|
ಅಮರಾವತಿ (ಆಂಧ್ರಪ್ರದೇಶ) – ಆಂಧ್ರಪ್ರದೇಶ ರಾಜ್ಯದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇವರು ದೇವಸ್ಥಾನದ ಸಂದರ್ಭದಲ್ಲಿ ಸರಕಾರದ ಅಧಿಕಾರಿಗಳ ಜೊತೆಗೆ ನಡೆಸಿರುವ ಸಭೆಯಲ್ಲಿ ಅನೇಕ ಮಹತ್ವಪೂರ್ಣ ನಿರ್ಣಯ ತೆಗೆದುಕೊಂಡಿದ್ದಾರೆ. ಇದರಲ್ಲಿ ರಾಜ್ಯದಲ್ಲಿನ ದೇವಸ್ಥಾನಗಳಲ್ಲಿ ಕೇವಲ ಹಿಂದುಗಳನ್ನೇ ಕೆಲಸಕ್ಕೆ ಇರಿಸುವುದರೊಂದಿಗೆ ದೇವಸ್ಥಾನದಲ್ಲಿನ ಅರ್ಚಕರ ವೇತನದಲ್ಲಿ ಶೇಕಡ ೫೦ ರಷ್ಟು ಹೆಚ್ಚಿಸಿದ್ದಾರೆ. ಹಾಗೂ ದೇವಸ್ಥಾನದಲ್ಲಿ ಕೆಲಸ ಮಾಡುವ ಬ್ರಾಹ್ಮಣರಿಗೆ ಕನಿಷ್ಠ ಮಾಸಿಕ ವೇತನವೆಂದು ೨೫ ಸಾವಿರ ರೂಪಾಯಿ ನೀಡಲಾಗುವುದು. ವೇದ ವಿದ್ಯಾ ಕಲಿಯುವ ನಿರುದ್ಯೋಗ ಯುವಕರಿಗೆ ೩ ಸಾವಿರ ರೂಪಾಯಿ ತಿಂಗಳ ಭತ್ಯೆ ನೀಡಲಾಗುವುದು. ಸಭೆಯಲ್ಲಿ ಮುಖ್ಯಮಂತ್ರಿ ನಾಯ್ಡು ಇವರು ಕಳೆದ ಜಗನ ಮೋಹನ ರೆಡ್ಡಿ ಸರಕಾರದ ಕಾಲದಲ್ಲಿ ಹಿಂದುಗಳ ದೇವಸ್ಥಾನಗಳ ಮೇಲೆ ನಡೆದಿರುವ ಆಕ್ರಮಣದ ಘಟನೆಯನ್ನು ಬಲವಾಗಿ ಖಂಡಿಸಿದರು. ಒಂದು ದೇವಸ್ಥಾನದ ಮೇಲೆ ಆಗಿರುವ ದಾಳಿಯಲ್ಲಿ ಅಲ್ಲಿಯ ರಥಕ್ಕೆ ಬೆಂಕಿ ಹಚ್ಚಿರುವ ಘಟನೆ ಕೂಡ ಅವರು ನಿಂದಿಸಿದರು. ನಾಯ್ಡು ಇವರು ಇಂತಹ ಅಪರಾಧ ಮಾಡುವವರಿಗೆ ಕಠಿಣ ಕ್ರಮ ಕೈಗೊಳ್ಳುವ ಆದೇಶ ನೀಡಿದ್ದಾರೆ. ಹಾಗೂ ‘ಆಂಧ್ರಪ್ರದೇಶದಲ್ಲಿ ಬಲವಂತದ ಮತಾಂತರ ಸಹಿಸಲಾಗುವುದಿಲ್ಲ’, ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇವರು ತೆಗೆದುಕೊಂಡಿರುವ ಇತರ ನಿರ್ಣಯಗಳು
೧. ರಾಜ್ಯದ್ಯಂತ ಇರುವ ವಿವಿಧ ದೇವಸ್ಥಾನಗಳಲ್ಲಿ ಕೆಲಸ ಮಾಡುವ ೧ ಸಾವಿರದ ೬೮೩ ಅರ್ಚಕರ ವೇತನ ೧೦ ಸಾವಿರದಿಂದ ೧೫ ಸಾವಿರ ರೂಪಾಯಿ ಪ್ರತಿ ತಿಂಗಳು ನೀಡುವುದು.
೨. ‘ಧೂಪ ದೀಪ ನೈವೇದ್ಯ ಯೋಜನೆ’ ಅಡಿಯಲ್ಲಿ ಚಿಕ್ಕ ದೇವಸ್ಥಾನಗಳಿಗೆ ಪ್ರತಿ ತಿಂಗಳು ನೀಡಲಾಗುವ ಆರ್ಥಿಕ ಸಹಾಯ ೫ ಸಾವಿರ ರೂಪಾಯಿಯಿಂದ ೧೦ ಸಾವಿರ ರೂಪಾಯಿ ನೀಡುವುದು.
೩. ದೇವಸ್ಥಾನ ಟ್ರಸ್ಟ್ ನಲ್ಲಿ ೨ ಹೊಸ ಬೋರ್ಡ್ ಸದಸ್ಯರನ್ನು ಜೋಡಿಸಲಾಗುವುದು. ಈಗ ೨೦ ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಉತ್ಪನ್ನ ಇರುವ ದೇವಸ್ಥಾನದ ಟ್ರಸ್ಟ್ ಬೋರ್ಡಿನಲ್ಲಿ ೧೫ ಸದಸ್ಯರು ಇರುತ್ತಾರೆ. ಈ ಸಂಖ್ಯೆ ಈಗ ಹೆಚ್ಚಿಸಿ ೧೭ ಮಾಡಲಾಗುವುದು. ಟ್ರಸ್ಟ್ ಬೋರ್ಡ್‌ನಲ್ಲಿ ೧ ಬ್ರಾಹ್ಮಣ ಮತ್ತು ದೇವಸ್ಥಾನದಲ್ಲಿ ಕೆಲಸ ಮಾಡುವ ೧ ಬ್ರಾಹ್ಮಣ ಸದಸ್ಯರು ಇರುವರು.
೪. ಆಂಧ್ರ ಪ್ರದೇಶದಲ್ಲಿನ ೧ ಸಾವಿರದ ೧೧೦ ದೇವಸ್ಥಾನಗಳಿಗಾಗಿ ಟ್ರಸ್ಟಿ ನೇಮಕ ಮಾಡಲಾಗುವುದು. ಅಕ್ರಮವಾಗಿ ವಶಕ್ಕೆ ಪಡೆದಿರುವ ದೇವಸ್ಥಾನದ ೮೭ ಎಕರೆ ಭೂಮಿ ಕಾನೂನು ರೀತಿಯಾಗಿ ಹಿಂಪಡೆಯಲಾಗುವುದು.
೫. ಶ್ರೀವಾಣಿ ಟ್ರಸ್ಟ್ ಅಡಿಯಲ್ಲಿ ಪ್ರತಿಯೊಂದು ದೇವಸ್ಥಾನಕ್ಕೆ ೧೦ ಲಕ್ಷ ರೂಪಾಯ ನೀಡಲಾಗುವುದು. ಅಗತ್ಯವಿದ್ದರೆ, ಆ ಕಾರ್ಯದ ಸಮೀಕ್ಷೆ ಪೂರ್ಣವಾದ ನಂತರ ಹೆಚ್ಚಿನ ನಿಧಿ ನೀಡಲಾಗುವುದು. ೧೦ ಲಕ್ಷ ರೂಪಾಯಿಗಿಂತಲು ಹೆಚ್ಚಿನ ನಿಧಿ ಅವಶ್ಯಕತೆ ಇರುವ ದೇವಸ್ಥಾನಕ್ಕಾಗಿ ಪ್ರಸ್ತಾವ ಕಳುಹಿಸಲಾಗುವುದು.
೬. ದತ್ತಿ ಇಲಾಖೆಯು ಕೃಷ್ಣ ಮತ್ತು ಗೋದಾವರಿ ನದಿಯನ್ನು ನವೀಕರಣ ಮಾಡುವುದು ನಿಶ್ಚಯಿಸಿದೆ.
೭. ರಾಜ್ಯದಲ್ಲಿನ ಪ್ರತಿಯೊಂದು ದೇವಸ್ಥಾನದಲ್ಲಿ ಆಧ್ಯಾತ್ಮಿಕತೆ ಹೆಚ್ಚಿಸುವುದಕ್ಕಾಗಿ ದೇವಸ್ಥಾನ ಮತ್ತು ಅದರ ಅಕ್ಕಪಕ್ಕದ ಪರಿಸರವನ್ನು ಸಂಪೂರ್ಣವಾಗಿ ಸ್ವಚ್ಛ ಇರಿಸುವುದು.
೮. ಪ್ರವಾಸೋದ್ಯಮ ಇಲಾಖೆ, ಹಿಂದೂ ಧರ್ಮಾರ್ಥ ಇಲಾಖೆ ಮತ್ತು ಅರಣ್ಯ ಇಲಾಖೆ ಇವರ ಅಧಿಕಾರಿಗಳ ಒಂದು ಸಮಿತಿ ಸ್ಥಾಪನೆ ಮಾಡಲಾಗುವುದು. ಈ ಸಮಿತಿ ದೇವಸ್ಥಾನದ ವಿಶೇಷವಾಗಿ ಅರಣ್ಯ ಕ್ಷೇತ್ರದಲ್ಲಿನ ದೇವಸ್ಥಾನದ ವಿಕಾಸದ ನಿರೀಕ್ಷಣೆ ಮಾಡುವುದು. ಸಮಿತಿಗೆ ಸ್ಥಳಗಳಲ್ಲಿ ನೈಸರ್ಗಿಕ ಸೌಂದರ್ಯದ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಮಹತ್ವದ ಭಾಗ ಎಂದು ಕಾಪಾಡಿ ಅವುಗಳನ್ನು ಹೆಚ್ಚೆಚ್ಚು ಪ್ರವಾಸಿಗರಿಗಾಗಿ ಸುಲಭಗೊಳಿಸಲಾಗುವುದು.
ಸಂಪಾದಕೀಯ ನಿಲುವುಸರಕಾರವು ತನ್ನ ವಶದಲ್ಲಿರುವ ಎಲ್ಲಾ ದೇವಸ್ಥಾನಗಳು ಈಗ ಭಕ್ತರ ಆಧೀನಕ್ಕೆ ನೀಡಬೇಕು. ದೇವಸ್ಥಾನದ ನಿರ್ವಹಣೆ ಸರಕಾರದ ಕೆಲಸವಲ್ಲ, ಅದು ಭಕ್ತರ ಸೇವೆ ಆಗಿರುವುದರಿಂದ ಅವರ ಕೈಗೆ ನೀಡುವುದು ಆವಶ್ಯಕವಾಗಿದೆ, ಇದು ಸರಕಾರ ತಿಳಿದುಕೊಳ್ಳಬೇಕು ! |