ದೇವಸ್ಥಾನದ ಘಂಟೆಯ ಸದ್ದನ್ನು ಕಡಿಮೆ ಮಾಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ನೊಟೀಸ್

  • ನೋಯ್ಡಾ (ಉತ್ತರ ಪ್ರದೇಶ) ಗೌರ್ ಸೌಂದರ್ಯಮ್ ಸೊಸೈಟಿಯಲ್ಲಿನ ಘಟನೆ

  • ವಿರೋಧ ವ್ಯಕ್ತವಾದ ಬಳಿಕ ನೊಟೀಸ್ ಹಿಂಪಡೆದ ಮಂಡಳಿ

ನೋಯ್ಡಾ (ಉತ್ತರ ಪ್ರದೇಶ) – ನಗರದ ಸೊಸಾಯಟಿಯೊಂದರಲ್ಲಿನ ದೇವಸ್ಥಾನದ ಗಂಟೆಯ ಶಬ್ದ ದೊಡ್ಡದಾಗಿ ಕೇಳಿ ಬರುತ್ತಿದೆ ಎಂದು ಉತ್ತರಪ್ರದೇಶ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಸೊಸಾಯಟಿಗೆ ನೊಟೀಸು ಕಳುಹಿಸಿ ಶಬ್ದವನ್ನು ಕಡಿಮೆ ಮಾಡುವಂತೆ ಹೇಳಿತು. ಅದರಂತೆ ಸೊಸಾಯಟಿಯು ವಾಟ್ಸಅಪ್ ಮತ್ತು ಫಲಕಗಳ ಮೂಲಕ ಈ ಸೂಚನೆಯನ್ನು ಪ್ರಸಾರ ಮಾಡಿತ್ತು; ಆದರೆ ಇದರಿಂದ ಅಲ್ಲಿನ ಜನರು ಆಕ್ರೋಶಗೊಂಡರು ಮತ್ತು ಇದನ್ನು ವಿರೋಧಿಸಿದರು. ಮಾಲಿನ್ಯ ನಿಯಂತ್ರಣ ಮಂಡಳಿಯ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ಮಾಡಿದ ಬಳಿಕ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ನೊಟೀಸನ್ನು ಹಿಂಪಡೆಯಿತು. ಈ ಪ್ರಕರಣ ಗ್ರೇಟರ್ ನೋಯ್ಡಾ ಗೌರ್ ಸೌಂದರ್ಯಮ್ ಸೊಸಾಯಟಿಯಲ್ಲಿ ನಡೆದಿದ್ದು ಇಲ್ಲಿ `ಹರೇ ರಾಮಾ ಹರೇ ಕೃಷ್ಣಾ’ ದೇವಸ್ಥಾನವನ್ನು ನಿರ್ಮಿಸಲಾಗಿದೆ.

ದೇವಸ್ಥಾನದ ಗಂಟೆಯ ಶಬ್ದದ ಬಗ್ಗೆ ಬಂದ ದೂರಿನ ಬಳಿಕ ಮಾಲಿನ್ಯ ನಿಯಂತ್ರಣ ಮಂಡಳಿಯು ಗಂಟೆಯ ಸದ್ದನ್ನು ಪರಿಶೀಲನೆ ನಡೆಸಿದಾಗ, ಅದು 72 ಡೆಸಿಬಲ್ ಇರುವುದು ಬೆಳಕಿಗೆ ಬಂತು. ನಿಯಮಾನುಸಾರ 55 ಡೆಸಿಬಲ್ ಇರಬೇಕು. ಆ ನಂತರ ಮಂಡಳಿಯು ಈ ನೊಟೀಸ್ ಜಾರಿಗೊಳಿಸಿತ್ತು.

ಸಂಪಾದಕೀಯ ನಿಲುವು

ಶಬ್ದ ಮಾಲಿನ್ಯ ಎಲ್ಲಿಯೂ ಆಗಬಾರದು. ಒಂದು ವೇಳೆ ಎಲ್ಲಿಯಾದರೂ ನಡೆಯುತ್ತಿದ್ದರೆ, ಅದರ ವಿರುದ್ಧ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ಕೈಗೊಳ್ಳಬೇಕು; ಆದರೆ ಮಸೀದಿ ಬಿಟ್ಟು, ಕೇವಲ ದೇವಸ್ಥಾನಗಳ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುತ್ತಿದ್ದರೆ ಅದು ಅನ್ಯಾಯವಾಗಿದೆ!