ಉಡುಪಿ – ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಿತನಾದ ಮುಸ್ಲಿಂ ವ್ಯಕ್ತಿಯೊಬ್ಬ 21 ವರ್ಷದ ಹಿಂದೂ ಯುವತಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ಉಡುಪಿಯಲ್ಲಿ ನಡೆದಿದೆ. ಯುವತಿಗೆ ಮದ್ಯ ಕುಡಿಸಿ ಬಲಾತ್ಕಾರ ಮಾಡಲಾಗಿದೆಯೆಂದು ಪೊಲೀಸರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಅಲ್ತಾಫ್ ಮತ್ತು ರಿಚರ್ಡ್ ಕ್ವಾಡ್ರಸ್ ಈ ಇಬ್ಬರು ಮುಸ್ಲಿಂ ಯುವಕರನ್ನು ಬಂಧಿಸಿದ್ದಾರೆ.
1. ಪೊಲೀಸರು ನಿಡಿದ ಮಾಹಿತಿಯ ಪ್ರಕಾರ, ಒಂದು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ಹಿಂದೂ ಯುವತಿಗೆ ಅಲ್ತಾಫನೊಂದಿಗೆ 3 ತಿಂಗಳ ಹಿಂದೆ ಇನ್‌ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿತ್ತು.
2. ಇನ್‌ಸ್ಟಾಗ್ರಾಮ್ ಮೂಲಕ ಇಬ್ಬರೂ ಅನೇಕ ಬಾರಿ ಮಾತನಾಡುತ್ತಿದ್ದರು. ಇತ್ತೀಚೆಗೆ ಅಲ್ತಾಫ್ ಅವಳಿಗೆ ಒಂದು ಸ್ಥಾನವನ್ನು ತೋರಿಸುವ ನಿಮಿತ್ತದಿಂದ ಒಂದು ಸ್ಥಳಕ್ಕೆ ಕರೆದೊಯ್ದನು. ಅಲ್ಲಿ ಅವನು ಅವಳಿಗೆ ಮದ್ಯ ಕುಡಿಸಿ ಅವಳ ಮೇಲೆ ಬಲಾತ್ಕಾರ ಮಾಡಿದನು.
ಭಾಜಪದಿಂದ ‘ಲವ್ ಜಿಹಾದ್’ ಆರೋಪ
ಭಾಜಪ ಕಾರ್ಯದರ್ಶಿ ಮತ್ತು ಕಾರ್ಕಳ ಶಾಸಕ ವಿ. ಸುನೀಲ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಹಿಂದೂ ಮಹಿಳೆಯರನ್ನು ಗುರಿಯಾಗಿಸಲಾಗುತ್ತಿದ್ದು, ಪರಿಸ್ಥಿತಿ ಕಳವಳಕಾರಿಯಾಗಿದೆ. ಆರೋಪಿಗಳ ವಿರುದ್ಧ ರಾಜ್ಯ ಸರಕಾರವಾಗಲಿ, ಪೊಲೀಸರಾಗಲಿ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಿದರು.