ಹಿಂದೂದ್ವೇಷಿ ಹಾಸ್ಯ ಕಲಾವಿದ ಮುನವ್ವರ್ ಫಾರುಕಿ ಕ್ಷಮಯಾಚನೆ !

  • ಕೊಂಕಣಿಗರ ಬಗ್ಗೆ ವಿವಾದಿತ ಹೇಳಿಕೆಯ ಪ್ರಕರಣ

  • ಫಾರುಕಿಯ ವಿರುದ್ಧ ಸಿಡಿದೆದ್ದ ಶಾಸಕರು

ಮುಂಬಯಿ – ಹಾಸ್ಯ ಕಲಾವಿದ ಮುನವ್ವರ್ ಫಾರೂಕಿ ತನ್ನ ಒಂದು ಕಾರ್ಯಕ್ರಮದಲ್ಲಿ, ಕೊಂಕಣಿ ಜನರು ಅನ್ಯರನ್ನು ಮೂರ್ಖರನ್ನಾಗಿ ಮಾಡುತ್ತಾರೆ, ಎಂಬ ಹೇಳಿಕೆ ನೀಡಿದ್ದನು. ಈ ಹೇಳಿಕೆಯನ್ನು ಮರಾಠಿ ಮತ್ತು ಕೊಂಕಣಿ ಜನರು ಬೃಹತ್ ಪ್ರಮಾಣದಲ್ಲಿ ವಿರೋಧಿಸಿದ ನಂತರ ಅವನು ಕ್ಷಮೆ ಯಾಚಿಸಿದನು.

‘ನನ್ನ ಕಾರ್ಯಕ್ರಮ ಹಾಸ್ಯ ಕಾರ್ಯಕ್ರಮವಾಗಿರಲಿಲ್ಲ. ಪರಸ್ಪರರ ಬಗ್ಗೆ ತಿಳಿದುಕೊಳ್ಳುವ ಕಾರ್ಯಕ್ರಮವಾಗಿತ್ತು. ಕೊಂಕಣದ ಬಗ್ಗೆ ವಿಷಯ ಬಂದಾಗ ನಾನು ಕೆಲವು ಹಾಸ್ಯ ಭರಿತ ವಾಕ್ಯಗಳನ್ನು ಮಾತನಾಡಿದೆ. ಅವರನ್ನು ತಮಾಷೆ ಮಾಡಿದೆ; ಆದರೆ ಅದು ನನ್ನ ಉದ್ದೇಶವಾಗಿರಲಿಲ್ಲ. ನಾನು ಯಾವ ಕೊಂಕಣಿಗರನ್ನೂ ನೋಯಿಸಬೇಕೆಂದು ಅಂದುಕೊಂಡಿರಲಿಲ್ಲ. ನಾನು ಮನಪೂರ್ವಕವಾಗಿ ಎಲ್ಲರಲ್ಲಿ ಕ್ಷಮೆ ಯಾಚಿಸುತ್ತೇನೆ ! ಜೈ ಹಿಂದ್, ಜೈ ಮಹಾರಾಷ್ಟ್ರ !’ ಎಂದು ಫಾರೂಕಿ ಹೇಳಿದ್ದಾನೆ. (ಮುನವ್ವರ್ ಫಾರೂಕಿ ಎಷ್ಟೇ ತೇಪೆ ಹಾಕುವ ಕೆಲಸ ಮಾಡಿದರೂ ಅದನ್ನು ತಿಳಿಯದೇ ಇರುವಷ್ಟು ಮರಾಠಿ ಅಥವಾ ಕೊಂಕಣಿ ಜನರು ಅಜ್ಞಾನಿಗಳಲ್ಲ ! – ಸಂಪಾದಕರು).

ಮುನವ್ವರ್ ಫಾರೂಕಿ ಎಂಬ ಈ ಹಸಿರು ಸರ್ಪಕ್ಕೆ ಮಾಲವಣಿ ಕೈ ತೋರಿಸಬೇಕಾಗುವುದು ! – ನಿತೇಶ ರಾಣೆ, ಶಾಸಕ, ಭಾಜಪ

ಭಾಜಪದ ಶಾಸಕ ನಿತೇಶ ರಾಣೆ ಅವರು ಫಾರೂಕಿ ಹೇಳಿಕೆಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಫಾರೂಕಿ ಎಂಬ ಹಸಿರು ಸರ್ಪದ ಮನೆಗೆ ಹೋಗಿ, ಕೊಂಕಣದಲ್ಲಿನ ಜನರು ಹೇಗಿರುತ್ತಾರೆ ಎಂಬುದನ್ನು ತೋರಿಸಬೇಕಾಗುವುದು. ಮುನವ್ವರ್ ಫಾರೂಕಿ ಎಂಬ ಹೆಸರಿನ ಹಸಿರು ಸರ್ಪ ! ಅವನ ನಾಲಿಗೆ ಬಹಳ ಜಾಸ್ತಿ ಹೊರಳುತ್ತಿದೆ.

ಅವನಿಗೆ ಸ್ಟ್ಯಾಂಡ್ ಅಪ್ ಕಾಮಿಡಿಯಲ್ಲಿ ಕೊಂಕಣಿ ಜನರ ಚೇಷ್ಟೆ ಮಾಡುವಷ್ಟು ಅಹಂಕಾರ ಬಂದಿದೆ, ಅವನ ಮನೆಯ ವಿಳಾಸ ನಮಗೂ ಕೂಡ ಚೆನ್ನಾಗಿಯೇ ತಿಳಿದಿದೆ. ಅವನಿಗೆ ಮಾಲವಣಿ ಕೈ ಹೇಗಿರುತ್ತದೆ ಎಂಬುದನ್ನು ಈಗ ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುನವ್ವರ್ ಫಾರೂಕಿ ಪಾಕಿಸ್ತಾನ ಪ್ರೇಮಿ; ಅವನನ್ನು ಕಂಡಲ್ಲಿ ತುಳಿಯುತ್ತೇನೆ ! – ಸದಾ ಸರವಣಕರ್, ಶಾಸಕ, ಶಿವಸೇನೆ

ಶಿವಸೇನೆಯ ಶಾಸಕ ಸದಾ ಸರವಣಕರ ಅವರು ಎಕ್ಸ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಮುನವ್ವರ್ ಫಾರೂಕಿ ಕೊಂಕಣಿ ಜನರ ಕ್ಷಮೆ ಕೇಳದಿದ್ದರೆ ಈ ಪಾಕಿಸ್ತಾನಿ ಪ್ರೇಮಿ ಮುನವ್ವರ್ ಎಲ್ಲಿ ಕಾಣಿಸುತ್ತಾನೋ ಅಲ್ಲೇ ಅವನನ್ನು ತುಳಿಯುವೆವು. ಕೊಂಕಣಿ ಜನರು ಹೇಗೆ ತುಳಿಯುತ್ತಾರೆ ಎಂಬುದು ಅವನಿಗೆ ತಿಳಿಯಲಿ. ಯಾರು ಅವನನ್ನು ತುಳಿಯುವರೋ ಅವರಿಗೆ ೧ ಲಕ್ಷ ರೂಪಾಯಿ ಬಹುಮಾನ ನೀಡುವೆನು. ‘ಬನ್ನಿ ಕೊಂಕಣ ನಿಮ್ಮದೇ ಆಗಿದೆ’ ಎಂದು ಹೇಳಿ ಸ್ವಾಗತ ಕೋರುವ ಕೊಂಕಣಿ ಜನರ ಬಗ್ಗೆ ಈ ರೀತಿ ಮಾತನಾಡುತ್ತಾರೆ ಎಂದು ಸರವಣಕರ ಅವರು ಗುಡುಗಿದರು.

ಸಂಪಾದಕೀಯ ನಿಲುವು

ಮುನವ್ವರ್ ಫಾರೂಕಿ ಇವನು ಈ ಹಿಂದೆ ಕೂಡ ಅನೇಕ ಬಾರಿ ಹಿಂದೂ ಧರ್ಮ ಮತ್ತು ದೇವತೆಗಳ ವಿರುದ್ಧ ಹೇಳಿಕೆ ನೀಡಿರುವುದರಿಂದ ಅವನ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಈಗ ಅವನು ಕೊಂಕಣಿ ಜನರ ಕುರಿತು ಅಕ್ಷೇಪಾರ್ಹ ಹೇಳಿಕೆ ನೀಡಿದ್ದಾನೆ. ಮತ್ತೊಮ್ಮೆ ಈತ ಇನ್ನೇನಾದರೂ ವಿವಾದಾಸ್ಪತ ಕೃತಿ ಮಾಡುವ ಮುನ್ನವೇ ಈತನ ವಿರುದ್ಧ ದೂರು ದಾಖಲಿಸಿ ಆಜೀವನ ಜೈಲಲ್ಲಿರಿಸುವ ಶಿಕ್ಷೆ ವಿಧಿಸಬೇಕು.