೂಲಿಯಾನಗರ್ ಇಲ್ಲಿ ಅಲಂಕಾರಕ್ಕಾಗಿ ಅಳವಡಿಸಲಾಗಿದ್ದವು. ಇದರ ಬಗ್ಗೆ ಹಿಂದೂ ಸಂಘಟನೆಗಳು ‘ಈ ಮಾರ್ಗ ೧೨ ಕಿಲೋಮೀಟರ್ ದಾಗಿದ್ದು ಭಕ್ತರಿಗೆ ಪ್ರೇರಣೆ ದೊರೆಯಬೇಕು, ಅದಕ್ಕಾಗಿ ಈ ಚಿಹ್ನೆಗಳನ್ನು ಉಪಯೋಗಿಸಿದ್ದರು. ಇದರಲ್ಲಿ ಯಾವುದೇ ಧಾರ್ಮಿಕ ವಿವಾದ ಕಂಡು ಬರುತ್ತದೆ ?’, ಎಂದು ಜಿಲ್ಲಾಧಿಕಾರಿಗಳಿಗೆ ಪ್ರಶ್ನಿಸಲಾಗಿದೆ.
ಸಂಪಾದಕೀಯ ನಿಲುವುಹಿಂದುಗಳ ದೇಶದಲ್ಲಿ ಹಿಂದೂಗಳ ಧಾರ್ಮಿಕ ಚಿಹ್ನೆಗಳು ಹಾಕಲು ಮುಸಲ್ಮಾನರ ಆಕ್ಷೇಪದ ನಂತರ ಬರುವ ನಿಷೇಧ ಹಿಂದುಗಳಿಗೆ ಲಚ್ಚಾಸ್ಪದ ! |