ಕೋಲಕಾತಾ – ಮಹಿಳಾ ಉದ್ಯೋಗಿಗಳಂತೆ ಪುರುಷರಿಗೂ ಮಕ್ಕಳ ಆರೈಕೆಗಾಗಿ 2 ವರ್ಷಗಳ ಶಿಶುಪಾಲನಾ ರಜೆ ಸಿಗಬೇಕು ಎಂದು ಕೊಲಕಾತಾ ಉಚ್ಚ ನ್ಯಾಯಾಲಯವು ಹೇಳಿದೆ. ಸಮಾನತೆ ಮತ್ತು ಲಿಂಗ ತಾರತಮ್ಯವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರವು 3 ತಿಂಗಳೊಳಗೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಸಿನ್ಹಾ ಹೇಳಿದರು. ‘ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಮಹಿಳೆಯರಿಗೆ ಮಾತ್ರ ಪರಿಗಣಿಸಬಾರದು. ಮಕ್ಕಳ ಪೋಷಣೆಯಲ್ಲಿ ಪೋಷಕರಿಬ್ಬರೂ ಸಮಾನ ಹೊಣೆಗಾರರಾಗಿರುತ್ತಾರೆ’ ಎಂದು ಉಚ್ಚ ನ್ಯಾಯಾಲಯವು ಹೇಳಿದೆ. ಬಂಗಾಳದಲ್ಲಿ ಪ್ರಸ್ತುತ ಪುರುಷ ಉದ್ಯೋಗಿಗಳಿಗೆ 30 ದಿನಗಳ ಹಾಗೂ ಮಹಿಳಾ ಉದ್ಯೋಗಿಗಳಿಗೆ 730 ದಿನಗಳ ಶಿಶುಪಾಲನಾ ರಜೆ ನೀಡುವ ವ್ಯವಸ್ಥೆ ಇದೆ.
ಉತ್ತರ 24 ಪರಗಣಾ ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಅಬು ರೆಹಾನ್ ಅವರ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಕೊಲಕಾತಾ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ಈ ನಿರ್ದೇಶನ ನೀಡಿದೆ. ಅಬು ರೆಹಾನ್ ಅವರ ಪತ್ನಿಯ ಸಾವಾಗಿದೆ. ಅವರಿಗೆ ಅವರ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು 730 ದಿನಗಳ ಶಿಶುಪಾಲನಾ ರಜೆ ನೀಡಬೇಕು ಎಂದು ಅರ್ಜಿಯ ಮೂಲಕ ಕೋರಲಾಗಿದೆ. ಇಬ್ಬರೂ ಮಕ್ಕಳನ್ನು ನೋಡಿಕೊಳ್ಳಲು ಅವರ ವಿನಹಃ ಅವರ ಕುಟುಂಬದಲ್ಲಿ ಬೇರೆ ಯಾರೂ ಇಲ್ಲ, ಹೀಗೆ ಅವರು ಹೇಳಿದ್ದರು.