ಡಾ. ದಾಭೋಲ್ಕರ್ ಮತ್ತು ಪನ್ಸಾರೆ ಹತ್ಯೆ ಪ್ರಕರಣಗಳಲ್ಲಿ ಸನಾತನ ಸಂಸ್ಥೆಯನ್ನು ಸಿಲುಕಿಸಲು ಅಂನಿಸ ಮತ್ತು ನಕ್ಸಲೀಯರ ಸಂಚು ! – ಸನಾತನ ಸಂಸ್ಥೆ

ಸನಾತನ ಸಂಸ್ಥೆಯ ವತಿಯಿಂದ ದಾದರ್ (ಮುಂಬಯಿ) ಮತ್ತು ಪುಣೆಯಲ್ಲಿ ‘ಅಂಧಶ್ರದ್ಧಾ ನಿರ್ಮೂಲನ ಕಿ ಛುಪಾ ಅರ್ಬನ್ ನಕ್ಸಲ್‌ವಾದ ?’ (ಅಂಧಶ್ರದ್ಧಾ ನಿರ್ಮೂಲನೆಯೋ ತೆರೆಮರೆಯ ನಗರ ನಕ್ಸಲರೋ) ಎಂಬ ವಿಷಯದ ಕುರಿತು ವಿಶೇಷ ಕಾರ್ಯಕ್ರಮ !

ಮುಂಬಯಿ, ಆಗಸ್ಟ್ 20 (ಸುದ್ದಿ.) – ಸನಾತನ ಧರ್ಮವನ್ನು ನಾಶಪಡಿಸಲು ನಗರ ನಕ್ಸಲೀಯರಿಂದ ನಿರಂತರವಾಗಿ ಷಡ್ಯಂತ್ರಗಳು ನಡೆಯುತ್ತಿವೆ. ಡಾ. ನರೇಂದ್ರ ದಾಭೋಲ್ಕರ್, ಕಾಂ. ಗೋವಿಂದ್ ಪನ್ಸಾರೆ ಮತ್ತು ಇತರ ಪ್ರಗತಿಪರರ ಹತ್ಯೆಯಲ್ಲಿ ಸನಾತನ ಸಂಸ್ಥೆಯನ್ನು ತಪ್ಪಿತಸ್ಥರನ್ನಾಗಿ ಮಾಡಲು ಅಂಧಶ್ರದ್ಧ ನಿರ್ಮೂಲನ ಸಮಿತಿ ಮತ್ತು ನಗರ ನಕ್ಸಲೀಯರು ಸಂಚು ರೂಪಿಸಿದ್ದರು. ಈ ಸಂಚು ವಿಫಲವಾಗಿದೆ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕ ಶ್ರೀ. ಅಭಯ ವರ್ತಕ ಅವರು ಹೇಳಿದ್ದಾರೆ. ಸನಾತನ ಸಂಸ್ಥೆಯ ವತಿಯಿಂದ ಆಗಸ್ಟ್ 20 ರಂದು ದಾದರ್ (ಪಶ್ಚಿಮ)ದ ಕಿತ್ತೆ ಭಂಡಾರಿ ಸಭಾಂಗಣದಲ್ಲಿ ‘ಅಂಧಶ್ರದ್ಧಾ ನಿರ್ಮೂಲನ ಕಿ ಛುಪಾ ಅರ್ಬನ್ ನಕ್ಸಲ್‌ವಾದ ?’ ಎಂಬ ವಿಷಯದ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಮುಂಬಯಿ ಹೈಕೋರ್ಟ್ ವಕೀಲ ಸಂಜೀವ ಪುನಾಳೆಕರ್ ಮತ್ತು ಖ್ಯಾತ ಶಸ್ತ್ರಚಿಕಿತ್ಸಕ ಡಾ. ಅಮಿತ್ ಥಢಾನಿ ಇವರೂ ಕೂಡ ಸಭಿಕರನ್ನುದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ವಕೀಲರು, ಪತ್ರಕರ್ತರು, ಉದ್ಯಮಿಗಳು ಮುಂತಾದ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

ಪುಣೆಯಲ್ಲೂ ಇದೇ ರೀತಿಯ ಕಾರ್ಯಕ್ರಮ ನಡೆಯಿತು. ಈ ವೇಳೆ ‘ಅಸತ್ಯಮೇವ ಜಯತೇ’ ಪುಸ್ತಕದ ಲೇಖಕರಾದ ಶ್ರೀ. ಅಭಿಜಿತ ಜೋಗ ಮತ್ತು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಇವರು ಸಭಿಕರನ್ನುದ್ದೇಶಿಸಿ ಮಾತನಾಡಿದರು.

ಮುಂಬಯಿನಲ್ಲಿ ಮಾತನಾಡಿದ ಶ್ರೀ. ಅಭಯ ವರ್ತಕ್ ಇವರು, ”ಡಾ. ದಾಭೋಲ್ಕರ್ ಮತ್ತು ಪನ್ಸರೆ ಹತ್ಯೆ ಪ್ರಕರಣಗಳಲ್ಲಿ ಸನಾತನ ಸಂಸ್ಥೆಯನ್ನು ತಪ್ಪಿತಸ್ಥರನ್ನಾಗಿ ಮಾಡಿ ‘ಬಲಿಪಶು’ ಮಾಡುವ ಪ್ರಯತ್ನ ನಡೆದಿದೆ. ಡಾ. ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ನ್ಯಾಯಾಲಯವು ಹಿಂದೂ ಜನಜಾಗೃತಿ ಸಮಿತಿಯ ಡಾ. ವೀರೇಂದ್ರಸಿಂಹ ತಾವಡೆ, ಸನಾತನ ಸಂಸ್ಥೆಯ ಸಾಧಕ ಶ್ರೀ. ವಿಕ್ರಂ ಭಾವೆ ಮತ್ತು ಹಿಂದೂ ವಿಧಿಜ್ಞ ಪರಿಷತ್ತಿನ ವಕೀಲರಾದ ಸಂಜೀವ ಪುನಾಳೆಕರ್ ಅವರನ್ನು ಖುಲಾಸೆಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಡಾ. ವೀರೇಂದ್ರ ಸಿಂಗ್ ತಾವಡೆ 8 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಯಿತು. ಇದರಿಂದ ಅವರಿಗೆ ಅನ್ಯಾಯವಾಗಿದೆ. ಡಾ. ತಾವಡೆಯ ವಿರುದ್ಧ ಕೇಂದ್ರ ತನಿಖಾ ದಳದವರು ನಿಖರವಾದ ಸಾಕ್ಷ್ಯವನ್ನು ನೀಡಲು ಸಾಧ್ಯವಾಗಿಲ್ಲ. ಅದರ ನಂತರ, ಡಾ. ತಾವಡೆ ಇವರನ್ನು ಇನ್ನೊಂದು ಪ್ರಕರಣದಲ್ಲಿ ಜಾಮೀನು ಸಿಗದಿರುವುದು ಅನ್ಯಾಯವಾಗಿದೆ. ಶ್ರೀ. ವಿಕ್ರಮ ಭಾವೆ 2 ವರ್ಷ ಮತ್ತು ವಕೀಲ ಸಂಜೀವ ಪುನಾಳೆಕರ್ 42 ದಿನ ಜೈಲಿನಲ್ಲಿ ಇರಬೇಕಾಯಿತು. ಈ ಮೂವರ ವೈಯಕ್ತಿಕ ನಷ್ಟವನ್ನು ಯಾರು ತುಂಬುತ್ತಾರೆ ?’ ಎಂದು ಹೇಳಿದರು.

ನಾಸ್ತಿಕರ ಪ್ರಸಾರ ಆಂದೋಲನವು ರಾಷ್ಟ್ರ ಮತ್ತು ಧರ್ಮ ವಿರೋಧಿ !

ಆಗಸ್ಟ್ 11, 2012 ರಂದು ಮುಂಬಯಿಯ ಆಜಾದ್ ಮೈದಾನದಲ್ಲಿ ಪೊಲೀಸರ ಮತ್ತು ಪತ್ರಕರ್ತರ ಮೇಲೆ ಮತಾಂಧರು ಹಲ್ಲೆ ನಡೆಸಿದ್ದರು. ಮಹಿಳಾ ಪೊಲೀಸರ ಮೇಲೆ ಅತ್ಯಾಚಾರ ಮಾಡಲಾಯಿತು. ಈ ಪ್ರಕರಣದ ಅಪರಾಧಿಗಳಿಗೆ ಇನ್ನೂ ಶಿಕ್ಷೆಯಾಗಿಲ್ಲ. ತಥಾಕಥಿತ ಹಿಂದುತ್ವನಿಷ್ಠರ ವಿರುದ್ಧ ‘ಹೇಟ ಸ್ಪೀಚ್’ (ದ್ವೇಷ ಭಾಷಣ) ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರ ಹಿಂದೆ ಅರ್ಬನ್ ನಕ್ಸಲೀಯರೂ ತೀವ್ರವಾಗಿ ಕೆಲಸ ಮಾಡುತ್ತಿದ್ದಾರೆ. ನಾಸ್ತಿಕರ ಹೆಸರಿನಲ್ಲಿ ಅಂಧಶ್ರದ್ಧಾ ನಿರ್ಮೂಲನ ಹೆಸರಿನಲ್ಲಿ ನಡೆಯುತ್ತಿರುವ ನಾಸ್ತಿಕರ ಪ್ರಸಾರದ ಚಳುವಳಿಯು ಕೇವಲ ಧರ್ಮವಿರೋಧಿ ಹಾಗೂ ರಾಷ್ಟ್ರವಿರೋಧಿಯಾಗಿದೆ ಎಂದು ಶ್ರೀ. ಅಭಯ ವರ್ತಕ್ ಹೇಳಿದರು.