ಅತ್ಯಾಚಾರವನ್ನು ಮರೆಯುವ ನಮ್ಮ ಅಭ್ಯಾಸವು ಖಂಡನೀಯ ! – ರಾಷ್ಟ್ರಪತಿ ಮುರ್ಮು

ಕೋಲಕಾತಾದಲ್ಲಿ ಮಹಿಳಾ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ

ನವ ದೆಹಲಿ – ದೆಹಲಿಯಲ್ಲಿನ ‘ನಿರ್ಭಯಾ’ ಘಟನೆಯ ನಂತರ (ದೆಹಲಿಯಲ್ಲಿ ಯುವತಿಯೊಬ್ಬಳನ್ನು ಬಲಾತ್ಕಾರ ಮಾಡಿ ಹತ್ಯೆ ಮಾಡಿದ್ದನು, ಈ ಘಟನೆಯನ್ನು ನಿರ್ಭಯಾ ಪ್ರಕರಣ ಎಂದು ಹೇಳುತ್ತಾರೆ) 12 ವರ್ಷಗಳಲ್ಲಿ ಸಮಾಜವು ಬಲಾತ್ಕಾರ ನಡೆದಿರುವ ಅಸಂಖ್ಯಾತ ಘಟನೆಗಳನ್ನು ಮರೆತಿದೆ. ಇಂತಹ ವಿಷಯಗಳನ್ನು ಮರೆಯುವ ಸಾಮೂಹಿಕ ಅಭ್ಯಾಸ ಖಂಡನೀಯವಾಗಿದೆ. ಕೋಲಕಾತಾದ ಅತ್ಯಾಚಾರ ಹಾಗೂ ಹತ್ಯೆಯ ಘಟನೆಯಿಂದ ನಾನು ನಿರಾಶೆಗೊಂಡಿದ್ದೇನೆ ಮತ್ತು ಹೆದರಿದ್ದೇನೆ ಎಂದು ರಾಷ್ಟ್ರಪತಿ ಮುರ್ಮು ಅವರು ಕೋಲಕಾತಾದ ರಾಧಾ ಗೋವಿಂದ್ (ಆರ್.ಜಿ.) ಕರ ವೈದ್ಯಕೀಯ ವಿಶ್ವವಿದ್ಯಾಲಯದ ಮಹಿಳಾ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ.

ರಾಷ್ಟ್ರಪತಿಗಳು ತಮ್ಮ ಮಾತನ್ನು ಮುಂದುವರಿಸಿ,

1. ಯಾವುದೇ ಸುಸಂಸ್ಕೃತ ಸಮಾಜವು ಹೆಣ್ಣುಮಕ್ಕಳು ಮತ್ತು ಸಹೋದರಿಯರ ಮೇಲೆ ಇಂತಹ ದೌರ್ಜನ್ಯಗಳನ್ನು ಒಪ್ಪುವುದಿಲ್ಲ.

2. ಸಮಾಜವು ಪ್ರಾಮಾಣಿಕವಾಗಿ ಮತ್ತು ನಿಷ್ಪಕ್ಷಪಾತವಾಗಿ ಆತ್ಮಾವಲೋಕನ ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅನೇಕಬಾರಿ ಕೀಳು ಮನಃಸ್ಥಿತಿ ಹೊಂದಿರುವ ಜನರು ಮಹಿಳೆಯರನ್ನು ತಮಗಿಂತ ಕೀಳೆಂದು ತಿಳಿಯುತ್ತಾರೆ.

3. ಯಾವ ಸಮಾಜವು ಇತಿಹಾಸವನ್ನು ಎದುರಿಸಲು ಹೆದರುತ್ತದೆಯೋ, ಅವರೇ ಅಂತಹ ವಿಷಯಗಳನ್ನು ಮರೆಯುತ್ತದೆ. ಈಗ ಭಾರತ ತನ್ನ ಇತಿಹಾಸವನ್ನು ಸಂಪೂರ್ಣವಾಗಿ ಎದುರಿಸುವ ಸಮಯ ಬಂದಿದೆ.

4. ಈ ವಿಕೃತಿಯನ್ನು ನಾವು ಸಾಮೂಹಿಕವಾಗಿ ಎದುರಿಸುವುದು ಅವಶ್ಯಕವಾಗಿದೆ, ಇದರಿಂದ ಅದನ್ನು ಪ್ರಾರಂಭದಲ್ಲಿಯೇ ನಷ್ಟಪಡಿಸಬಹುದಾಗಿದೆ.

ಸಂಪಾದಕೀಯ ನಿಲುವು

ಸ್ವಾತಂತ್ರ್ಯಬಂದು 77 ವರ್ಷಗಳಾದರೂ ಇಂದಿಗೂ ನಮ್ಮ ದೇಶದಲ್ಲಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗುತ್ತಿಲ್ಲ, ಇದರಿಂದಲೇ ಇಂತಹ ಕಾಮುಕರು ಕೊಬ್ಬಿದ್ದಾರೆ ಎನ್ನುವುದೂ ಅಷ್ಟೇ ಸತ್ಯವಾಗಿದೆ !