ಢಾಕಾ (ಬಾಂಗ್ಲಾ ದೇಶ) – ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ ಹಸೀನಾ ಇವರ ಸರಕಾರವನ್ನು ಪದಚ್ಯುತಗೊಳಿಸಿದ ಬಳಿಕ ಬಾಂಗ್ಲಾದೇಶದಲ್ಲಿ ಜಿಹಾದಿ ಭಯೋತ್ಪಾದಕ ಸಂಘಟನೆಗಳಿಗೆ ಮುಕ್ತ ಅವಕಾಶ ಸಿಗುವ ಸಾಧ್ಯತೆ ಇದೆ ಹೇಳಲಾಗುತ್ತಿದೆ. ಶೇಖ ಹಸೀನಾ ಇವರು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಇದರಿಂದಲೇ ಅವರ ಆಡಳಿತಾವಧಿಯಲ್ಲಿ ಭಯೋತ್ಪಾದಕ ಸಂಘಟನೆಗಳನ್ನು ನಿಗ್ರಹಿಸುವ ಕೆಲಸಗಳಾದವು; ಆದರೆ ಹಸೀನಾರ ಸರಕಾರ ಪದಚ್ಯುತಗೊಂಡ ಬಳಿಕ ಈ ಸಂಘಟನೆಗಳು ಪುನಃ ಸಕ್ರಿಯಗೊಂಡಿವೆಯೆಂದು ಹೇಳಲಾಗುತ್ತಿದೆ. ದೇಶದಲ್ಲಿ ನಡೆದ ಹಿಂಸಾಚಾರದಲ್ಲಿಯೂ ಇದೇ ಸಂಘಟನೆಗಳಿರುವ ಸಾಧ್ಯತೆಯಿದೆಯೆಂದು ಹೇಳಲಾಗುತ್ತಿದೆ.
1. ಪಾಕಿಸ್ತಾನದ ಲಷ್ಕರ್-ಎ-ತೊಯಬಾ ಈ ಜಿಹಾದಿ ಭಯೋತ್ಪಾದಕ ಸಂಘಟನೆಯು ಈಶಾನ್ಯ ಭಾರತದ ರಾಜ್ಯಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಬಾಂಗ್ಲಾದೇಶದ ‘ಅನ್ಸಾರುಲ್ಲಾ ಬಾಂಗ್ಲಾ ಟೀಮ್’ (ಎಬಿಟಿ) ಈ ಭಯೋತ್ಪಾದಕ ಸಂಘಟನೆಯೊಂದಿಗೆ ಕೈಜೋಡಿಸಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
2. ಶೇಖ್ ಹಸೀನಾರು ಬಾಂಗ್ಲಾದೇಶದಿಂದ ಪಲಾಯನ ಮಾಡುವುದರ ಹಿಂದೆ ಪಾಕಿಸ್ತಾನದ ಐ.ಎಸ್.ಐ. ಈ ಗುಪ್ತಚರ ಇಲಾಖೆಯ ಮಹತ್ವದ ಕೈವಾಡವಿದೆಯೆನ್ನುವುದು ಬಹಿರಂಗಗೊಳ್ಳುತ್ತಿದೆ. `ಎಬಿಟಿ’ ಯೊಂದಿಗೆ ಜಮಾತ-ಎ- ಇಸ್ಲಾಮಿ ಮತ್ತು ಇತರೆ ಸಂಘಟನೆಗಳೊಂದಿಗೆ ಐ.ಎಸ್.ಐನ ನೇರ ಸಂಪರ್ಕವಿತ್ತೆಂದು ಹೇಳಲಾಗುತ್ತಿದೆ.
3. ಭಾರತದಲ್ಲಿ ಚಟುವಟಿಕೆ ನಡೆಸಲು ಲಷ್ಕರ್-ಎ-ತೊಯಬಾ ಮತ್ತು ಎಬಿಟಿ ಈ ಸಂಘಟನೆಗಳು 2022 ರಲ್ಲಿ ಒಟ್ಟಿಗೆ ಸೇರಿ ಬಾಂಗ್ಲಾದೇಶದಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸಿದ್ದವು. 2022 ರಲ್ಲಿ ತ್ರಿಪುರಾದ ಒಂದು ಮಸೀದಿಯನ್ನು ಧ್ವಂಸ ಮಾಡಿದ ಸುದ್ದಿಯು ಬೆಳಕಿಗೆ ಬಂದ ನಂತರ, ಅಲ್ಲಿನ ಹಿಂದೂ ಬಹುಸಂಖ್ಯಾತ ಪ್ರದೇಶಗಳನ್ನು ಗುರಿ ಮಾಡಲಾಗಿತ್ತು. ಅದೇ ವರ್ಷ ತ್ರಿಪುರಾದಲ್ಲಿ ಎಬಿಟಿ ಸಂಘಟನೆಯ 50 ರಿಂದ 100 ಮಂದಿ ಭಯೋತ್ಪಾದಕರು ತ್ರಿಪುರಾಕ್ಕೆ ನುಸುಳಲು ಯತ್ನಿಸುತ್ತಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿತ್ತು. ಆಸ್ಸಾಂನಲ್ಲಿಯೂ ಕೃತ್ಯಗಳನ್ನು ನಡೆಸುವ ಸಿದ್ಧತೆಯಲ್ಲಿದ್ದ ಎಬಿಟಿಯ ಕೆಲವು ಜನರನ್ನು ಬಂಧಿಸಲಾಗಿತ್ತು.
ಬಾಂಗ್ಲಾದೇಶದಲ್ಲಿ ಜಿಹಾದಿ ಭಯೋತ್ಪಾದಕ ಸಂಘಟನೆ ಸಕ್ರೀಯ
1. ಅನ್ಸರುಲ್ಲಾ ಬಾಂಗ್ಲಾ ತಂಡ
2. ಅನ್ಸಾರ್ ಅಲ್-ಇಸ್ಲಾಂ
3. ಲಷ್ಕರ್-ಎ-ತೋಯಬಾ
4. ಹರ್ಕತ್-ಉಲ್-ಜಿಹಾದ್ ಅಲ್-ಇಸ್ಲಾಮಿ ಬಾಂಗ್ಲಾದೇಶ
5. ಜಾಗರಾತಾ ಮುಸ್ಲಿಂ ಜನತಾ ಬಾಂಗ್ಲಾದೇಶ
6. ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ
7. ಪುರಬಾ ಬಾಂಗಲಾರ ಕಮ್ಯುನಿಸ್ಟ್ ಪಕ್ಷ
8. ಇಸ್ಲಾಮಿಕ್ ವಿದ್ಯಾರ್ಥಿ ಶಿಬಿರ
9. ಇಸ್ಲಾಮಿಕ್ ಸ್ಟೇಟ್
ಸಂಪಾದಕೀಯ ನಿಲುವುಮುಸ್ಲಿಂ ದೇಶ ಮತ್ತು ಜಿಹಾದಿ ಭಯೋತ್ಪಾದಕ ಸಂಘಟನೆಗಳನ್ನು ಎಂದಿಗೂ ಒಟ್ಟಾಗಲು ಸಾಧ್ಯವಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದ್ದರೂ, ಅವು ಒಳಗಿನಿಂದ ಪರಸ್ಪರ ಸಹಾಯ ಮಾಡುತ್ತಾರೆ ಎನ್ನುವುದು ಸತ್ಯವಾಗಿದೆ ! |