ಕಾಮುಕ ಮುಸಲ್ಮಾನ!
ಚಂಡೀಗಢ (ಹರಿಯಾಣ) – ದೇಶದಲ್ಲಿ ಸದ್ಯ ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣಗಳಲ್ಲಿ ಭಾರೀ ಹೆಚ್ಚಳವಾಗಿದೆ. ಕೆಲ ದಿನಗಳ ಹಿಂದೆ ಕೋಲಕಾತಾದಲ್ಲಿ ಓರ್ವ ಮಹಿಳಾ ವೈದ್ಯೆಯ ಮೇಲೆ ಬಲಾತ್ಕಾರದ ಘಟನೆ ನಡೆದಿತ್ತು. ತದನಂತರ ಮಹಾರಾಷ್ಟ್ರದ ಬದಲಾಪುರದಲ್ಲಿಯೂ 2 ಚಿಕ್ಕ ಬಾಲಕಿಯರ ಮೇಲೆ ಲೈಂಗಿಕ ಅತ್ಯಾಚಾರದ ಪ್ರಕರಣವು ಬೆಳಕಿಗೆ ಬಂದಿತ್ತು. ತದನಂತರ ಈಗ ಚಂಡೀಗಢದಲ್ಲಿ 12 ನೇ ತರಗತಿಯಲ್ಲಿ ಕಲಿಯುತ್ತಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ಶಾಲೆಯ ಬಸ್ ಚಾಲಕನು ಬಲಾತ್ಕಾರ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಬಸ್ ಚಾಲಕ ಮಹಮ್ಮದ್ ರಜಾಕನನ್ನು ಚಂಡೀಗಢ ಪೊಲೀಸರು ಬಂಧಿಸಿದ್ದಾರೆ.
1. ಸಂತ್ರಸ್ತ ವಿದ್ಯಾರ್ಥಿನಿ ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ ಆರೋಪಿ ಕಳೆದ ಕೆಲ ತಿಂಗಳುಗಳಿಂದ ಆಕೆಯ ಜತೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿದ್ದನು. ಅವನು ಅವಳ ಛಾಯಾಚಿತ್ರವನ್ನು ಎಡಿಟ್ ಮಾಡಿ ಅವಳನ್ನು ಬೆದರಿಸಲು ಪ್ರಯತ್ನಿಸಿದನು.
2. ಮೇ18 ರಂದು ರಜಾಕನು ವಿದ್ಯಾರ್ಥಿನಿಯ ಮನೆಗೆ ಆಕೆಯ ಪೋಷಕರು ಇಲ್ಲದಿರುವ ಸಮಯದಲ್ಲಿ ಪ್ರವೇಶಿಸಿದನು. ಆಕೆಯ ಮಾರ್ಫ್ ಮಾಡಿದ ಛಾಯಾಚಿತ್ರಗಳನ್ನು ಸಾರ್ವಜನಿಕಗೊಳಿಸುವ ಬೆದರಿಕೆ ಹಾಕಿ, ಅವಳ ಮೇಲೆ ಬಲಾತ್ಕಾರ ಮಾಡಿದನು. ತದನಂತರ ಜುಲೈ 6 ಮತ್ತು ಜುಲೈ 26 ಹೀಗೆ 2 ಸಲ ಅವಳ ಮೇಲೆ ಪುನಃ ಬಲಾತ್ಕಾರ ಮಾಡಿದನು.
3. ಕೊನೆಗೆ ಹೆದರಿದ ಹುಡುಗಿಯು ತನ್ನ ಪೋಷಕರಿಗೆ ಈ ಸಂಪೂರ್ಣ ಪ್ರಕರಣದ ಮಾಹಿತಿಯನ್ನು ನೀಡಿದಳು. ತದನಂತರ ಪೋಷಕರು ಆರೋಪಿಯ ವಿರುದ್ಧ ಪೊಲೀಸರು ದೂರು ದಾಖಲಿಸಿದರು. ಪೊಲೀಸರು ಆರೋಪಿಯ ವಿರುದ್ಧ `ಪೋಕ್ಸೋ’ ಕಾಯ್ದೆಯಡಿ ಅಪರಾಧ ದಾಖಲಿಸಿ, ಅವನನ್ನು ಬಂಧಿಸಿದ್ದಾರೆ.