ಚಿಕ್ಕ ಮಕ್ಕಳ ಅಶ್ಲೀಲ ವಿಡಿಯೋ (ಚೈಲ್ಡ್ ಪಾರ್ನ್) ನೋಡುವುದು ಅಪರಾಧವೇ? ಈ ಕುರಿತ ತೀರ್ಪು ಕಾಯ್ದಿರಿದ ಸರ್ವೋಚ್ಚ ನ್ಯಾಯಾಲಯ

ನವದೆಹಲಿ – ಯಾವುದಾದರೂ ವ್ಯಕ್ತಿ ಖಾಸಗಿಯಾಗಿ ಅಶ್ಲೀಲ ಚಿತ್ರಗಳು ಅಥವಾ ವಿಡಿಯೋ (ಪಾರ್ನ್) ನೋಡುತ್ತಿದ್ದರೆ ಅದು ಅಪರಾಧವಲ್ಲ, ಆದರೆ ಅವನು ಅದನ್ನು ಇತರರಿಗೆ ತೋರಿಸುತ್ತಿದ್ದರೆ, ಆಗ ಅದು ಕಾನೂನ ಬಾಹಿರವಾಗಿದೆ, ಎಂದು ಕೇರಳ ಉಚ್ಚ ನ್ಯಾಯಾಲಯವು ೧೩ ಸೆಪ್ಟೆಂಬರ್ ೨೦೨೩ ರಂದು ಒಂದು ಮೊಕದ್ದಮೆಯ ವಿಚಾರಣೆ ವೇಳೆ ತೀರ್ಪು ನೀಡಿತ್ತು. ಈ ತೀರ್ಪಿನ ಆಧಾರ ಪಡೆದು ಮದ್ರಾಸ್ ಉಚ್ಚ ನ್ಯಾಯಾಲಯವು ಓರ್ವ ಆರೋಪಿಯನ್ನು ಖುಲಾಸೆ ಮಾಡಿತ್ತು. ಆ ನಂತರ ಓರ್ವ ಸ್ವಯಂ ಸೇವೆ ಸಂಸ್ಥೆಯು ಈ ತೀರ್ಪನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಹಾಕಿತ್ತು. ಇದರ ಕುರಿತು ಸರ್ವೋಚ್ಚ ನ್ಯಾಯಾಲಯವು ತನ್ನ ತುರ್ತು ತೀರ್ಪನ್ನು ಸದ್ಯ ಕಾಯ್ದಿರಿಸಿದೆ.

ಭಾರತದಲ್ಲಿ ಪಾರ್ನ್ ವಿಡಿಯೋ ನೋಡುಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ

೨೦೨೬ರವರೆಗೆ ಭಾರತದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ೧೨೦ ಕೋಟಿಯವರೆಗೆ ತಲುಪುವ ಸಾಧ್ಯತೆ ಇದೆ. ಪಾರ್ನ್ ಹಬ್ ವೆಬ್ಸೈಟ್ ಪ್ರಕಾರ, ಒಂದು ಸಮಯದಲ್ಲಿ ಓಬ್ಬ ಭಾರತೀಯನು ಪಾರ್ನ್ ಜಾಲತಾಣದಲ್ಲಿ ಸರಾಸರಿ ೮ ನಿಮಿಷ ೩೯ ಸೆಕೆಂಡ್ ಕಳೆಯುತ್ತಾನೆ. ಅಷ್ಟೇ ಅಲ್ಲದೆ ಪಾರ್ನ್ ನೋಡುವವರ ಶೇಕಡ ೪೪ ರಷ್ಟು ಜನರು ೧೮ ರಿಂದ ೨೪ರ ವಯಸ್ಸಿನವರಾಗಿದ್ದಾರೆ, ಹಾಗೂ ಶೇಕಡ ೪೧ ರಷ್ಟು ಜನರು ೨೫ ರಿಂದ ೩೪ ವಯಸ್ಸಿನವರಾಗಿದ್ದಾರೆ.

೨೦೨೧ರಲ್ಲಿ ಗೂಗಲ್ ನಿಂದ ಬಂದ ಒಂದು ವರದಿಯ ಪ್ರಕಾರ, ಎಲ್ಲಕ್ಕಿಂತ ಹೆಚ್ಚು ಪಾರ್ನ್ ನೋಡುಗರಲ್ಲಿ ಜಗತ್ತಿನಲ್ಲಿ ಭಾರತ ಆರನೇ ಸ್ಥಾನದಲ್ಲಿದೆ. ಪಾರ್ನ್ ಹಬ್ ವೆಬ್ಸೈಟ್ ಪ್ರಕಾರ ಭಾರತ ಮೂರನೇ ಸ್ಥಾನದಲ್ಲಿದೆ.