Bangladesh Hindu Woman Rape : ಜೀವ ಭಯದಿಂದ ಹಿಂದೂ ಮಹಿಳೆ ಸಾಮೂಹಿಕ ಬಲತ್ಕಾರ ನಡೆದಿರುವ ಬಗ್ಗೆ ಪೊಲೀಸರಲ್ಲಿ ದೂರು ನೀಡಿರಲಿಲ್ಲ !

ಸಾತಖಿಡಾ (ಬಾಂಗ್ಲಾದೇಶ) ಇಲ್ಲಿಯ ಘಟನೆ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿನ ಸಾತಖಿಡಾ ಜಿಲ್ಲೆಯಲ್ಲಿ ಆಗಸ್ಟ್ ೫ ರಂದು ತಾಲಾ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಮತಾಂಧ ಮುಸಲ್ಮಾನರಿಂದ ಓರ್ವ ಹಿಂದೂ ಮಹಿಳೆಯ ಮೇಲೆ ಸಾಮೂಹಿಕ ಬಲತ್ಕಾರ ನಡೆದಿತ್ತು. ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರ ಮಾನವ ಹಕ್ಕುಗಳಿಗಾಗಿ ಹೋರಾಡುವ ‘ಬಾಂಗ್ಲಾದೇಶ ಮೈನಾರಿಟಿ ವಾಚ್’ನ ಅಧ್ಯಕ್ಷ ಪೂ. (ನ್ಯಾಯವಾದಿ) ರವೀಂದ್ರ ಘೋಷ್ ಇವರು ಈ ಘಟನೆಯ ಮಾಹಿತಿ ನೀಡಿದರು. ಅವರು ಸ್ಥಳೀಯ ಪೊಲೀಸ ಅಧಿಕಾರಿಗಳಿಗೆ ಈ ವಿಷಯದ ಮಾಹಿತಿ ನೀಡುತ್ತಾ ಘಟನೆಯ ಸಂದರ್ಭದಲ್ಲಿ ದೂರು ದಾಖಲಿಸಲಾಗಿದೆಯಾ? ಎಂದು ವಿಚಾರಿಸಿದಾಗ ಇಲ್ಲಿ ಇಂತಹ ಘಟನೆಯ ದೂರು ದಾಖಲಾಗಿಲ್ಲ ಎಂದು ಪೊಲೀಸ ಅಧಿಕಾರಿ ಹೇಳಿದರು. ಸ್ಥಳೀಯ ದೈನಿಕ ‘ಕಾಲಬೇಲಾ’ದಲ್ಲಿ ಈ ಸತ್ಯ ಘಟನೆಯ ವಾರ್ತೆ ಪ್ರಕಟಿಸಲಾಗಿತ್ತು. ‘ಬಲಾತ್ಕಾರಿಗಳ ಭಯದಿಂದ ಸಂತ್ರಸ್ತ ಮಹಿಳೆಯು ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ, ಎಂದು ‘ಬಾಂಗ್ಲಾದೇಶದ ಮೈನಾರಿಟಿ ವಾಚ್’ ಇಂದ ‘ಸನಾತನ ಪ್ರಭಾತ’ದ ಪ್ರತಿನಿಧಿಗೆ ಮಾಹಿತಿ ನೀಡಿದ್ದಾರೆ.

  • ಪಟುವಾಖಾಲಿ ಜಿಲ್ಲೆಯಲ್ಲಿನ ಒಂದು ಘಟನೆಯಲ್ಲಿ ಅಸೀಮ ದಾಸ ಇವರನ್ನು ಮನೆಯಿಂದ ಹೊರಗೆ ಹಾಕಿ ಮನೆಗೆ ಬೆಂಕಿ ಇಟ್ಟರು !

  • ಪೊಲೀಸರ ಬಳಿ ದೂರು ನೀಡದೆ ಜೀವ ಭಯದಿಂದ ದಾಸ ಇವರು ಬೇರೆ ಗ್ರಾಮಕ್ಕೆ ಓಡಿ ಹೋಗಿದ್ದಾರೆ !

ಪೂ. (ನ್ಯಾಯವಾದಿ) ರವೀಂದ್ರ ಘೋಷ್

ಬಾಂಗ್ಲಾದೇಶದಲ್ಲಿ ಘಟಿಸಿರುವ ಎರಡನೆಯ ಘಟನೆಯಲ್ಲಿ ಪಟುವಾಖಾಲಿ ಜಿಲ್ಲೆಯಲ್ಲಿನ ಅಸೀಮ ದಾಸ ಇವರ ಕುಟುಂಬದವರನ್ನು ಮನೆಯ ಹೊರಗೆ ಹಾಕಿ ಅವರ ಮನೆಗೆ ಬೆಂಕಿ ಹಚ್ಚಲಾಗಿತ್ತು. ಈ ಘಟನೆ ಆಗಸ್ಟ್ ೬ ರಂದು ನಡೆದಿದೆ. ಪೂ. (ನ್ಯಾಯವಾದಿ) ರವೀಂದ್ರ ಘೋಷ್ ಇವರು ಈ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬದವರಲ್ಲಿನ ಪ್ರೀತಮ ಸಾಹಾ ಇವರನ್ನು ಸಂಪರ್ಕಿಸಿದಾಗ ಅವರು ಕಣ್ಣೀರು ಹಾಕಿದರು ಮತ್ತು ಜೀವ ಭಯದಿಂದ ದೂರ ಓಡಿ ಹೋಗಿರುವ ಬಗ್ಗೆ ಅವರಿಗೆ ತಿಳಿಸಿದರು. ಪೂ. ಘೋಷ ಇವರು ಪಟುವಾಖಾಲಿಯ ಪೊಲೀಸ್ ಅಧಿಕಾರಿಗೆ ಈ ವಿಷಯದ ಕುರಿತು ಕೇಳಿದಾಗ ಅವರು, ನಮ್ಮ ಬಳಿ ಈ ಪ್ರಕರಣದ ಯಾವುದೇ ದೂರು ದಾಖಲಿಸಲಾಗಿಲ್ಲ ಎಂದು ಹೇಳಿದರು.

 

ಸಂಪಾದಕೀಯ ನಿಲುವು

ಇಸ್ಲಾಮಿ ಬಾಂಗ್ಲಾದೇಶದಲ್ಲಿನ ಹಿಂದೂಗಳ ಶೋಚನೀಯ ಸ್ಥಿತಿ ! ಇಲ್ಲಿಯ ಹಿಂದುಗಳ ರಕ್ಷಣೆ ಮಾಡುವುದಕ್ಕಾಗಿ ಭಾರತ ಸರಕಾರವು ಬಾಂಗ್ಲಾದೇಶದ ಮೇಲೆ ಒತ್ತಡ ತರಬೇಕು ಮತ್ತು ‘ಭಾರತ ಸರಕಾರವು ಇದನ್ನು ಮಾಡಲು’, ಹಿಂದೂಗಳು ತಮ್ಮ ಮತದಾರ ಕ್ಷೇತ್ರದಲ್ಲಿನ ಪ್ರತಿಯೊಬ್ಬ ಶಾಸಕರ ಮತ್ತು ಸಂಸದರಿಗೆ ಹಾಗೆ ಮಾಡಲು ಅನಿವಾರ್ಯಗೊಳಿಸಬೇಕು !