ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರ ದಾವೆ
ಗೌಹಟ್ಟಿ (ಅಸ್ಸಾಂ) – ಅಸ್ಸಾಂನಲ್ಲಿ ಧಾರಾಕಾರ ಮಳೆಯಿಂದ ನೆರೆ ಸದೃಶ ಪರಿಸ್ಥಿತಿ ನಿರ್ಮಾಣವಾಗಿರುವುದರ ಸಂದರ್ಭದಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ನೆರೆಯ ಹಿಂದೆ ‘ಪ್ರವಾಹ ಜಿಹಾದ್’ ಇರುವುದಾಗಿ ದಾವೆ ಮಾಡಿದ್ದಾರೆ. ಮುಖ್ಯಮಂತ್ರಿ ಸರಮಾ ಇವರು, ‘ವಿಜ್ಞಾನ ಮತ್ತು ತಂತ್ರಜ್ಞಾನ ವಿದ್ಯಾಪೀಠ, ಮೇಘಾಲಯದ (ಯು.ಎಸ್.ಟಿ.ಎಂ.ನ) ಮಾಲೀಕರು ಅಸ್ಸಾಂ ವಿರುದ್ಧ ‘ಪ್ರವಾಹ ಜಿಹಾದ್’ ಆರಂಭಿಸಿದ್ದಾರೆ. ನಾವು ಭೂಮಿ ಜಿಹಾದ್ ಬಗ್ಗೆ (ಲ್ಯಾಂಡ್ ಜಿಹಾದ್) ಮಾತನಾಡುತ್ತೇವೆ; ಆದರೆ ಬಹುಬುಬುಲ್ ಹಕ್ (ಕಾಲೇಜಿನ ಮಾಲಿಕ) ಇವರು ಅಸ್ಸಾಂನ ವಿರೋಧದಲ್ಲಿ ಪ್ರವಾಹ ಜಿಹಾದ್ ಆರಂಭಿಸಿದ್ದಾರೆ. ಆದ್ದರಿಂದಲೇ ಅವರು ಗುಡ್ಡಗಾಡ ಪ್ರದೇಶದಲ್ಲಿನ ಮರಗಳನ್ನು ಕತ್ತರಿಸಿದ್ದಾರೆ. ಈ ಕೃತಿಗೆ ಜಿಹಾದವೆ ಎನ್ನಬೇಕಾಗುತ್ತದೆ; ಕಾರಣ ಅವರು ಉದ್ದೇಶಪೂರ್ವಕವಾಗಿ ಈ ಕೃತ್ಯ ಮಾಡಿದ್ದಾರೆ, ಎಂದು ನನಗೆ ಅನಿಸುತ್ತದೆ ಎಂದು ಹೇಳಿದರು. ಇಲ್ಲವಾದರೆ ಅವರು ವೃಕ್ಷಗಳನ್ನು ಕತ್ತರಿಸದೆ, ಗುಡ್ಡಗಳನ್ನು ಕೊರೆಯದೆ ಕಟ್ಟಡಗಳು ಕಟ್ಟಬಹುದಾಗಿತ್ತು, ಡ್ರೈನೇಜ್ ವ್ಯವಸ್ಥೆ ಮಾಡಬಹುದಾಗಿತ್ತು; ಆದರೆ ಅವರು ಯಾವುದೇ ಮಾಹಿತಿ ನೀಡದೆ ಭವಿಷ್ಯದಲ್ಲಿನ ಅಪಾಯದ ಯೋಚನೆ ಮಾಡದೆ ಬುಲ್ಡೋಜರ್ ಉಪಯೋಗಿಸಿ ಮರಗಳನ್ನು ನೆಲೆಸಮ ಮಾಡಿದರು ಗುಡ್ಡಗಳನ್ನು ಕೊರೆದರು ಎಂದು ಹೇಳಿದರು.
ಮುಖ್ಯಮಂತ್ರಿ ಸರಮಾ ಇವರು ಈ ಹಿಂದೆ ಬಂಗಾಳಿ ಮುಸಲ್ಮಾನ ರೈತರ ಮೇಲೆ ‘ಖತ ಚಿಹಾದ್’ನ (ಗೊಬ್ಬರ ಜಿಹಾದ್) ಆರೋಪ ಮಾಡಿದ್ದರು. ಸರಮಾ ಇವರು, ಮುಸಲ್ಮಾನ ರೈತರು ಹೆಚ್ಚೆಚ್ಚು ಆಹಾರಧಾನ್ಯ, ತರಕಾರಿ ಬೆಳೆಸುವುದಕ್ಕಾಗಿ ಬೃಹತ್ ಪ್ರಮಾಣದಲ್ಲಿ ಗೊಬ್ಬರಗಳನ್ನು ಉಪಯೋಗಿಸುತ್ತಾರೆ. ಅನ್ನವನ್ನು ಸೇವಿಸಿ ಜನರ ಆರೋಗ್ಯ ಹದಗೆಡುತ್ತದೆ ಎಂದು ಹೇಳಿದ್ದರು.