28 Crore International Refugees: ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ, ಸರಿಸುಮಾರು 28 ಕೋಟಿ ಜನರು ಅಂತರಾಷ್ಟ್ರೀಯ ನಿರಾಶ್ರಿತರು !

ನವದೆಹಲಿ – ‘ಪ್ಯೂ ರೀಸರ್ಚ್ ಸೆಂಟರ್’ನ ವರದಿಯ ಪ್ರಕಾರ, ವಿಶ್ವದ ಜನಸಂಖ್ಯೆಯ  ಸರಿಸುಮಾರು 28 ಕೋಟಿ ಜನರು ಅಂತರರಾಷ್ಟ್ರೀಯ ನಿರಾಶ್ರಿತರಾಗಿದ್ದಾರೆ. ಈ ಅಂಕಿ ಅಂಶವು ಒಟ್ಟು ವಿಶ್ವ ಜನಸಂಖ್ಯೆಯ ಶೇಕಡಾ 3.6 ರಷ್ಟಿದೆ. ‘ಯುದ್ಧ, ಆರ್ಥಿಕ ಬಿಕ್ಕಟ್ಟು ಮತ್ತು ನೈಸರ್ಗಿಕ ವಿಕೋಪಗಳು ಇದಕ್ಕೆ ಮೂರು ಪ್ರಮುಖ ಕಾರಣಗಳಾಗಿವೆ.

1. ಧರ್ಮದ ಆಧಾರವಾಗಿ ನೋಡಿದರೆ, ಸ್ವ ದೇಶವನ್ನು ತೊರೆದ ಈ 28 ಕೋಟಿ ಜನರಲ್ಲಿ 47% ರಷ್ಟು ಜನರು ಕ್ರೈಸ್ತರಾಗಿದ್ದಾರೆ. 29% ರಷ್ಟು ಮುಸ್ಲಿಮರು ಮತ್ತು 5% ರಷ್ಟು ಹಿಂದೂಗಳು ನಿರಾಶ್ರಿತರಾಗಿದ್ದಾರೆ.

2. ಹೆಚ್ಚಿನ ಸಂಖ್ಯೆಯ ಕ್ರೈಸ್ತರು ಮೆಕ್ಸಿಕೋದಿಂದ ಅಮೆರಿಕಕ್ಕೆ ಉದ್ಯೋಗಕ್ಕಾಗಿ ವಲಸೆ ಹೋಗಿ ಅಲ್ಲೇ ನೆಲೆಸುತ್ತಾರೆ. ಗೃಹಯುದ್ಧದ ಭೀಕರತೆಯನ್ನು ಎದುರಿಸುತ್ತಿರುವ ಸಿರಿಯಾದಿಂದ ಮುಸ್ಲಿಮರ ದೊಡ್ಡ ವಲಸೆಯಾಗಿದೆ. ವಲಸೆ ಜೀವನದ ಕಷ್ಟದಿಂದ ಪಾರಾಗಲು ಮುಸ್ಲಿಮರು ಸೌದಿ ಅರೇಬಿಯಾಗೆ ಹೋಗುತ್ತಾರೆ.

3. ಹೆಚ್ಚಿನ ಹಿಂದೂಗಳು ಉದ್ಯೋಗವನ್ನು ಹುಡುಕಿಕೊಂಡು ಭಾರತದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವಲಸೆ ಹೋಗುತ್ತಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹಿಂದೂಗಳು ಅಮೇರಿಕಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಹೆಚ್ಚು ವಲಸೆ ಹೋಗುತ್ತಾರೆ.

4. ಈ 28 ಕೋಟಿ ಅಂತಾರಾಷ್ಟ್ರೀಯ ವಲಸಿಗರ ಪೈಕಿ ಹಿಂದೂಗಳ ಸಂಖ್ಯೆ 1 ಕೋಟಿ 35 ಲಕ್ಷವಾಗಿದೆ. ಇವರಲ್ಲಿ 30 ಲಕ್ಷ (22%) ಜನರು ಭಾರತದಲ್ಲಿ, 26 ಲಕ್ಷ (19%) ಅಮೆರಿಕಾ ಹಾಗೂ 8% ರಷ್ಟು ವಲಸಿಗರು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನೆಲೆಸಿದ್ದಾರೆ.

5. ಹಿಂದೂ ವಲಸಿಗರ ಮೂಲ ಜನ್ಮಸ್ಥಳದ ಅಂಕಿ ಅಂಶಗಳನ್ನು ನೋಡಿದರೆ, ಭಾರತದಿಂದ 76 ಲಕ್ಷ (57%), ಬಾಂಗ್ಲಾದೇಶದಿಂದ 16 ಲಕ್ಷ (12%) ಮತ್ತು ನೇಪಾಳದಿಂದ 15 ಲಕ್ಷ (11%) ಜನರಿರುವುದು ವರದಿಯಾಗಿದೆ.

6. ‘ಪ್ಯೂ ರೀಸರ್ಚ್’ನ ವರದಿಯ ಪ್ರಕಾರ, ವಲಸೆಗಾಗಿ ಹಿಂದೂಗಳು ಅತಿ ಹೆಚ್ಚು ದೂರ ಪ್ರಯಾಣಿಸುತ್ತಾರೆ; ಏಕೆಂದರೆ ಭಾರತದಲ್ಲಿನ ಆಂತರಿಕ ಬದಲಾವಣೆಗಾಗಿ, ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ನೆಲೆಸಲು ಅಮೆರಿಕ ಮತ್ತು ಬ್ರಿಟನ್‌ನಂತಹ ದೇಶಗಳತ್ತ ಮುಖ ಮಾಡುತ್ತಾರೆ. ಸರಾಸರಿಯಾಗಿ, ಅವರು ಬೇರೆ ದೇಶದಲ್ಲಿ ನೆಲೆಸಲು 4 ಸಾವಿರದ 989 ಕಿ.ಮೀ. ಪ್ರಯಾಣ ಮಾಡುತ್ತಾರೆ.

7. ಹೆಚ್ಚಿನದಾಗಿ, ಅಂದರೆ ಶೇಕಡಾ 44 ರಷ್ಟು ಹಿಂದೂ ವಲಸಿಗರು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅನುಕ್ರಮವಾಗಿ ಮಧ್ಯಪ್ರಾಚ್ಯ-ಉತ್ತರ ಆಫ್ರಿಕಾ ಪ್ರದೇಶದಲ್ಲಿ (24%) ಮತ್ತು ಉತ್ತರ ಅಮೆರಿಕಾದಲ್ಲಿ (22%) ವಲಸಿಗರು ನೆಲೆಸುತ್ತಿದ್ದಾರೆ. ಅಂದಾಜು 8% ಹಿಂದೂ ವಲಸಿಗರು ಯುರೋಪ್ ಮತ್ತು ದಕ್ಷಿಣ ಅಮೆರಿಕಾದಲ್ಲಿದ್ದರೆ ಉಪ-ಸಹಾರಾ ಆಫ್ರಿಕಾದಲ್ಲಿ ವಾಸಿಸುತ್ತಿರುವ ಹಿಂದೂಗಳ ಸಂಖ್ಯೆ ಬಹಳ ಕಡಿಮೆ ಇದೆ.

8. ವಿಶ್ವದ ಜನಸಂಖ್ಯೆಯ 30%ರಷ್ಟು ಜನರು ಕ್ರೈಸ್ತರಾಗಿದ್ದಾರೆ. 25%ರಷ್ಟು ಮುಸ್ಲಿಮರು ಮತ್ತು 15%ರಷ್ಟು ಹಿಂದೂಗಳಿದ್ದಾರೆ. 23%ರಷ್ಟು ಜನರು ಯಾವುದೇ ಧರ್ಮವನ್ನು ನಂಬುವುದಿಲ್ಲ. ವಲಸಿಗರ ದೃಷ್ಟಿಕೋನದಿಂದ ಧರ್ಮೇತರರನ್ನು ನೋಡಿದರೆ, ಈ ಜನಸಂಖ್ಯೆಯು 13%ರಷ್ಟಿದೆ. ಇವರಲ್ಲಿ ಹೆಚ್ಚಿನವರು ಚೀನಾದಿಂದ ಬಂದವರಾಗಿದ್ದು ಅವರು ಅಮೆರಿಕದಲ್ಲಿ ನೆಲೆಸಿದ್ದಾರೆ ಎಂದು ವರದಿ ಹೇಳಿದೆ.