ಸರಕಾರಿ ಸಂಸ್ಥೆ ‘ಸೆಬಿ’ಯ ಅಧ್ಯಕ್ಷರೊಂದಿಗೆ ಅದಾನಿಯವರ ಆರ್ಥಿಕ ಅವ್ಯವಹಾರಕ್ಕೂ ನಂಟು ! – ‘ಹಿಂಡೆನ್‌ಬರ್ಗ್ ರಿಸರ್ಚ್’ನ ದಾವೆ

  • ಅಮೇರಿಕೆಯ ಸಂಸ್ಥೆ ‘ಹಿಂಡೆನ್‌ಬರ್ಗ್ ರಿಸರ್ಚ್’ನ ದಾವೆ

  • ಅಧ್ಯಕ್ಷೆ ಮಾಧವಿ ಬುಚ್ ಅವರಿಂದ ಆರೋಪ ‘ನಿರಾಧಾರ’ ಎಂದು ಹೇಳಿದ್ದಾರೆ !

ನ್ಯೂಯಾರ್ಕ್ (ಅಮೇರಿಕಾ) – ಹೂಡಿಕೆಯ ಸಂದರ್ಭದಲ್ಲಿ ಸಂಶೋಧನೆ ಮಾಡುವ ಅಮೇರಿಕೆಯ `ಹಿಂಡೆನ್‌ಬರ್ಗ್ ರಿಸರ್ಚ್ ಕಾರ್ಪೊರೇಷನ್’ ಸಂಸ್ಥೆಯು ಕಳೆದ ವರ್ಷ ಭಾರತದ ಅದಾನಿ ಉದ್ಯೋಗ ಸಮೂಹದ ವಿರುದ್ಧ ಗಂಭೀರ ಆರೋಪ ಮಾಡಿತ್ತು. ಈ ಆರೋಪಗಳು ಆಧಾರರಹಿತ ಮತ್ತು ಅಸತ್ಯವಾಗಿದೆಯೆಂದು ಸರ್ವೋಚ್ಚ ನ್ಯಾಯಾಲಯವು ಜನೇವರಿ 2024ರಲ್ಲಿ ವಜಾಗೊಳಿಸಿತ್ತು. ಹೀಗಿದ್ದರೂ, ಈಗ ಈ ಸಂಸ್ಥೆಯು ನೇರವಾಗಿ ಸರಕಾರಿ ಸಂಸ್ಥೆ ಸೆಕ್ಯುರಿಟೀಸ್ ಅಂಡ್ ಎಕ್ಸೆಂಜ್ ಬೋರ್ಡ ಆಫ್ ಇಂಡಿಯಾ ಅಂದರೆ `ಸೆಬಿ’ ಯ ಪ್ರಸ್ತುತ ಅಧ್ಯಕ್ಷೆ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಧವಲ ಬುಚ ಇವರಿಬ್ಬರಿಗೂ ಅದಾನಿ ಹಗರಣಕ್ಕೆ ನಂಟಿದೆ ಎಂದು ಆರೋಪಿಸಿದೆ.

‘ಹಿಂಡೆನ್ ಬರ್ಗ್ ರಿಸರ್ಚ್’ ಏನು ಹೇಳಿದೆ ?

`ಹಿಂಡೆನಬರ್ಗ’ ಸಂಸ್ಥೆಯು, `ಸೆಬಿ’ಯ ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ ಈ ಹಗರಣದಲ್ಲಿ ಬಳಸಿರುವ ಬರ್ಮುಡಾ ಮತ್ತು ಮಾರಿಶಸ್ ದೇಶದಲ್ಲಿನ ಹೂಡಿಕೆಯಲ್ಲಿ ಭಾಗಿಯಾಗಿದ್ದಾರೆ. ಅದರ ಲಾಭ ವಿನೋದ ಅದಾನಿಯವರಿಗೆ ಆಗಿದೆ. ಆದ್ದರಿಂದ ಸೆಬಿಯು ಇಷ್ಟು ದೊಡ್ಡ ಹಗರಣಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅವರು ಆಶ್ಚರ್ಯಕರ ರೀತಿಯಲ್ಲಿ ಕ್ರಮ ಕೈಕೊಳ್ಳಲು ನಿರುತ್ಸಾಹವನ್ನು ತೋರಿಸಿದ್ದರು. ವಿಶೇಷವೆಂದರೆ, ಅವರಿಗೆ ಈ ಹಗರಣದ ಬಗ್ಗೆ ನಿಖರವಾಗಿ ಸಂಭವಿಸಿರುವ ವಿವರಗಳ ಬಗ್ಗೆ ಮಾಹಿತಿಯಿತ್ತು; ಆದರೆ ಅವರು ಈ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಳ್ಳದೇ, ಹಿಂಡೆನ್‌ಬರ್ಗ್ ಸಂಸ್ಥೆಗೆ ನೊಟೀಸ್ ಕಳುಹಿಸಿತು. ಹಿಂಡೆನ್‌ಬರ್ಗ್ ಅದಾನಿ ಗ್ರೂಪ್ ಹಗರಣದ ಬಗ್ಗೆ 106 ಪುಟಗಳ ವರದಿಯನ್ನು ಸೆಬಿಗೆ ನೀಡಿತ್ತು. ಸೆಬಿ `ಅಷ್ಟು ಪುರಾವೆಗಳು ಸಾಕಾಗುವುದಿಲ್ಲ’ ಎಂದು ಹೇಳಿ ಅದಾನಿ ಸಮೂಹದ ಮೇಲಿನ ಆರೋಪಗಳನ್ನು ತಳ್ಳಿ ಹಾಕಿತು.

ನಮ್ಮ ಎಲ್ಲ ಆರ್ಥಿಕ ವ್ಯವಹಾರಗಳು ತೆರೆದ ಪುಸ್ತಕವಿದ್ದಂತೆ! – ‘ಸೆಬಿ’ ಅಧ್ಯಕ್ಷೆ

ಸೆಬಿಯ ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿಯವರು `ಹಿಂಡೆನ್‌ಬರ್ಗ್’ ಆರೋಪಗಳ ಕುರಿತು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ ಎಂದು ಹೇಳಿದ್ದಾರೆ. ಹಾಗೆಯೇ ನಮ್ಮ ಆರ್ಥಿಕ ವ್ಯವಹಾರಗಳೆಲ್ಲ ತೆರೆದ ಪುಸ್ತಕವಿದ್ದಂತೆ ಇದೆ. ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನಾವು ಸೆಬಿಗೆ ಒಪ್ಪಿಸಿದ್ದೇವೆ. ಇದಲ್ಲದೇ ಸೆಬಿಯ ಅಧ್ಯಕ್ಷರಾಗುವ ಮೊದಲಿನ ದಾಖಲೆಗಳನ್ನು ಬಹಿರಂಗಪಡಿಸಲು ನಮಗೆ ಯಾವುದೇ ಹಿಂಜರಿಕೆಯಿಲ್ಲ. ಈ ಹಿಂದೆಯೇ ಸೆಬಿಯು ಹಿಂಡೇನಬರ್ಗ ರಿಸರ್ಚ ಸಂಸ್ಥೆಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಹಿಂಡೆನ್‌ಬರ್ಗ್‌ ನಮಗೆ ಮಾನಹಾನಿ ಮಾಡುವ ಪ್ರಯತ್ನ ಮಾಡುತ್ತಿದೆಯೆಂದೂ ಅವರು ಆರೋಪಿಸಿದ್ದಾರೆ.

ಎಲ್ಲ ಆರೋಪ ದುರುದ್ದೇಶವಾಗಿದ್ದು ವಸ್ತುಸ್ಥಿತಿಯೊಂದಿಗೆ ಹಸ್ತಕ್ಷೇಪ ಮಾಡುವಂತಹದ್ದಾಗಿದೆ ! – ಅದಾನಿ ಉದ್ಯೋಗ ಸಮೂಹ

ಇನ್ನೊಂದೆಡೆ ಅದಾನಿ ಉದ್ಯಮ ಸಮೂಹವು ಈ ಕುರಿತು ತನ್ನ ನಿಲುವನ್ನು ಬಹಿರಂಗಗೊಳಿಸಿದ್ದು, ಉದ್ಯಮಸಮೂಹವು, ಹಿಂಡೆನಬರ್ಗ ರಿಸರ್ಚ ಹೊಸ ವರದಿಯಲ್ಲಿ ಮಾಡಿರುವ ಎಲ್ಲ ಆರೋಪಗಳು ದುರುದ್ದೇಶವಾಗಿದ್ದು ವಸ್ತುಸ್ಥಿತಿಯೊಂದಿಗೆ ಹಸ್ತಕ್ಷೇಪ ಮಾಡಿ ಮಂಡಿಸಲಾಗಿದೆ. ನಮ್ಮ ಮೇಲೆ ಮಾಡಿರುವ ಈ ಎಲ್ಲ ಆರೋಪಗಳನ್ನು ನಾವು ಸಂಪೂರ್ಣವಾಗಿ ನಿರಾಕರಿಸುತ್ತೇವೆ. ಈ ಹಿಂದೆ ಮಾಡಿರುವ ಎಲ್ಲ ಆರೋಪಗಳನ್ನು ಸಂಪೂರ್ಣವಾಗಿ ನಿರಾಧಾರವಾಗಿರುವುದು ಸಿದ್ಧವಾಗಿದೆ. ವಿದೇಶಗಳಲ್ಲಿ ನಮ್ಮ ಆರ್ಥಿಕ ವ್ಯವಹಾರವು ಸಂಪೂರ್ಣವಾಗಿ ಪಾರದರ್ಶಕವಾಗಿದೆ. ಎಲ್ಲ ದಾಖಲೆಗಳು ಮತ್ತು ಲೆಕ್ಕಪತ್ರಗಳು ಅನೇಕ ಸಾರ್ವಜನಿಕ ಕಾಗದಪತ್ರಗಳಲ್ಲಿ ನಿಯಮಿತವಾಗಿ ಬಹಿರಂಗಪಡಿಸಲಾಗುತ್ತದೆ. ಹಾಗೆಯೇ ಉದ್ದೇಶಪೂರ್ವಕ ಮಾನಹಾನಿ ಮಾಡುವ ಈ ಪ್ರಯತ್ನಗಳಲ್ಲಿ ನಮೂದಿಸಲಾಗಿರುವ ವ್ಯಕ್ತಿ ಅಥವಾ ಘಟನೆಯೊಂದಿಗೆ ಅದಾನಿ ಸಮೂಹದ ಯಾವುದೇ ಉದ್ಯಮದೊಂದಿಗೆ ಸಂಬಂಧವಿಲ್ಲ ಎಂದು ತಿಳಿಸಿದೆ.

ಸಂಪಾದಕೀಯ ನಿಲುವು

ಅದಾನಿ ಉದ್ಯೋಗ ಸಮೂಹದದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನೇರವಾಗಿ ಸಂಬಂಧ ಇದೆಯೆಂದು ವಿರೋಧ ಪಕ್ಷಗಳು ಹೇಳಿ ಪ್ರಧಾನಿಯವರ ಕಾಲೆಳೆಯಲು ಮಗ್ನವಾಗಿವೆ. ಕಳೆದ ವರ್ಷ ‘ಹಿಂಡೆನ್‌ಬರ್ಗ್ ರಿಸರ್ಚ್’ ಸಂಸ್ಥೆ ಮಾಡಿರುವ ಆರೋಪಗಳೆಲ್ಲವೂ ಆಧಾರರಹಿತವಾಗಿದೆಯೆಂದು ಸಾಬೀತಾಗಿರುವುದರಿಂದ ಈಗ ಅದು ಹೊಸದಾಗಿ ಒಂದು ಸರಕಾರಿ ಸಂಸ್ಥೆಯ ಮೇಲೆಯೇ ಆರೋಪ ಮಾಡುತ್ತಿದೆ. ಇದರಿಂದ ಇದನ್ನು ರಾಜಕೀಯ ಪಿತೂರಿ ಆಗಿದೆಯೆನ್ನುವುದನ್ನು ಅಲ್ಲಗಳೆಯುವಂತಿಲ್ಲ !