ಮದರಸಾಗಳಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣ ನೀಡಿದರೆ ಲೈಸೆನ್ಸ್ ರದ್ದು !
ಭೋಪಾಲ್ (ಮಧ್ಯಪ್ರದೇಶ) – ಮಧ್ಯಪ್ರದೇಶ ಸರಕಾರದ ಶಾಲಾ ಶಿಕ್ಷಣ ಇಲಾಖೆಯು ಮದರಸಾಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪರಿಶೀಲನೆಗೆ ಆದೇಶಿಸಿದೆ. ಈ ಅವಧಿಯಲ್ಲಿ, ಮುಸ್ಲಿಮೇತರ ಅಥವಾ ಮುಸ್ಲಿಂ ವಿದ್ಯಾರ್ಥಿಗಳ ಹೆಸರುಗಳು ತಪ್ಪಾಗಿವೆ ಎಂದು ಕಂಡುಬಂದರೆ ಅಥವಾ ಅವರ ಪೋಷಕರ ಅನುಮತಿಯಿಲ್ಲದೆ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಿದರೆ ಅಂತಹ ಮದರಸಾಗಳ ಮಾನ್ಯತೆ ರದ್ದುಗೊಳಿಸಲಾಗುವುದು.
ಸರಕಾರದ ಅನುದಾನ ಪಡೆಯುವ ಸಲುವಾಗಿ ರಾಜ್ಯದ ಮದರಸಾಗಳಲ್ಲಿ ಹಲವು ಮುಸ್ಲಿಮೇತರ ಮಕ್ಕಳನ್ನು ವಿದ್ಯಾರ್ಥಿ ಎಂದು ನೋಂದಾಯಿಸಿ ವಂಚನೆ ಮಾಡಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಹೇಳಿದೆ. ಇದನ್ನು ಶೀಘ್ರವೇ ಪರಿಶೀಲಿಸಬೇಕಾಗಿದೆ.
ಸಂಪಾದಕೀಯ ನಿಲುವುಕೇಂದ್ರ ಸರ್ಕಾರ ಈ ಆದೇಶವನ್ನು ಇಡೀ ದೇಶಕ್ಕಾಗಿ ನೀಡಬೇಕು ಮತ್ತು ನೈಜ ಸ್ಥಿತಿಯನ್ನು ಬೆಳಕಿಗೆ ತರಬೇಕು ! |