ಮುಜಾಫ್ಫರಪುರ (ಬಿಹಾರ) – 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ಆರೋಪಿಗಳು ಆಕೆಯ ಸ್ತನವನ್ನು ಕತ್ತರಿಸಿ, ಆಕೆಯ ಖಾಸಗಿ ಭಾಗಗಳಿಗೆ ಚಾಕುವಿನಿಂದ ಇರಿದಿದ್ದಾರೆ. ಆಗಸ್ಟ್ 12 ರಂದು ನಗರದ ಕೆರೆಯಲ್ಲಿ ಆಕೆಯ ಶವ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಾಲಕಿಯ ಬಾಯಿಗೆ ಬಟ್ಟೆ ಕಟ್ಟಲಾಗಿತ್ತು. ಪೋಷಕರ ದೂರಿನ ಮೇರೆಗೆ ಪೊಲೀಸರು ಸಂಜಯ ರೈ ಸಹಿತ ಐದು ಮಂದಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Bihar Minor Rape Murder : Girl Brutally murdered after being gang raped
Incident from Muzaffarpur (Bihar).
The central and state governments should try to award the death penalty to such criminals !#Gang #rape #Biharnews pic.twitter.com/7ZdqmQfC1Y
— Sanatan Prabhat (@SanatanPrabhat) August 15, 2024
ಆಗಸ್ಟ್ ೧೧ರ ರಾತ್ರಿ ಐದು ಮಂದಿ ‘ನಿಮ್ಮ ಮಗಳ ಮೇಲೆ ಅತ್ಯಾಚಾರ ಮಾಡುತ್ತೇವೆ’ ಎಂದು ಹೇಳಿ ಬಾಲಕಿಯನ್ನು ಅಪಹರಿಸಿದ್ದರು. ಕೆಲ ದಿನಗಳ ಹಿಂದೆ ಸಂಜಯ ರೈ ‘ನಿಮ್ಮ ಮಗಳೊಂದಿಗೆ ನನ್ನ ಮದುವೆ ಮಾಡಿಸಿ, ಇಲ್ಲದಿದ್ದರೆ ಸಾಯಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದ. ಆತನು ನಮಗೆ ಭೂಮಿ ನೀಡುವ ಆಮಿಷವನ್ನೂ ಕೊಟ್ಟಿದ್ದನು; ಆದರೆ ನಾವು ನಮ್ಮ ಮಗಳನ್ನು ಅವನಿಗೆ ಕೊಟ್ಟು ಮದುವೆ ಮಾಡಲು ನಿರಾಕರಿಸಿದ್ದೆವು ಎಂದು ಸಂತ್ರಸ್ತೆಯ ಕುಟುಂಬದವರು ಹೇಳಿದ್ದಾರೆ.
ಈ ಘಟನೆಯ ನಂತರ, ಆಕ್ರೋಶಗೊಂಡ ಗ್ರಾಮಸ್ಥರು ಪೊಲೀಸರು ಮತ್ತು ಸರಕಾರದ ವಿರುದ್ಧ ಪ್ರತಿಭಟಿಸಿದರು ಮತ್ತು 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸದಿದ್ದರೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವುದಾಗಿ ಮತ್ತು ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸುವುದಾಗಿ ಬೆದರಿಕೆ ಹಾಕಿದರು. ಆರೋಪಿಯನ್ನು ಬಂಧಿಸಿದ ನಂತರವೇ ಬಾಲಕಿಯ ಶವದ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಗ್ರಾಮಸ್ಥರು ದೃಢ ನಿಲುವು ತಳೆದರು; ಆದರೆ, ಆಡಳಿತ ಮಂಡಳಿಯ ಮನವಿ ಮೇರೆಗೆ ವಿದ್ಯಾರ್ಥಿಯ ಅಂತ್ಯ ಸಂಸ್ಕಾರ ಮಾಡಲಾಯಿತು.
ಸಂಪಾದಕೀಯ ನಿಲುವುಈ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಕೇಂದ್ರ ಮತ್ತು ರಾಜ್ಯ ಸರಕಾರ ಪ್ರಯತ್ನಿಸಬೇಕು ! |