Vijay Surya Mandir : ಪುರಾತನ ದೇವಸ್ಥಾನಕ್ಕೆ ಮಸೀದಿ ಜಾಗ ಎಂದು ಹೇಳಿದ ಪುರಾತತ್ವ ಇಲಾಖೆ

ನಾಗರಪಂಚಮಿಯ ದಿನದಂದು ಪೂಜೆಗೆ ಅನುಮತಿ ಕೋರಿದ್ದು ಜಿಲ್ಲಾಧಿಕಾರಿಗಳು ಪುರಾತತ್ವ ಇಲಾಖೆಯ ಹೇಳಿಕೆಯ ನಂತರ ತಳ್ಳಿ ಹಾಕಿದರು !

ವಿದಿಶಾ (ಮಧ್ಯಪ್ರದೇಶ) – ಇಲ್ಲಿಯ ಪ್ರಾಚೀನ ವಿಜಯ ಸೂರ್ಯ ಮಂದಿರವನ್ನು ಮಸೀದಿಯಾಗಿದೆ ಎಂದು ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆಯು ಜಿಲ್ಲಾಧಿಕಾರಿಗಳಿಗೆ ಪತ್ರ ಕಳುಹಿಸಿದ ನಂತರ ಇಲ್ಲಿ ವಿವಾದ ನಿರ್ಮಾಣವಾಗಿದೆ. ಈಗ ಈ ದೇವಸ್ಥಾನ ಪುರಾತತ್ವ ಇಲಾಖೆಯ ಹಿಡಿತದಲ್ಲಿದೆ.

೧. ಅನೇಕ ದಶಕಗಳಿಂದ ಹಿಂದೂ ಭಕ್ತರು ನಾಗರಪಂಚಮಿಗೆ ಈ ದೇವಸ್ಥಾನದ ಪರಿಸರದಲ್ಲಿ ಧಾರ್ಮಿಕ ವಿಧಿಗಳು ನಡೆಸುತ್ತಿದ್ದರು. ಈ ವರ್ಷ ಕೂಡ ಕೆಲವು ಹಿಂದೂ ಸಂಘಟನೆಗಳು ಆಗಸ್ಟ್ ೯ ರಂದು ನಾಗರಪಂಚಮಿಗೆ ಇಲ್ಲಿಯ ಪರಿಸರದಲ್ಲಿ ಪ್ರವೇಶಿಸಿ ಪೂಜೆ ನಡೆಸಲು ಸರಕಾರಕ್ಕೆ ಅನುಮತಿ ಕೇಳಿದ್ದು. ಜನರ ಬೇಡಿಕೆಯ ಪತ್ರ ಜಿಲ್ಲಾಧಿಕಾರಿ ಬುದ್ದೇಶ ವೈಶ್ಯ ಇವರು ಪುರಾತತ್ವ ಇಲಾಖೆಗೆ ಕಳುಹಿಸಿದ್ದರು. ಈ ಪತ್ರದ ಬಗ್ಗೆ ಇಲಾಖೆಯು ೧೯೫೧ ಗೆಜೆಟ್ ಆಧಾರ ನೀಡುತ್ತಾ ಉತ್ತರದಲ್ಲಿ, ಪುರಾತತ್ವ ಇಲಾಖೆಯು ಈ ಜಾಗದ ವರ್ಗೀಕರಣ ‘ಬಿಜಮಂಡಲ ಮಸೀದಿ’ ಎಂದು ಮಾಡಿದೆ. ಈ ಉತ್ತರದ ನಂತರ ಜಿಲ್ಲಾಧಿಕಾರಿಗಳು ಪೂಜೆಗೆ ಅನುಮತಿ ನಿರಾಕರಿಸಿರುವುದರಿಂದ ಹಿಂದೂ ಸಂಘಟನೆಗಳಲ್ಲಿ ಆಕ್ರೋಶ ಉಂಟಾಗಿದೆ. ಜಿಲ್ಲಾಧಿಕಾರಿ ಬುದ್ದೇಶ ವೈಶ್ಯ ಇವರು ಸ್ಥಳೀಯ ಮಾಧ್ಯಮಗಳಿಗೆ, ಪುರಾತತ್ವ ಸಮೀಕ್ಷಾ ಇಲಾಖೆಯ ನಿಯಮದ ಪ್ರಕಾರ ಎಲ್ಲವೂ ಮಾಡಲಾಗುವುದು ಎಂದು ಹೇಳಿದರು.

೨. ಪುರಾತತ್ವ ಇಲಾಖೆಯ ಈ ದಾವೆಗೆ ಹಿಂದೂ ಸಂಘಟನೆಗಳು ವಿರೋಧಿಸುತ್ತಿವೆ. ಸಂಘಟನೆಯ ಅಭಿಪ್ರಾಯ, ಪುರಾತನ ಕಾಲದಿಂದಲೂ ಸೂರ್ಯ ಮಂದಿರವು ಹಿಂದುಗಳ ಶ್ರದ್ಧಾಸ್ಥಾನವಾಗಿದೆ. ಶಾಸಕ ಟಂಡನ್ ಇವರು ‘ಈ ದೇವಸ್ಥಾನದ ಮಾಲಿಕತ್ವ’ ಸಾಬಿತು ಪಡಿಸಲು ಸಮೀಕ್ಷೆ ನಡೆಸಲು ಆಗ್ರಹಿಸಿದ್ದರು. ಶಾಸಕಾ ಮುಕೇಶ ಟಂಡನ್ ವಿಧಾನಸಭೆಯಲ್ಲಿ ಈ ಅಂಶ ಮಂಡಿಸುವವರಿದ್ದಾರೆ. ಹಾಗೂ ಪ್ರಧಾನಮಂತ್ರಿ ಮೋದಿ ಮತ್ತು ಕೇಂದ್ರ ಸಚಿವ ಗಜೇಂದ್ರ ಸಿಂಹ ಶೇಖಾವತ್ ಇವರ ಭೇಟಿಗಾಗಿ ದೆಹಲಿಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಏಪ್ರಿಲ್ ೧೯೯೨ ರಲ್ಲಿ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಪುರಾತತ್ವ ಇಲಾಖೆ ಮತ್ತು ಜಿಲ್ಲಾಧಿಕಾರಿ ಇವರಲ್ಲಿನ ಯಶಸ್ವಿ ಚರ್ಚೆಗಳು ನಡೆದಿದ್ದವು, ಅದರ ನಂತರ ೧೧ ಜನರ ಗುಂಪಿಗೆ ದೇವಸ್ಥಾನದಲ್ಲಿ ಪೂಜೆ ನಡೆಸುವ ಅನುಮತಿ ನೀಡಲಾಗಿತ್ತು .

ವಿಜಯ ಸೂರ್ಯ ಮಂದಿರದ ಇತಿಹಾಸ

ವಿಜಯ ಸೂರ್ಯ ಮಂದಿರ ಭೋಪಾಲದಿಂದ ಸುಮಾರು ೬೦ ಕಿಲೋಮೀಟರ್ ಮತ್ತು ಸಾಂಚಿ ಸ್ತೂಪದಿಂದ ಸುಮಾರು ೧೦ ಕಿಲೋಮೀಟರ್ ಅಂತರದಲ್ಲಿದೆ. ಪುರಾತತ್ವ ಇಲಾಖೆಯ ಭೋಪಾಲ್ ವಿಭಾಗದ ಜಾಲತಾಣದಲ್ಲಿ, ಬೀಜ ಮಂಡಲ ಮಸೀದಿ ಒಂದು ಹಿಂದೂ ದೇವಸ್ಥಾನದ ಅವಶೇಷಗಳ ಮೇಲೆ ಕಟ್ಟಲಾಗಿತ್ತು ಮತ್ತು ಒಂದು ಕಂಬದಲ್ಲಿ ಸಿಕ್ಕಿರುವ ಶಿಲಾಶಾಸನದಲ್ಲಿ ಅದು ದೇವಿ ಚಾರ್ಚಿಕೆಯ ದೇವಸ್ಥಾನವಾಗಿತ್ತು’, ಎಂದು ಹೇಳಿದ್ದಾರೆ. ಈ ದೇವಸ್ಥಾನ ೧೧ ನೇ ಅಥವಾ ೧೨ ನೇ ಶತಮಾನದಲ್ಲಿ ಸೂರ್ಯ ದೇವನ ಗೌರವಾರ್ಥವಾಗಿ ಕಟ್ಟಲಾಗಿದೆ ಎಂದು ನಂಬಲಾಗುತ್ತಿದೆ. ಮೊಗಲರ ಆಡಳಿತದಲ್ಲಿ ವಿಶೇಷವಾಗಿ ಅವರಂಗಜೇಬನ ಕಾಲದಲ್ಲಿ ಬಹಳಷ್ಟು ದೇವಸ್ಥಾನಗಳಿಗೆ ಹಾನಿ ಉಂಟಾಗಿತ್ತು. ಅದರ ನಂತರ ೧೭ ನೇ ಶತಮಾನದಲ್ಲಿ ಮಸೀದಿ ಎಂದು ಅದನ್ನು ಪುನರ್ ನಿರ್ಮಾಣ ಮಾಡಲಾಗಿದೆ; ಆದರೆ ಮರಾಠ ಆಡಳಿತದಲ್ಲಿ ಈ ಮಸೀದಿ ಬೇರೆಡೆ ಸ್ಥಳಾಂತರಿಸಿರುವುದರಿಂದ ಈ ಜಾಗ ಖಾಲಿ ಇತ್ತು ಎಂದು ಸ್ಥಳೀಯರ ಹೇಳಿಕೆ ಆಗಿದೆ.

೧೯೩೪ ರಲ್ಲಿ ದೇವಸ್ಥಾನದ ಅವಶೇಷಗಳು ದೊರೆತನಂತರ ಹಿಂದೂ ಮಹಾಸಭೆಯ ನೇತೃತ್ವದಲ್ಲಿ ದೇವಸ್ಥಾನದ ಸಂವರ್ಧನೆಗಾಗಿ ಆಂದೋಲನ ಆರಂಭವಾದವು. ಇದರಿಂದ ಮಹತ್ವಪೂರ್ಣ ರಾಜಕೀಯ ಪರಿಣಾಮವಾಯಿತು. ಅಲ್ಲಿ ಹಿಂದೂ ಮಹಾಸಭೆಯ ಅಭ್ಯರ್ಥಿ ಸ್ಥಳೀಯ ಚುನಾವಣೆಯಲ್ಲಿ ಆಯ್ಕೆಯಾದರು. ಅಂದಿನಿಂದ ದೇವಸ್ಥಾನ ವರ್ಷದಲ್ಲಿ ಒಮ್ಮೆ ನಾಗರಪಂಚಮಿ ಪೂಜೆಗಾಗಿ ತೆರೆಯಲಾಗುತ್ತದೆ. ೧೯೬೫ ರಲ್ಲಿ ಧಾರ್ಮಿಕ ಬಿಗುವನ್ನು ದೂರಗೊಳಿಸುವುದಕ್ಕಾಗಿ ತತ್ಕಾಲಿನ ಮುಖ್ಯಮಂತ್ರಿ ದ್ವಾರಕಾ ಪ್ರಸಾದ ಮಿಶ್ರ ಇವರು ಅಲ್ಲಿ ಮುಸಲ್ಮಾನರಿಗಾಗಿ ಸ್ವತಂತ್ರ ಈದ್ಗಾ (ಸಮಾಜ ಪಠಣೆ ಮಾಡುವ ಜಾಗ) ಸ್ಥಾಪಿಸಿದರು. ಈ ವಿವಾದ ಮತ್ತೆ ಭೋಗಿಲೆದ್ದ ನಂತರ ಹಿಂದೂ ಸಂಘಟನೆಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೆ ಬೀಜ ಮಂಡಲ ವಿಜಯ ಮಂದಿರ ನಿಯಮಿತ ಪೂಜೆಗಾಗಿ ಮತ್ತೆ ಆರಂಭಿಸಲು ಕರೆ ನೀಡಿದ್ದಾರೆ.

ಸಂಪಾದಕೀಯ ನಿಲುವು

  • ಪುರಾತತ್ವ ಇಲಾಖೆ ಕೇಂದ್ರ ಸರಕಾರದ ಆಧೀನದಲ್ಲಿರುವಾಗ ಕೂಡ ಹಿಂದುಗಳು ಅವರ ಪ್ರಾಚೀನ ದೇವಸ್ಥಾನಗಳನ್ನು ಮಸೀದಿ ಎಂದೇ ಈಗಲೂ ನೋಡಬೇಕಾದ ಸ್ಥಿತಿ ಇದೆ ಇದು ಹಿಂದುಗಳಿಗೆ ಅಪೇಕ್ಷಿತವಿಲ್ಲ !
  • ದೇಶದಲ್ಲಿ ಎಷ್ಟು ದೇವಸ್ಥಾನಗಳ ಮೇಲೆ ಮಸೀದಿಗಳನ್ನು ಕಟ್ಟಿದ್ದಾರೆ ಮತ್ತು ಇಂತಹ ಸ್ಥಳಗಳು ಪುರಾತತ್ವ ಇಲಾಖೆಯ ವಶದಲ್ಲಿ ಇವೆ, ಅದನ್ನು ಹಿಂದುಗಳ ವಶಕ್ಕೆ ನೀಡಿ ಅಲ್ಲಿ ಮತ್ತೆ ಭವ್ಯ ದೇವಸ್ಥಾನಗಳನ್ನು ಕಟ್ಟುವುದಕ್ಕಾಗಿ ಕೇಂದ್ರ ಸರಕಾರ ಕಾನೂನು ರೂಪಿಸಬೇಕು !
  • ಹಿಂದೂಗಳ ನಾಶ ಬಯಸುವ ಈ ಪುರಾತತ್ವ ಇಲಾಖೆ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ ? ಈ ಇಲಾಖೆ ವಿಸರ್ಜಿತಗೊಳಿಸಿ ಅದರಲ್ಲಿ ರಾಷ್ಟ್ರ ಪ್ರೇಮಿ ಮತ್ತು ಧರ್ಮ ಪ್ರೇಮಿಗಳನ್ನು ನೇಮಕಗೊಳಿಸುವುದು ಆವಶ್ಯಕವಾಗಿದೆ ಎಂದು, ಇದರಿಂದ ತಿಳಿದು ಬರುತ್ತಿದೆ !