ಭಾರತಕ್ಕೆ ಬರಲು ಯತ್ನಿಸುತ್ತಿದ್ದ 600 ಜನರನ್ನು ಭಾರತೀಯ ಸೈನಿಕರು ವಾಪಸ್ ಕಳುಹಿಸಿದ್ದಾರೆ !

ಬಂಗಾಳದ ಮಾಣಿಕ್‌ಜಂಗ್‌ನ ಬಾಂಗ್ಲಾದೇಶ ಗಡಿಯಲ್ಲಿ ಘಟನೆ

ಕೋಲಕಾತಾ (ಬಂಗಾಳ) – ಗಡಿ ಭದ್ರತಾ ಪಡೆಯು 500 ರಿಂದ 600 ಬಾಂಗ್ಲಾದೇಶಿ ಪ್ರಜೆಗಳ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದೆ. ಮಾಣಿಕ್‌ಗಂಜ್ ಗಡಿ ಬಳಿ ಈ ಘಟನೆ ನಡೆದಿದೆ. ಒಳನುಸುಳಲು ಯತ್ನಿಸುತ್ತಿದ್ದ ಎಲ್ಲರನ್ನು ಗಡಿ ಭದ್ರತಾ ಪಡೆ ಉತ್ತರ ಬಂಗಾಳ ಗಡಿಭಾಗದ ಅಧಿಕಾರಿಗಳು ತಡೆದು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿದ್ದಾರೆ.

ಬಾಂಗ್ಲಾದೇಶದಿಂದ ಭಾರತದ ಗಡಿಯತ್ತ ಅಲ್ಪಸಂಖ್ಯಾತರ ಚಲನವಲನವಿಲ್ಲ ಎಂದು ಉತ್ತರ ಬಂಗಾಳ ಫ್ರಂಟಿಯರ್ ಒಂದು ಮನವಿ ಪ್ರಸಾರ ಮಾಡಿದೆ. ನೆರೆದ ಜನರ ಮನಸ್ಸಿನಲ್ಲಿ ಸ್ಥಳೀಯ ಅಶಾಂತಿಯ ಭಯವಿತ್ತು. ಬಾಂಗ್ಲಾದೇಶ ಸೇನೆಯು ಈ ಜನರಿಗೆ ಅವರ ಸುರಕ್ಷತೆಯ ಭರವಸೆ ನೀಡಿದೆ ಮತ್ತು ಅವರ ಮನೆಗಳಿಗೆ ಮರಳಲು ಅವರನ್ನು ಪ್ರೋತ್ಸಾಹಿಸಿದೆ.

ಬಂಗಾಳದ ಉತ್ತರ ದಿನಾಜ್‌ಪುರ, ಡಾರ್ಜಿಲಿಂಗ್, ಜಲ್ಪೈಗುರಿ ಮತ್ತು ಕೂಚ್ ಬೆಹಾರ್ ಜಿಲ್ಲೆಗಳಲ್ಲಿ ಒಟ್ಟು 4 ಸಾವಿರದ 96 ಕಿ.ಮೀ. ಉದ್ದದ ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಯ ಪೈಕಿ 932.39 ಕಿ.ಮೀ. ಉದ್ದದ ಗಡಿಯನ್ನು ಗಡಿ ಭದ್ರತಾ ಪಡೆಯ ಉತ್ತರ ಬಂಗಾಳ ಫ್ರಂಟಿಯರ್ ರಕ್ಷಿಸುತ್ತದೆ.