Kolkata Doctor Murder Case : ಮಹಿಳಾ ವೈದ್ಯೆಯ ಕೊಲೆ ಹಿಂದೆ ಮಾನವ ಕಳ್ಳಸಾಗಣೆ ಸಾಧ್ಯತೆ !

  • ಕೊಲಕಾತಾ : ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ

  • ಮಹಿಳಾ ವೈದ್ಯೆಗೆ ಈ ಕಳ್ಳಸಾಗಣೆ ಸುಳಿವು ಸಿಕ್ಕಿದ್ದು, ಈ ಮಾಹಿತಿ ಬಹಿರಂಗ ಪಡಿಸಬಹುದೆಂಬ ಭಯದಿಂದ ಕೊಲೆ !

  • ಸಹ ಪ್ರಶಿಕ್ಷಣಾರ್ಥಿ ವಿದ್ಯಾರ್ಥಿಗಳ ತನಿಖೆಯಲ್ಲಿ ಮಾಹಿತಿ ಬಹಿರಂಗ !

ಕೊಲಕಾತಾ (ಬಂಗಾಳ) – ಆರ್.ಜಿ. ಕರ್ ಮೆಡಿಕಲ್ ಕಾಲೇಜಿನಲ್ಲಿ ತರಬೇತಿ ನಿರತ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಹಿಂದೆ ಮಾನವ ಕಳ್ಳಸಾಗಣೆ ಎಂಬ ಮಾಹಿತಿ ಬೆಳಕಿಗೆ ಬರುತ್ತಿದೆ. ಆಸ್ಪತ್ರೆಯಲ್ಲಿ ಮನುಷ್ಯರ ಅಂಗಾಂಗಗಳ ಕಳ್ಳಸಾಗಣೆ ನಡೆಯುತ್ತದೆ ಎಂಬುದು ಮೃತ ಮಹಿಳಾ ವೈದ್ಯೆಗೆ ಗೊತ್ತಾಗಿತ್ತು. ಆಕೆ ಈ ಅಂಶವನ್ನು ಬಹಿರಂಗ ಪಡಿಸಬಹುದು ಎಂಬ ಭಯದಿಂದ ಈ ಕೊಲೆ ಮಾಡಲಾಗಿದೆ ಎಂದು ಮೃತ ಮಹಿಳಾ ವೈದ್ಯೆಯೊಂದಿಗೆ ಓದುತ್ತಿದ್ದ ಕೆಲವು ವಿದ್ಯಾರ್ಥಿಗಳು ಸಿಬಿಐಗೆ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ 19 ಮಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಆಸ್ಪತ್ರೆಯಿಂದ ಮಾನವ ಅಂಗಾಗಳ ಕಳ್ಳಸಾಗಣೆ ಜಾಲವಿದೆ ಎಂದು ವರದಿ ಮಾಡಿದ್ದಾರೆ.

ಅಕ್ರಮ ಕಳ್ಳಸಾಗಣೆ ಈ ಆಸ್ಪತ್ರೆಯಲ್ಲಿ ಸಾಮಾನ್ಯವೆಂದು ತೋರಿಸುವ ಸಲುವಾಗಿ ಯುವ ವೈದ್ಯೆಯ ಮೇಲೆ ಅತ್ಯಾಚಾರವೆಸಗಲಾಯಿತು. ಮೆಡಿಕಲ್ ಕಾಲೇಜಿನಲ್ಲಿ ಸೆಕ್ಸ್ ಮತ್ತು ಡ್ರಗ್ ಹಗರಣಗಳು ನಡೆದಿರುವ ಆರೋಪಗಳು ಈ ಹಿಂದೆಯೂ ಕೇಳಿಬಂದಿತ್ತು. 2001ರ ಆಗಸ್ಟ್‌ನಲ್ಲಿ ಈ ಕಾಲೇಜಿನಲ್ಲಿ ಸೌಮಿತ್ರ ವಿಶ್ವಾಸ್ ಎಂಬ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಆತ ಆತ್ಮಹತ್ಯೆ ಮಾಡಿಕೊಂಡಿದ್ದ. ಆ ಘಟನೆಯ ಎಳೆಗಳೂ ಈಗಿನ ಘಟನೆಗೂ ಸಂಬಂಧಿಸಿವೆ.

ಸಿಬಿಐ ಮೂಲಗಳ ಪ್ರಕಾರ, ತನಿಖೆಯಲ್ಲಿ ಕಾಲೇಜಿನ 4 ಜನರ ಹೆಸರುಗಳು ಬಂದಿವೆ. ಅವರಲ್ಲಿ ಮೂವರು ವೈದ್ಯರು ಮತ್ತು ಒಬ್ಬರು ಉದ್ಯೋಗಿಯಾಗಿದ್ದಾರೆ. ಈ ನಾಲ್ವರೂ ಒಂದು ರಾಜಕೀಯ ಪಕ್ಷಕ್ಕೆ ಸೇರಿದವರಾಗಿದ್ದು ಆಸ್ಪತ್ರೆಯಲ್ಲಿ ಲೈಂಗಿಕತೆ ಮತ್ತು ಮಾದಕ ವಸ್ತುಗಳ ಜಾಲವನ್ನು ಅವರು ನಿರ್ಮಿಸುತ್ತಿದ್ದರು.

ಸಂಪಾದಕೀಯ ನಿಲುವು

ಮೆಡಿಕಲ್ ಕಾಲೇಜಿನಲ್ಲಿ ಇಂತಹ ಕೃತ್ಯಗಳು ನಡೆಯುತ್ತಿವೆ ಎಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿದಿದ್ದರೆ ಅವರು ಪೊಲೀಸರಿಗೆ ಅಥವಾ ಸರಕಾರಕ್ಕೆ ಮೊದಲೇ ತಿಳಿಸಲಿಲ್ಲ ಏಕೆ ?