ದೇಶದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ ಉಗ್ರರು
ನವದೆಹಲಿ – ದೆಹಲಿ ಪೋಲೀಸರ ವಿಶೇಷ ಶಾಖೆಯು ಜಿಹಾದಿ ಭಯೋತ್ಪಾದಕ ಸಂಘಟನೆ ‘ಅಲ್-ಖೈದಾ’ದ ಸ್ಥಳೀಯ ಭಯೋತ್ಪಾದಕ ಗುಂಪನ್ನು (‘ಮಾಡ್ಯೂಲ್’) ಭೇದಿಸಿದೆ. ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಜಾರ್ಖಂಡ್ ರಾಜ್ಯಗಳ ಪೊಲೀಸರ ಸಹಕಾರದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಈ ‘ಮಾಡ್ಯೂಲ್’ನ 14 ಜನರನ್ನು ಬಂಧಿಸಲಾಗಿದೆ. ಈ ಮಾಡ್ಯೂಲ್ ನ ನೇತ್ರತ್ವವನ್ನು ರಾಂಚಿಯ ನಿವಾಸಿ ಡಾ. ಇಶ್ತಿಯಾಕ್ ಮಾಡುತ್ತಿದ್ದ. ಈ ಮಾಡ್ಯೂಲ್ ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸುವ ಸಂಚು ರೂಪಿಸಿತ್ತು.
ಈ ಮಾಡ್ಯೂಲ್‌ನ ಸದಸ್ಯರಿಗೆ ವಿವಿಧ ಸ್ಥಳಗಳಲ್ಲಿ ಶಸ್ತ್ರಾಸ್ತ್ರಗಳ ಬಳಕೆಯಲ್ಲಿ ತರಬೇತಿ ನೀಡಲಾಗುತ್ತಿತ್ತು. ಭಿವಡಿ, ರಾಜಸ್ಥಾನದಿಂದ ಶಸ್ತ್ರಾಸ್ತ್ರ ತರಬೇತಿ ಪಡೆಯುತ್ತಿದ್ದ 6 ಜನರನ್ನು ಬಂಧಿಸಲಾಗಿದೆ. ಹಾಗೆಯೇ ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ನಲ್ಲಿ 8 ಜನರನ್ನು ಬಂಧಿಸಲಾಗಿದೆ. ಸದ್ಯ ವಿವಿಧ ಸ್ಥಳಗಳಲ್ಲಿ ತನಿಖೆ ನಡೆಯುತ್ತಿದ್ದು, ಇನ್ನೂ ಕೆಲವು ಜನರನ್ನು ಬಂಧಿಸುವ ಸಾಧ್ಯತೆ ಇದೆ. ಅನೇಕ ಸ್ಥಳಗಳಿಂದ ಶಸ್ತ್ರಾಸ್ತ್ರ, ಮದ್ದುಗುಂಡು ಇತ್ಯಾದಿ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಂಪಾದಕೀಯ ನಿಲುವುಎಲ್ಲಿಯವರೆಗೆ ಜಿಹಾದಿ ಭಯೋತ್ಪಾದಕರನ್ನು ತ್ವರಿತ ಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಗಲ್ಲಿಗೇರಿಸುವುದಿಲ್ಲವೋ ಅಲ್ಲಿಯವರೆಗೆ ದೇಶದಲ್ಲಿ ಜಿಹಾದಿ ಭಯೋತ್ಪಾದನೆ ಕೊನೆಗೊಳ್ಳುವುದಿಲ್ಲ ! |