ಹಿಜಾಬ ಹಾಕಿ ಕಾಲೇಜಿಗೆ ಬಂದಿದ್ದಕ್ಕೆ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರಿಂದ ಪ್ರವೇಶ ನಿರಾಕರಣೆ !

೨ ಜಡೆ ಹಾಕಿಕೊಂಡು ಬರಲು ಆದೇಶ

(ಹಿಜಾಬ್ ಎಂದರೆ ಮುಸಲ್ಮಾನ ಮಹಿಳೆ ತಲೆ ಮತ್ತು ಕತ್ತನ್ನು ಮುಚ್ಚಿಕೊಳ್ಳಲು ಉಪಯೋಗಿಸುವ ವಸ್ತ್ರ)

ಬಿಜನೌರ (ಉತ್ತರಪ್ರದೇಶ) – ಇಲ್ಲಿಯ ಜನತಾ ಇಂಟರ್ ಕಾಲೇಜಿನಲ್ಲಿ ಹಿಜಾಬ ಧರಿಸಿ ಕಾಲೇಜಿಗೆ ಬಂದಿರುವ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಹೊರಗೆ ಕಳುಹಿಸಿದರು. ಪ್ರಾಂಶುಪಾಲರು ಹಿಜಾಬ್ ಧರಿಸಿ ಕಾಲೇಜಿಗೆ ಬರಲು ಅನುಮತಿ ನೀಡಿಲ್ಲವೆಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ವಿಡಿಯೋ ಪ್ರಸಾರವಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಣ ನಿರೀಕ್ಷಕರು, ನಮಗೆ ಈ ಪ್ರಕರಣದ ಮಾಹಿತಿ ದೊರೆತಿದ್ದು ನಾವು ಸಂಪೂರ್ಣ ಪ್ರಕರಣದ ವಿಚಾರಣೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ವಿಡಿಯೋದಲ್ಲಿ ವಿದ್ಯಾರ್ಥಿನಿ ಹಿಜಾಬ್ ಮತ್ತು ಸಮವಸ್ತ್ರ ಧರಿಸಿರುವುದು ಕಾಣುತ್ತಿದೆ. ಅವರು, ಕಾಲೇಜಿನ ಪ್ರಾಂಶುಪಾಲರು ಹಿಜಾಬದಿಂದಾಗಿ ಕಾಲೇಜಿನಿಂದ ಹೊರಗೆ ಹಾಕಿದ್ದಾರೆ. ಹಿಜಾಬ ಧರಿಸದೆ ಎರಡು ಜಡೆ ಹಾಕಿಕೊಂಡು ಕಾಲೇಜಿಗೆ ಬರಲು ಹೇಳಿದ್ದಾರೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

ಶಾಲೆ ಮತ್ತು ಕಾಲೇಜುಗಳಲ್ಲಿ ಸಮವಸ್ತ್ರ ಇರುವಾಗಲು ಯಾರಾದರೂ ಬೇರೆ ಉಡುಪು ಧರಿಸುತ್ತಿದ್ದರೆ, ಈಗ ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಕಾನೂನವನ್ನೇ ರೂಪಿಸಬೇಕು !