ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದಲ್ಲಿ ಮತಾಂತರ ತಡೆ ಕಾಯ್ದೆಯಡಿ ಇದುವರೆಗೆ 1 ಸಾವಿರ 682 ಜನರನ್ನು ಬಂಧಿಸಲಾಗಿದೆ. ಜುಲೈ 31 ರವರೆಗೆ ಕಾನೂನಿನಡಿಯಲ್ಲಿ 835 ಅಪರಾಧಗಳನ್ನು ದಾಖಲಿಸಲಾಗಿದೆ. ಪೊಲೀಸ್ ಮಹಾನಿರ್ದೇಶಕ ಪ್ರಶಾಂತ ಕುಮಾರ್ ಮಾತನಾಡಿ, 2020 ರಲ್ಲಿ ಜಾರಿಗೊಳಿಸಿದ ಈ ಕಾನೂನಿನ ಅಡಿಯಲ್ಲಿ ಇದುವರೆಗೆ 2 ಸಾವಿರ 708 ಜನರನ್ನು ಗುರುತಿಸಲಾಗಿದೆ. ಇದರಲ್ಲಿ ಪರಾರಿಯಾಗಿರುವವರನ್ನು ಹುಡುಕಲಾಗುತ್ತಿದೆ.
ಪ್ರಶಾಂತ ಕುಮಾರ ಮಾತನಾಡಿ,
1. ಒಟ್ಟು ಶೇ. 98 ರಷ್ಟು ಅಂದರೆ 818 ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, 17 ಪ್ರಕರಣಗಳು ಬಾಕಿ ಉಳಿದಿವೆ. ಆಮಿಷವೊಡ್ಡುವುದು, ಬೆದರಿಕೆ ಹಾಕುವುದು ಅಥವಾ ಇತರ ಮಾರ್ಗಗಳಿಂದ ಮತಾಂತರವನ್ನು ಪ್ರಚೋದಿಸುವವರನ್ನು ಬಿಡಲಾಗುವುದಿಲ್ಲ.
2. 124 ಜನರು ಇತರರ ಮತಾಂತರಗೊಳಿಸುವುದರಲ್ಲಿ ಯಾವುದೇ ಪಾತ್ರವಿಲ್ಲ ಎಂದು ಕಂಡುಬಂದಿದ್ದರಿಂದ ಅವರನ್ನು ಬಿಡುಗಡೆಗೊಳಿಸಲಾಗಿದೆ. ಇತರೆ 70 ಜನರು ನ್ಯಾಯಾಲಯದಲ್ಲಿ ಶರಣಾಗಿದ್ದಾರೆ.
ಸಂಪಾದಕೀಯ ನಿಲುವುಲವ್ ಜಿಹಾದ್ ತಡೆಯಲು ಮತಾಂತರ ವಿರೋಧಿ ಕಾನೂನು ರೂಪಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದರೂ, ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ಘಟನೆಗಳು ನಿಂತಿಲ್ಲ. ಆದುದರಿಂದ ಇಂತಹವರಿಗೆ ಜೀವಾವಧಿ ಶಿಕ್ಷೆಯಲ್ಲ ಗಲ್ಲುಶಿಕ್ಷೆ ನೀಡಲು ಕಾನೂನನ್ನು ರೂಪಿಸಬೇಕು ! |