ಛತರಪುರ (ಮಧ್ಯಪ್ರದೇಶ) – ನಾವು ಎಲ್ಲರೂ ನಮ್ಮ ಹೆಸರಿನ ಮುಂದೆ ಜಾತಿಯ ಹೆಸರು ಬರೆಯುತ್ತೇವೆ. ಕೆಲವರು ಬ್ರಾಹ್ಮಣ, ಕೆಲವರು ಠಾಕೂರ್, ಕೆಲವರು ವೈಶ್ಯ, ಹಾಗೂ ಕೆಲವರು ಶೂದ್ರ, ಆದರೆ ನಾವು ನಮ್ಮ ಹೆಸರಿನ ಮುಂದೆ ‘ಹಿಂದೂ’ ಎಂದು ಬರೆಯಬೇಕು, ಆಗ ಇತರ ದೇಶದಿಂದ ಬರುವ ಜನರು ನಮ್ಮನ್ನು ಹಿಂದೂ ಧರ್ಮದವರೆಂದು ಗುರುತಿಸುವರು, ಎಂದು ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಕರೆ ನೀಡಿದರು.
ಮಾಡು ಇಲ್ಲವೇ ಮಡಿ ಸ್ಥಿತಿ
ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಮಾತು ಮುಂದುವರೆಸಿ, ಭಾರತದಲ್ಲಿನ ಜಾತಿವಾದದಿಂದ ಸಂಕಷ್ಟಗಳು ಬಹಳಷ್ಟು ಹೆಚ್ಚಾಗಿದೆ. ಮಾಡು ಇಲ್ಲವೇ ಮಡಿ ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಭಾರತವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುಬೇಕೆಂದರೆ ಭಾರತದಲ್ಲಿನ ಜಾತಿಯವಾದವನ್ನು ಮೊದಲು ಅಂತಗೊಳಿಸಬೇಕು.
ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ‘ಛತರಪುರದಿಂದ ಒರಛಾ’ ವರೆಗೆ ಹಿಂದೂ ಐಕ್ಯತೆ ಪಾದಯಾತ್ರೆ ನಡೆಸುವವರಿದ್ದಾರೆ. ಈ ಯಾತ್ರೆಗೆ ಪಾಲ್ಗೊಳ್ಳಲು ಬಯಸುವವರನ್ನು ಮೊಬೈಲ್ ಮೂಲಕ ನೋಂದಣಿ ಮಾಡಲಾಗುವುದೆಂದು ಘೋಷಿಸಲಾಗಿದೆ. ಈ ಯಾತ್ರೆಯ ಉದ್ದೇಶ ಹಿಂದೂ ಜನಾಂಗವನ್ನು ಜೋಡಿಸುವುದಾಗಿದೆ. ಇದರ ಮೂಲಕ ವಿದೇಶದಿಂದ ಬರುವ ಜನರು ಹಿಂದೂ ಜನಾಂಗದಲ್ಲಿನ ಜನರನ್ನು ಗುರುತಿಸ ಬಹುದು ಮತ್ತು ಭೇಟಿಯಾಗಬಹುದು, ಎಂದೂ ಕೂಡ ಅವರು ಹೇಳಿದರು.