ಅಪಘಾನಿಸ್ತಾನದ ಸರಕಾರಿ ಸಿಬ್ಬಂದಿಗಳು ದಿನದಲ್ಲಿ ೫ ಸಾರಿ ನಮಾಜ್ ಮಾಡಲೇ ಬೇಕು !

ಕಾಬುಲ್- ಅಪಘಾನಿಸ್ತಾನದಲ್ಲಿ ತಾಲಿಬಾನ ಸರಕಾರ ಹೊರಡಿಸಿರುವ ಆದೇಶದ ಪ್ರಕಾರ, ಸರಕಾರಿ ಸಿಬ್ಬಂದಿಗಳು ದಿನದಲ್ಲಿ ೫ ಸಾರಿ ನಮಾಜ ಮಾಡಬೇಕು, ಹೀಗೆ ಮಾಡದಿದ್ದರೆ ಶಿಕ್ಷೆಗೆ ಸಿದ್ಧರಾಗಿ, ಎಂದು ತಾಲಿಬಾನದ ಸರ್ವೋಚ್ಚ ನಾಯಕ ಹಿಬತುಲ್ಲ ಅಖುಂದಜಾದ ಇವನು ಹೇಳಿದ್ದಾನೆ.

೧. ೨೦೨೧ ರಲ್ಲಿ ತಾಲಿಬಾನವು ಅಧಿಕಾರ ವಶಪಡಿಸಿಕೊಂಡ ನಂತರ ಅಖುಂದಜಾದ ಇವನು ಅಪಘಾನಿ ಜನರ ಮೇಲೆ ಬೃಹತ್ ಪ್ರಮಾಣದ ನಿಷೇಧಗಳು ಹೇರಿದ್ದಾನೆ. ಇದರಲ್ಲಿ ಮಹಿಳೆಯರು ಮತ್ತು ಹುಡುಗಿಯರ ಶಿಕ್ಷಣದ ಮೇಲೆ ಮತ್ತು ಸಂಗೀತದ ಮೇಲೆ ನಿಷೇದ ಹೇರಲಾಗಿರುವುದರ ಸಮಾವೇಶವಿದೆ.

೨. ತಾಲಿಬಾನ ಸರಕಾರದ ಸಚಿವಾಲಯಗಳಲ್ಲಿನ ಮತ್ತು ಸಂಸ್ಥೆಗಳಲ್ಲಿನ ಅಧಿಕಾರಿಗಳು ನಿಯೋಜಿತ ಸಮಯದಲ್ಲಿ ನಮಾಜ ಮಾಡಲು ಶರಿಯತ ಪ್ರಕಾರ ಕಡ್ಡಾಯವಾಗಿದೆ.

೩. ಯೋಗ್ಯ ಕಾರಣ ಇಲ್ಲದಿರುವಾಗ ನಮಾಜ ತಪ್ಪಿಸುವ ಸಿಬ್ಬಂದಿಗಳಿಗೆ ಮೊದಲು ಎಚ್ಚರಿಕೆ ನೀಡಲಾಗುವುದು; ಆದರೆ ಈ ಅಪರಾಧದ ಪುನರಾವೃತ್ತಿ ಆದರೆ ಅವರಿಗೆ ಯೋಗ್ಯವಾದಂತಹ ಶಿಕ್ಷೆ ನೀಡುವುದು ಅನಿವಾರ್ಯ, ಎಂದು ಆದೇಶದಲ್ಲಿ ನಮೂದಿಸಲಾಗಿದೆ.

೪. ನಮಾಜ್ ಮಾಡದಿದ್ದರೆ ಶಿಕ್ಷೆ ಏನು ಇರುವುದು, ಇದನ್ನು ತಾಲಿಬಾನವು ಸ್ಪಷ್ಟಪಡಿಸಿಲ್ಲ. ಸಿಬ್ಬಂದಿಗಳು ಕೆಲಸದ ಸಮಯದಲ್ಲಿ ನಮಾಜಗಾಗಿ ಉಪಸ್ಥಿತ ಇರುವ ಆದೇಶ ಹೇಗೆ ಪಾಲಿಸಬೇಕು, ಇದು ಕೂಡ ತಾಲಿಬಾನವು ಸ್ಪಷ್ಟಪಡಿಸಿಲ್ಲ.