ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತರ ಸ್ಪಷ್ಟೀಕರಣ
ಬೆಂಗಳೂರು – ‘ವರ್ಣ’ ಎಂದರೆ ಜಾತಿಯಲ್ಲ. ಮನು ಬ್ರಾಹ್ಮಣನಾಗಿರಲಿಲ್ಲ. ಮನು ಎಂಬುದು ಒಂದು ಪದವಿಯಾಗಿದೆ. ಮನುಸ್ಮೃತಿಯಲ್ಲಿ ಅನೇಕ ಉಚ್ಚ ತತ್ವಗಳು ಒಳಗೊಂಡಿದೆ. ಭಾರತದ ಮಹಾಕಾವ್ಯಗಳು, ವೇದಗಳು ಮತ್ತು ಉಪನಿಷತ್ತುಗಳನ್ನು ಬಹುತೇಕವಾಗಿ ಶೂದ್ರ ವರ್ಣದ ಜನರೇ ರಚಿಸಿದ್ದಾರೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ ಅವರು ಹೇಳಿದರು. ಕರ್ನಾಟಕ ಉಚ್ಚನ್ಯಾಯಾಲಯದ ಹಿರಿಯ ವಕೀಲ ವಿ.ತಾರಕರಾಮ ಅವರ ಸ್ಮರಣಾರ್ಥ ಆಯೋಜಿಸಲಾಗಿದ್ದ `ಕಾನೂನು ಮತ್ತು ಧರ್ಮ’ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು, ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು ಹಾಗೆಯೇ ರಾಜ್ಯದ ನ್ಯಾಯವಾದಿ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನ್ಯಾಯಮೂರ್ತಿ ದೀಕ್ಷಿತ್ ಅವರು ಮಾತು ಮುಂದುವರೆಸುತ್ತಾ:
1. ಖಡ್ಗ ಸಂಸ್ಕಾರದಿಂದ ಯುದ್ಧ ಕೌಶಲ್ಯವನ್ನು ಮೈಗೂಡಿಸಿಕೊಳ್ಳುವುದರಿಂದ ಶೂದ್ರ ವರ್ಣದವರು ಮುಂದೆ ರಾಜರಾದರು. ಕಾನೂನುಗಳನ್ನು ರಚಿಸುವಲ್ಲಿ ವಿಶ್ವದ ಇತರೆ ಎಲ್ಲ ಧರ್ಮಗಳಿಗಿಂತ ಹಿಂದೂ ಧರ್ಮದ ಪ್ರಭಾವವು ಬಹಳ ಹೆಚ್ಚಿದೆ.
2. ಸ್ಥಳೀಯ ನಿಯಮ, ಪದ್ಧತಿ ಮತ್ತು ಹಿಂದಿನ ಅನುಭವದ ಆಧಾರದ ಮೇಲೆ ಅನ್ಯ ಅನ್ಯ ದೇಶಗಳಲ್ಲಿನ ನಿಯಮಗಳನ್ನು ರಚಿಸಲಾಗಿದೆ. ತಾರತಮ್ಯವಿಲ್ಲದ ವ್ಯವಸ್ಥೆಯೆಂದರೆ ಧರ್ಮವಾಗಿದೆ.
3. ಎಲ್ಲ ಧರ್ಮಗಳಲ್ಲೂ ಶ್ರಮಜೀವಿಗಳಿದ್ದಾರೆ. ಅವರ ಸಂಖ್ಯೆ ಹೆಚ್ಚು ಅಥವಾ ಕಡಿಮೆ ಇರಬಹುದು. ಧರ್ಮದಲ್ಲಿ ಭಾವನಾತ್ಮಕ ಅಂಶವಿರುತ್ತದೆ; ಅದಕ್ಕಾಗಿಯೇ ಕಾರ್ಲ್ ಮಾರ್ಕ್ಸ್ ಧರ್ಮವನ್ನು ‘ಅಫೂ’ ಎಂದು ಕರೆದರು. ಆದಾಗ್ಯೂ, ಯಾವುದೇ ಧರ್ಮವು ಟೀಕೆಗಳಿಂದ ಮುಕ್ತವಾಗಿಲ್ಲ.
4. ಯುದ್ಧ ಪ್ರಾರಂಭವಾಗುವ ಮುನ್ನ ಯುದ್ಧದ ನಿಯಮಗಳನ್ನು ರೂಪಿಸಲಾಗುತ್ತಿತ್ತು, ಇದು ಮಹಾಭಾರತದಲ್ಲಿ ಕಂಡುಬರುತ್ತದೆ; ಆದರೆ ‘ಯುದ್ಧ ಮತ್ತು ಪ್ರೀತಿ’ಯಲ್ಲಿ ಎಲ್ಲವೂ ಯೋಗ್ಯವೆಂದು ಪರಿಗಣಿಸುವ ತತ್ವ ಯುರೋಪಿನದ್ದಾಗಿದೆ.