ಬಾಂಗ್ಲಾದೇಶದ ಲಕ್ಷಾಂತರ ಹಿಂದೂಗಳು ಜನ್ಮಾಷ್ಟಮಿಯಂದು ಉಪವಾಸ ಮಾಡುತ್ತಿದ್ದರೂ, ಅವರ ಮುಖದಲ್ಲಿ ಸಂತೋಷವಿಲ್ಲ!
ಮಥುರಾ (ಉತ್ತರ ಪ್ರದೇಶ) – ನಾವು (ಹಿಂದೂಗಳು) ಒಗ್ಗಟ್ಟಿನಿಂದ ಇರುವ ಅವಶ್ಯಕತೆ ಇದೆ; ಏಕೆಂದರೆ ಒಂದು ವೇಳೆ ನಾವು ವಿಭಜಿಸಲ್ಪಟ್ಟರೆ, ನಾವು ಕತ್ತರಿಸಲ್ಪಡುವೆವು. ನಮ್ಮ ವಿನಾಶ ತಪ್ಪದು. ಇಂದು, ಶ್ರೀ ಕೃಷ್ಣ ಜನ್ಮಾಷ್ಟಮಿ, ಬಾಂಗ್ಲಾದೇಶದ ಲಕ್ಷಾಂತರ ಹಿಂದೂಗಳು ಭಯದ ನೆರಳಿನಲ್ಲಿ ತಮ್ಮ ದೇವರ ಪೂಜೆಯನ್ನು ಮಾಡುತ್ತಿದ್ದಾರೆ. ಅವರು ವ್ರತಾಚರಣೆಯನ್ನು ಮಾಡುತ್ತಿದ್ದರೂ ಸಹ ಅವರ ಮುಖದಲ್ಲಿ ಸಂತೋಷವಿಲ್ಲ. ` ಬಾಂಗ್ಲಾದೇಶದ ಅಧಿಕಾರ ಬದಲಾವಣೆಯಾದ ನಂತರ ಅಲ್ಲಿಯ ಕಟ್ಟರವಾದಿಗಳಿಂದ ನಾವು ಬದುಕುವುದೂ ಸಹ ಕಠಿಣವಾಗುವುದು ಎಂಬ ಕಲ್ಪನೆ ಅಲ್ಲಿಯ ಹಿಂದೂಗಳಿಗೆ ಇರಲಿಲ್ಲ. ಕಟ್ಟರವಾದಿಗಳು ಎಲ್ಲವನ್ನೂ ನಾಶಪಡಿಸುತ್ತಾರೆಂದು ಹಿಂದೂಗಳಿಗೆ ಅನಿಸುತ್ತಿರಲಿಲ್ಲ. ಜನ್ಮಾಷ್ಟಮಿಯ ದಿನ ಬಾಂಗ್ಲಾದೇಶಿ ಹಿಂದೂಗಳ ವೇದನೆ ಅಧಿಕ ಪ್ರಮಾಣದಲ್ಲಿ ಹೊರಬಂದಿತು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಹೇಳಿದರು. ಅವರು ಶ್ರೀಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮಕ್ಕಾಗಿ ಮಥುರಾಗೆ ಬಂದಿದ್ದರು.
If we (Hindus) remain divided, we will be destroyed!
A significant statement by the #UttarPradsh Chief Minister #Yogi_Adityanath
Millions of Hindus in #Bangladesh may be observing #Janmashtami2024 fast, but there is no joy on their faces!
🔸#Hindus, how much more clearly can… pic.twitter.com/rDw89Rk6p1
— Sanatan Prabhat (@SanatanPrabhat) August 26, 2024
ಮುಖ್ಯಮಂತ್ರಿಗಳು ಮುಂದೆ ಮಾತನಾಡಿ !
1. ಹಿಂದೂಗಳೇ ಜಾತಿ-ಪಾತಿಯಲ್ಲಿ ಸಿಲುಕದೇ ಒಂದಾಗಿರಿ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ಅತ್ಯಾಚಾರವನ್ನುನೋಡಿದರೆ, ಭಾರತದಲ್ಲಿರುವ ಹಿಂದೂಗಳು ಜಾತಿ-ಪಾತಿಯ ಆಧಾರವಾಗಿ ಒಡೆಯುವ ಬದಲು ಒಗ್ಗಟ್ಟಿನಿಂದಿರಬೇಕು.
2. ವಿರೋಧಿಗಳಿಗೆ ಬಾಂಗ್ಲಾದೇಶದ ಹಿಂದೂಗಳ ಮೇಲಿನ ಅನ್ಯಾಯ ಕಂಡು ಬರುವುದಿಲ್ಲ
ಬಾಂಗ್ಲಾದೇಶದ ಘಟನೆಯ ಬಗ್ಗೆ ಎಲ್ಲರೂ ಮೌನವಾಗಿದ್ದಾರೆ, ಏಕೆಂದರೆ ` ನಾವು ಮಾತನಾಡಿದರೆ, ನಮ್ಮ ವೋಟ್ ಬ್ಯಾಂಕೆ ಕೈಜಾರಬಹುದು’ ಎಂದು ಅವರಿಗೆ ಭಯವೆನಿಸುತ್ತದೆ ಹಾಗಾಗಿ ಅವರು ಸುಮ್ಮನಿದ್ದಾರೆ.
3. ಪ್ಯಾಲೆಸ್ಟೈನ್ ಕಾಣಿಸುತ್ತದೆ; ಆದರೆ ಬಾಂಗ್ಲಾದೇಶವಲ್ಲ
ಜಗತ್ತಿನ ಇತರ ಸಮಸ್ಯೆಗಳ ಬಗ್ಗೆ ಮಾತನಾಡುವವರಿಗೆ `ಪ್ಯಾಲೆಸ್ಟೈನ್’ ಕಾಣಿಸುತ್ತದೆ, ಆದರೆ ಬಾಂಗ್ಲಾದೇಶ ಕಾಣಿಸುವುದಿಲ್ಲ. ಅವರು ಜಗತ್ತಿನ ಇತರ ಭಾಗಗಳನ್ನು ನೋಡುತ್ತಾರೆ, ಆದರೆ ಬಾಂಗ್ಲಾದೇಶದಲ್ಲಿ ಏನು ನಡೆಯುತ್ತಿದೆ ಅದನ್ನು ಅವರು ನೋಡುವುದಿಲ್ಲ.
ಸಂಪಾದಕೀಯ ನಿಲುವು
|