ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿ; 25 ಮೀಟರ್‌ಗಳವರೆಗಿನ ತಂತಿಯ ಬೇಲಿಯನ್ನು ಕತ್ತರಿಸಿದ ಪಾಕಿಸ್ತಾನಿ ನಾಗರಿಕರು

150ಕ್ಕೂ ಅಧಿಕ ಕುರಿಗಳ ಭಾರತೀಯ ಗಡಿಯೊಳಗೆ ಪ್ರವೇಶ

ನವದೆಹಲಿ – ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿರುವ `ಸಿಂಗಲ್ಲ ಲೈನ್’ ಭದ್ರತೆಯ ತಂತಿ ಬೇಲಿಯನ್ನು ಪಾಕಿಸ್ತಾನಿ ಜನರು 25 ಮೀಟರ್ ವರೆಗೆ ಕತ್ತರಿಸಿರುವುದು ಬೆಳಕಿಗೆ ಬಂದಿದೆ. ಬೇಲಿ ಕತ್ತರಿಸಿದ ಕಾರಣ ಪಾಕಿಸ್ತಾನದ 150ಕ್ಕೂ ಹೆಚ್ಚು ಕುರಿಗಳು ಗಡಿಯನ್ನು ದಾಟಿ ಭಾರತ ಪ್ರವೇಶಿಸಿವೆ. (ಈ ಕುರಿಗಳನ್ನು ಭಾರತದ ಗಡಿಗೆ ಏಕೆ ಕಳುಹಿಸಲಾಯಿತು? ಇದರ ಹಿಂದೆ ಏನಾದರೂ ಪಿತೂರಿಯಿದೆಯೇ? ಎಂಬುದರ ತನಿಖೆ ನಡೆಸಬೇಕು- ಸಂಪಾದಕರು) ಈ ಕುರಿಗಳನ್ನು ಹಿಂದಕ್ಕೆ ಪಡೆದುಕೊಳ್ಳಲು ಪಾಕಿಸ್ತಾನ ನಿರಾಕರಿಸಿದ್ದರಿಂದ ಕಳೆದ ಒಂದೂವರೆ ತಿಂಗಳಿನಿಂದ ಗಡಿಭದ್ರತಾ ಪಡೆಯು ಈ ಕುರಿಗಳನ್ನು ನೋಡಿಕೊಳ್ಳುತ್ತಿದೆ ಮತ್ತು ಈ ಕುರಿಗಳಿಗೆ ಬೇರೆ ವ್ಯವಸ್ಥೆ ಮಾಡುವಂತೆ ಗಡಿ ಭದ್ರತಾ ಪಡೆಯು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ.

ನಿಯಮಗಳ ಪ್ರಕಾರ, ಕುರಿಗಳನ್ನು ಯಾವುದಾದರೂ ಸ್ವಯಂಸೇವಾ ಸಂಸ್ಥೆಗೆ ವಹಿಸುವ ನಿಬಂಧನೆಯಿದೆ; ಆದರೆ ಜಿಲ್ಲೆಯಲ್ಲಿ ಯಾವುದೇ ಪಶುಪಾಲನೆ ಮತ್ತು ನಿರ್ವಹಣೆ ಮಾಡುವ ಸ್ವಯಂ ಸೇವಾ ಸಂಸ್ಥೆಗಳು ಇಲ್ಲದಿರುವ ಕಾರಣ ಈಗ ಸ್ಥಳೀಯ ಮಟ್ಟದಲ್ಲಿ ಈ ಕುರಿಗಳನ್ನು ಹರಾಜು ಮಾಡುವ ಪ್ರಕ್ರಿಯೆ ನಡೆಸಲಾಗುವುದು. ಅಲ್ಲಿಯವರೆಗೆ ಈ ಕುರಿಗಳನ್ನು ಗಡಿಭದ್ರತಾ ಪಡೆಯ ಬಳಿಯೇ ಇಡಲಾಗುವುದೆಂದು ಗಡಿ ಭದ್ರತಾ ಪಡೆಯ ಮೂಲಗಳು ತಿಳಿಸಿವೆ.

ಸಂಪಾದಕೀಯ ನಿಲುವು

ಇಷ್ಟು ದೊಡ್ಡ ಪ್ರಮಾಣದಲ್ಲಿ ತಂತಿ ಬೇಲಿಯನ್ನು ಕತ್ತರಿಸಿದ್ದಾರೆಂದರೆ ಅಲ್ಲಿನ ಭದ್ರತೆಯಲ್ಲಿ ಗಂಭೀರ ಲೋಪ ದೋಷವಿದೆ ಎಂದೇ ಅರ್ಥವೇ?