ವೈದ್ಯರ ಮೇಲೆ ಹಲ್ಲೆ ನಡೆದರೆ ಆಸ್ಪತ್ರೆಯ ಮುಖ್ಯಸ್ಥರೇ ಹೊಣೆ ! – ಕೇಂದ್ರ

  • ದೇಶಾದ್ಯಂತ ವೈದ್ಯರುಗಳ ಪ್ರತಿಭಟನೆ ನಂತರ ಕೇಂದ್ರದ ಹೊಸ ಆದೇಶ !

  • 6 ಗಂಟೆಗಳ ಅಪರಾಧ ದಾಖಲಿಸುವುದು ಅವಶ್ಯಕ !

ಕೋಲಕಾತಾ (ಬಂಗಾಳ) – ಕೊಲಕಾತಾದಲ್ಲಿ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಆಗಸ್ಟ್ 16 ರಂದು ವೈದ್ಯರಿಂದ ದೇಶಾದ್ಯಂತ ಪ್ರತಿಭಟನೆಗಳು ನಡೆದವು. ವೈದ್ಯರು ಮತ್ತು ನರ್ಸ್‌ಗಳು ಮುಷ್ಕರ ನಡೆಸುತ್ತಿರುವುದರಿಂದ ಆರೋಗ್ಯ ಸೇವೆಗಳು ಕುಂಠಿತಗೊಂಡಿದೆ. ‘ಎಲ್ಲ ಆರೋಗ್ಯ ಕಾರ್ಯಕರ್ತರ ಸುರಕ್ಷತೆಗೆ ಕೇಂದ್ರವು ಖಾತರಿ ನೀಡಬೇಕು, ಎಂಬ ಬೇಡಿಕೆಯನ್ನು ಪ್ರತಿಭಟನಾಕಾರರು ಮಾಡಿದರು. ಇದನ್ನು ಆಧರಿಸಿ ಕೇಂದ್ರವು ವೈದ್ಯರ ಮೇಲೆ ಹಲ್ಲೆ ನಡೆದರೆ ಅದಕ್ಕೆ ವೈದ್ಯಕೀಯ ಕಾಲೇಜು ಅಥವಾ ಆಸ್ಪತ್ರೆ ಮುಖ್ಯಸ್ಥ ಇದರ ಹೊಣೆಗಾರರಾಗಿರುತ್ತಾರೆ ಎಂದು ನಿರ್ದೇಶನ ನೀಡಿದೆ. ಹಿಂಸಾಚಾರದ ಘಟನೆಯು ಘಟಿಸಿದ 6 ಗಂಟೆಗಳ ಒಳಗೆ ಅಪರಾಧವನ್ನು ದಾಖಲಿಸಬೇಕು. ಹಾಗೆ ಮಾಡದಿದ್ದರೆ ವೈದ್ಯಕೀಯ ಕಾಲೇಜು ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಬಹುದು.

ಪ್ರತಿಭಟನಾನಿರತ ವೈದ್ಯರ ಪ್ರಕಾರ, ಪ್ರತಿದಿನ ವೈದ್ಯರ ಮೇಲೆ ಅಲ್ಲೊಂದು ಇಲ್ಲೊಂದು ಹಲ್ಲೆ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರವು ದೇಶಾದ್ಯಂತ ವೈದ್ಯರ ಸುರಕ್ಷತೆಗಾಗಿ ಸೂಕ್ತ ಕಾನೂನು ರೂಪಿಸಬೇಕು. ಇದಕ್ಕಾಗಿ ಪ್ರತಿಭಟನಾನಿರತ ವೈದ್ಯರು ಕೇಂದ್ರ ಸರಕಾರ ಮತ್ತು ಆರೋಗ್ಯ ಸಚಿವರಿಗೂ ಪತ್ರ ಬರೆದಿದ್ದರು.