ಲೇಹ (ಲಡಾಖ್) – ಲಡಾಖಗೆ ಅಂಟಿಕೊಂಡಿರುವ ಚೀನಾದ ಪ್ರತ್ಯಕ್ಷ ನಿಯಂತ್ರಣ ರೇಖೆಯ ಹತ್ತಿರ ಭಾರತೀಯ ಗಡಿಯಲ್ಲಿ ನುಗ್ಗಿದ್ದ ೪೦ ಚೀನಾದ ಯಾಕ ಪ್ರಾಣಿಗಳನ್ನು ಭಾರತವು ಮತ್ತೆ ಚೀನಾಗೆ ಕಳುಹಿಸಿದೆ. ಅದೇ ಸಮಯದಲ್ಲಿ ಯಾಕದ ಮಾಲೀಕ, ‘ಈ ಪ್ರಾಣಿಗಳು ಭಾರತದ ಗಡಿಯಲ್ಲಿ ಬಡಬಾರದೆಂದು’, ಎಚ್ಚರಿಕೆ ಕೂಡ ನೀಡಿದೆ.
ಚೀನಾವು ಭಾರತೀಯ ಪ್ರಾಣಿಗಳನ್ನು ಹಿಂತಿರುಗಿಸುವುದಿಲ್ಲ !
ಚುಶುಲದ ಕಾರ್ಪೊರೆಟರ್ ಕೊಂಚಕ ತೆಂಝಿನ್ ಇವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, ಕೆಲವು ದಿನಗಳ ಹಿಂದೆ ಚೀನಾದ 40 ಯಾಕ್ ಪೂರ್ವ ಲಡಾಖದ್ ಡೇಮಚೋಕ ಪ್ರದೇಶಕ್ಕೆ ಬಂದಿದ್ದವು. ಯಾವಾಗ ಭಾರತೀಯ ಪ್ರಾಣಿ ಚೀನಾದ ಗಡಿಯಲ್ಲಿ ಹೋಗುತ್ತವೆ, ಆಗ ಅವುಗಳು ಮತ್ತೆ ಭಾರತಕ್ಕೆ ಹಿಂತಿರುಗಿಸುವುದಿಲ್ಲ; ಆದರೆ ಭಾರತವು ಚೀನಾಗೆ ಅದರ ಯಾಕ ಹಿಂತಿರುಗಿಸಿದೆ ಎಂದು ಹೇಳಿದ್ದಾರೆ. ಚೀನಾ ಅನೇಕ ಸಾರಿ ಈ ಗಡಿಯ ಮೇಲೆ ತನ್ನ ಅಧಿಕಾರ ಸ್ಥಾಪಿಸಲು ಬೇರೆ ಬೇರೆ ಪ್ರಯತ್ನ ಮಾಡುತ್ತಿರುತ್ತದೆ. ಲಡಾಖದಲ್ಲಿ ಗೋಮಾಳ ಪ್ರದೇಶದಿಂದ ನಿರಂತರವಾಗಿ ವಿವಾದ ನಡೆಯುತ್ತಿರುತ್ತದೆ. ಈ ಪ್ರದೇಶ ಭಾರತದ ಬುಡಕಟ್ಟು ಜನಾಂಗಕ್ಕಾಗಿ ಮಹತ್ವದ್ದಾಗಿದೆ; ಕಾರಣ ಅವರು ಶತಕಗಳಿಂದ ಇಲ್ಲಿ ಅವರ ಜಾನುವಾರುಗಳನ್ನು ಮೇಯಿಸಲು ತರುತ್ತಾರೆ.
ಗಡಿಯಲ್ಲಿ ಮೇಯುವ ಪ್ರಾಣಿಗಳ ಸಂಖ್ಯೆ ೫೮ ಸಾವಿರ !
೨೦೨೦ ರಲ್ಲಿ ಇಲ್ಲಿಯ ಗಡಿಯಲ್ಲಿ ಭಾರತ ಮತ್ತು ಚೀನಾದಲ್ಲಿ ನಡೆದಿರುವ ಚಕಮಕಿಯ ನಂತರ ಈ ಪ್ರಕರಣದಲ್ಲಿ ಹೆಚ್ಚಳವಾಗಿದೆ. ಈ ಪ್ರದೇಶದಲ್ಲಿ ಮೇಯುವ ಪ್ರಾಣಿಗಳ ಸಂಖ್ಯೆ ೨೦೧೯ ರಲ್ಲಿ ೫೬ ಸಾವಿರದಷ್ಟು ಇತ್ತು 2021 ರಲ್ಲಿ ೨೮ ಸಾವಿರದಷ್ಟು ಆಯಿತು; ಆದರೆ ಈಗ ಅದು ಮತ್ತೆ ಹೆಚ್ಚಾಗಿ ಸುಮಾರು ೫೮ ಸಾವಿರದಷ್ಟು ಆಗಿದೆ.
ಸಂಪಾದಕೀಯ ನಿಲುವುನೆನ್ನೆಯವರೆಗೆ ಚೀನಾದ ಸೈನಿಕರು ನುಸುಳುತ್ತಿದ್ದರು ಈಗ ಪ್ರಾಣಿಗಳನ್ನು ನುಗ್ಗಲು ಕಳುಹಿಸಿದ್ದಾರೆ. ಭಾರತ ಈ ರೀತಿಯ ಷಡ್ಯಂತ್ರದಲ್ಲಿ ಎಂದು ಜಾಣವಾಗುವುದು ! |