ಭಾರತದ ಬಂಗಾಳ, ಜಾರ್ಖಂಡ್, ಬಿಹಾರ ರಾಜ್ಯ, ನೇಪಾಳ ಮತ್ತು ಮ್ಯಾನ್ಮಾರ್ ದೇಶಗಳ ಕೆಲವು ಭಾಗಗಳು ಈ ಸಂಚಿನಲ್ಲಿ ಸೇರಿವೆ !
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮಾಡುವ ಜಿಹಾದಿ ಸಂಘಟನೆಯಾದ ಜಮಾತ್-ಎ-ಇಸ್ಲಾಮಿಯು ‘ಇಸ್ಲಾಮಿಕ್ ಬಾಂಗ್ಲಾದೇಶ’, ಅಂದರೆ ಅಖಂಡ ಬಾಂಗ್ಲಾದೇಶವನ್ನು ರಚಿಸಲು ಸಂಚು ರೂಪಿಸುತ್ತಿರುವುದು ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ‘ಬರ್ತಮಾನ್’ ದಿನಪತ್ರಿಕೆಯು ಈ ಬಗ್ಗೆ ಮಾಹಿತಿ ನೀಡಿದೆ. ಈ ‘ಇಸ್ಲಾಮಿಕ್ ಬಾಂಗ್ಲಾದೇಶ’ ಬಾಂಗ್ಲಾದೇಶ, ಭಾರತದ ಸಂಪೂರ್ಣ ಬಂಗಾಳ ರಾಜ್ಯ, ಹಾಗೆಯೇ ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳ ಭಾಗಗಳು, ನೇಪಾಳ ಮತ್ತು ಮ್ಯಾನ್ಮಾರ್ ಗಳನ್ನು ವ್ಯಾಪಿಸಲಿದೆ ಎಂದು ಹೇಳಿದೆ. ‘ಜಮಾತ್-ಎ-ಇಸ್ಲಾಮಿ’ ‘ಘಜ್ವಾ-ಎ-ಹಿಂದ್’ (ಭಾರತವನ್ನು ಇಸ್ಲಾಮೀಕರಣ) ಉದ್ದೇಶವನ್ನು ಪೂರ್ಣಗೊಳಿಸುವುದಿದೆ. ಹಾಗಾಗಿ ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ಭಾರತದ ರಾಜ್ಯಗಳ ಮೇಲೆ ಈ ಸಂಘಟನೆ ಗಮನಹರಿಸುತ್ತಿದೆ. ‘ಗ್ರೇಟ್ ಬಾಂಗ್ಲಾದೇಶ’ ಎಂಬ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ನಕ್ಷೆಗಳು ಹರಿದಾಡುತ್ತಿವೆ. ಈ ನಕ್ಷೆಯಲ್ಲಿ ಪಶ್ಚಿಮ ಬಂಗಾಳ ಸೇರಿದಂತೆ ಭಾರತದ ಕೆಲವು ರಾಜ್ಯಗಳನ್ನು ಸಹ ಸೇರಿಸಲಾಗಿದೆ.
ಭಾಜಪದ ನಾಯಕ ಬಾಬುಲಾಲ್ ಮರಾಂಡಿ ಈ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದು, “ಬಾಂಗ್ಲಾದೇಶದ ಪರಿಸ್ಥಿತಿ ಮತ್ತು ಮತಾಂಧರ ಉದ್ದೇಶವು ಜಾರ್ಖಂಡ್ ಸೇರಿದಂತೆ ಇಡೀ ದೇಶಕ್ಕೆ ಬಹಳ ಸೂಕ್ಷ್ಮವಾಗಿದೆ. ಜಾರ್ಖಂಡ್‌ನಲ್ಲಿ ಬಾಂಗ್ಲಾದೇಶಿ ಮುಸ್ಲಿಮರ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಾಗಲು ಪ್ರಾರಂಭಿಸಿದ ರೀತಿ ನೋಡಿದರೆ ಕಾಂಗ್ರೆಸ್ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ಕೂಡ ಕಟ್ಟರವಾದಿಗಳ ಉದ್ದೇಶವನ್ನು ಸಾಧಿಸಲು ಬೆಂಬಲಿಸುತ್ತಿದೆ’, ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
‘ಜಮಾತ್-ಎ-ಇಸ್ಲಾಮಿ’ ಇತಿಹಾಸ !
ಮೌಲಾನಾ ಅಬುಲ್ ಅಲಾ ಮೌದುದಿ ಅವರು 1941ರಲ್ಲಿ ಈ ಸಂಘಟನೆಯನ್ನು ಸ್ಥಾಪಿಸಿದರು. ಭಾರತದ ವಿಭಜನೆಯ ನಂತರ, ಜಮಾತ್-ಎ-ಇಸ್ಲಾಮಿ ವಿವಿಧ ಬಣಗಳಾಗಿ ವಿಭಜನೆಯಾಯಿತು. ಜಮಾತ್-ಎ-ಇಸ್ಲಾಮಿ ಬಾಂಗ್ಲಾದೇಶ ಹಾಗೆಯೇ ಜಮಾತ್-ಎ-ಇಸ್ಲಾಮಿ ಪಾಕಿಸ್ತಾನ ಎಂದು ವಿವಿಧ ಸಂಘಟನೆಗಳನ್ನು ರಚಿಸಲಾಯಿತು. ಜಮಾತ್-ಎ-ಇಸ್ಲಾಮಿ 1971ರಲ್ಲಿ ಬಾಂಗ್ಲಾದೇಶ ರಚನೆಯನ್ನು ವಿರೋಧಿಸಿತ್ತು. ಈಗಲೂ ಸಹ ಈ ಸಂಘಟನೆ ಪಾಕಿಸ್ತಾನವನ್ನು ಬೆಂಬಲಿಸುತ್ತದೆ ಎಂದು ಕರೆಯಲಾಗುತ್ತದೆ. ಈ ಸಂಘಟನೆಯು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಅಂಗವಾಗಿದೆ ಎಂದೂ ಸಹ ಹೇಳಲಾಗುತ್ತದೆ.
ಸಂಪಾದಕೀಯ ನಿಲುವುಭಾರತವು ಇಸ್ಲಾಮಿಸ್ತಾನ್ ಆಗುವ ಮೊದಲು, ಹಿಂದೂಗಳು ‘ಹಿಂದೂ ರಾಷ್ಟ್ರ’ ಸ್ಥಾಪಿಸಲು ಬದ್ಧರಾಗಬೇಕು ! |