ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲಿನ ದಾಳಿಗಳು ನಿಲ್ಲದಿದ್ದರೆ, ಸಂತರು ಬಾಂಗ್ಲಾದೇಶಕ್ಕೆ ಹೋಗಲು ಸಿದ್ದರು ! – ಮಹಾಮಂಡಲೇಶ್ವರ ಸ್ವಾಮಿ ಪ್ರಬೋಧಾನಂದಗಿರಿ
ಹರಿದ್ವಾರ – ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರಕಾರ ಸ್ಥಾಪನೆಯಾದ ನಂತರ ಢಾಕಾ ಮತ್ತು ಚಿತಗಾವ ಇಲ್ಲಿಯ ಹಿಂದುಗಳು ಮೇಲಿನ ದಾಳಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಹಿಂದುಗಳ ದೇವಸ್ಥಾನಗಳು, ಮನೆಗಳು ಮತ್ತು ವ್ಯವಸಾಯಗಳ ಮೇಲೆ ದಾಳಿಗಳು ನಡೆಯುತ್ತಿರುವಾಗ ಅವರು ಸುರಕ್ಷತೆಗೆ ಆಗ್ರಹಿಸಿದರು. ಇದರ ಹಿನ್ನೆಲೆಯಲ್ಲಿ ಈಗ ಈ ಪ್ರಕರಣದಲ್ಲಿ ಭಾರತದಲ್ಲಿನ ಸಾಧು-ಸಂತರು ಕೂಡ ಆಕ್ರೋಶಗೊಂಡು ಪ್ರತಿಕ್ರಿಯೆ ವ್ಯಕ್ತಪಡಿಸಿದರು. ‘ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲಿನ ದಾಳಿಗಳು ನಿಲ್ಲದಿದ್ದರೆ, ಅಗತ್ಯ ಬಿದ್ದರೆ ಸಂತ ಸಮಾಜ ಬಾಂಗ್ಲಾದೇಶಕ್ಕೆ ಹೋಗಲು ಸಿದ್ದರಿದ್ದಾರೆ’, ಎಂದು ಮಹಾಮಂಡಲೇಶ್ವರ ಸ್ವಾಮಿ ಪ್ರಬೋಧನಂದ ಗಿರಿ ಮಹಾರಾಜ್ ಇವರು ಹೇಳಿದರು. ಭಾರತದಲ್ಲಿನ ಸಂತ ಸಮಾಜವು ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲಿನ ದಾಳಿಯ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಕೇಂದ್ರ ಸರಕಾರದ ಬಳಿ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
೧. ಪಂಚಾಯತಿ ಅಖಾಡ ಮಹಾನಿರ್ವಾಣದ ಸಚಿವ ಮನಹತ ಪುರಿ ಇವರು ಮಾತನಾಡಿ, ಕೇಂದ್ರ ಸರಕಾರವು ಅಂತರಾಷ್ಟ್ರೀಯ ಒತ್ತಡ ನಿರ್ಮಾಣಮಾಡಿ ಬಾಂಗ್ಲಾದೇಶದಲ್ಲಿನ ಹಿಂದುಗಳ ಸುರಕ್ಷತೆ ಸುನಿಶ್ಚಿತಗೊಳಿಸಬೇಕು ಎಂದು ಹೇಳಿದರು.
೨. ಮಹಾಮಂಡಲೆಶ್ವರ ಸ್ವಾಮಿ ಯತೀಂದ್ರಾನಂದ ಗಿರಿ ಇವರು, ಹರಿದ್ವಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೋಹಿಂಗ್ಯ ಮತ್ತು ಬಾಂಗ್ಲಾದೇಶಿ ಮುಸಲ್ಮಾನರು ವಾಸಿಸುತ್ತಾರೆ. ಅವರನ್ನು ಕೂಡ ದೇಶದಿಂದ ಹೊರಗೆ ತಳ್ಳಬೇಕು, ಇಲ್ಲವಾದರೆ ಅವರು ದೇಶಕ್ಕಾಗಿ ದೊಡ್ಡ ಅಪಾಯ ತಂದು ಒಡ್ಡುವ ಸಾಧ್ಯತೆ ಇದೆ, ಎಂದು ಹೇಳಿದರು.
ಸಂಪಾದಕೀಯ ನಿಲುವುಭಾರತದಲ್ಲಿನ ಜನ್ಮಹಿಂದೂ ಸೋಮಾರಿ ಮತ್ತು ನಿದ್ರಿಸಿರುವುದರಿಂದ ಹಿಂದೂ ಸಂತರೇ ಹೀಗೆ ಹೇಳುವ ಸಮಯ ಬಂದಿದೆ ಇದು ಹಿಂದುಗಳಿಗೆ ಲಜ್ಜಾಸ್ಪದ ! |