ದೆಹಲಿ – ನಾವು 1950 ರಲ್ಲಿ ಸಂವಿಧಾನವನ್ನು ಅಂಗೀಕರಿಸಿದ್ದೇವೆ. ನೆರೆಯ ದೇಶದಲ್ಲಿ ಸ್ವಾತಂತ್ರ್ಯದ ಅನಿಶ್ಚಿತೆ ಇದ್ದರೆ ಪರಿಣಾಮ ಏನಾಗುವುದು ? ಇದು ನಮಗೆ ಬಾಂಗ್ಲಾದೇಶದ ಉದಾಹರಣೆಯಿಂದ ನೋಡಬಹುದು. ಇದರಿಂದ ಸ್ವಾತಂತ್ರ್ಯದ ಮಹತ್ವ ಮತ್ತೊಮ್ಮೆ ಎತ್ತಿ ತೋರಿಸುತ್ತದೆ. ಸ್ವಾತಂತ್ರ್ಯವನ್ನು ಊಹಿಸುವುದು ಸಾಕಷ್ಟು ಸುಲಭ; ಆದರೆ ಈ ವಿಷಯ ಎಷ್ಟು ಮಹತ್ವದ್ದಿರುತ್ತದೆ, ಇದು ಹಿಂದಿನ ಕಾಲದ ಘಟನೆಗಳಿಂದ ತಿಳಿದುಕೊಳ್ಳಬೇಕಾಗಿದೆ, ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಹೇಳಿದರು. ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಜಧಾನಿಯಲ್ಲಿ ಆಯೋಜಿಸಿದ್ದ ಒಂದು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ನ್ಯಾಯಮೂರ್ತಿ ತಮ್ಮ ಮಾತನ್ನು ಮುಂದುವರೆಸುತ್ತಾ, ಸ್ವಾತಂತ್ರ್ಯ ಹೋರಾಟದಲ್ಲಿ ದೇಶವು ಏಕೆ ಎದುರಿಸಬೇಕಾಯಿತು ?, ಆ ಸಮಯದಲ್ಲಿ ಸಂವಿಧಾನ ಮತ್ತು ಕಾನೂನಿನ ಸ್ಥಿತಿ ಏನಾಗಿತ್ತು ? ಎಂಬುದು ಎಲ್ಲರಿಗೂ ತಿಳಿದಿದೆ. ಕಾನೂನಿನ ವೃತ್ತಿ ಬಿಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಸ್ವಾತಂತ್ರ್ಯ ಹೋರಾಟಗಾರರ ಪ್ರತಿ ನಾವು ಗೌರವ ಕಾಪಾಡಬೇಕು ಎಂದು ಹೇಳಿದರು.