ದೇವಾಲಯದ ಭೂಮಿಯನ್ನು ಅತಿಕ್ರಮಣ ಮಾಡಿದವರಿಗೆ ಸ್ಥಳಾಂತರಿಸಿ ಅಥವಾ ಬಾಡಿಗೆದಾರರನ್ನಾಗಿ ಮಾಡಿ ! – ಮದ್ರಾಸ್ ಉಚ್ಚ ನ್ಯಾಯಾಲಯ

ಚೆನ್ನೈ – 2004 ರ ಸುನಾಮಿಯಿಂದ ನಿರಾಶ್ರಿತರು ‘ಈಸ್ಟ್ ಕೋಡ್ ರಸ್ತೆ’ ಯಲ್ಲಿರುವ ದೇವಾಲಯದ ಭೂಮಿಯನ್ನು ಅತಿಕ್ರಮಣ ಮಾಡಿ ವಾಸಿಸುತ್ತಿದ್ದಾರೆ. ‘ಈ ನಿವಾಸಿಗಳನ್ನು ಹತ್ತಿರದ ಪ್ರದೇಶ ನೋಡಿ ಅಥವಾ ಅತಿಕ್ರಮಣ ಮಾಡಿದವರಿಗೆ ದೇವಾಲಯದ ಜಾಗವನ್ನು ಬಾಡಿಗೆಗೆ ಕೊಡಿ’, ಎಂದು ಮದ್ರಾಸ್ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ. ಕೃಷ್ಣಕುಮಾರ್ ಮತ್ತು ನ್ಯಾಯಮೂರ್ತಿ ಪಿ.ಬಿ. ಬಾಲಾಜಿ ಅವರ ವಿಭಾಗೀಯ ಪೀಠವು ರಾಜ್ಯd ಧಾರ್ಮಿಕ ದತ್ತಿ ಇಲಾಖೆಗೆ ಆದೇಶ ನೀಡಿದೆ.

1. 2022ರಲ್ಲಿ ಧಾರ್ಮಿಕ ದತ್ತಿ ಇಲಾಖೆಯು ಅತಿಕ್ರಮಣಕಾರರಿಗೆ, ಅತಿಕ್ರಮಿಸಿರುವ ದೇವಸ್ಥಾನದ ಭೂಮಿಯನ್ನು ಹಿಂದಿರುಗಿಸುವಂತೆ ನೋಟಿಸ್ ನೀಡಿತ್ತು.

2. ಧಾರ್ಮಿಕ ದತ್ತಿ ವಿಭಾಗದ ಆಯುಕ್ತರ ಸೂಚನೆಯ ಹೊರತಾಗಿಯೂ ಅತಿಕ್ರಮಣದಾರರು ಅಲ್ಲಿಂದ ತೆರವು ಮಾಡದಿರಲು ನಿರ್ಧರಿಸಿದರು ಮತ್ತು ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋದರು.

3. ಸಂಧಿರನ್ ಮತ್ತು ಇತರ 36 ಜನರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ‘ಅರ್ಜಿದಾರರು ದೇವಾಲಯದ ಜಾಗವನ್ನು ತೆರವು ಮಾಡಲು ಸಿದ್ದರಾದರೆ, ಅವರಿಗೆ ಅಗತ್ಯ ಕಾಲಾವಕಾಶ ನೀಡಲಾಗುವುದು ಅಥವಾ ಅರ್ಜಿದಾರರು ದೇವಾಲಯದ ಜಾಗದಲ್ಲಿ ಇರುವದಕ್ಕಾಗಿ ಬಾಡಿಗೆದಾರರಾಗಿ ಇರಬಹುದೆ, ಇದರ ಬ್ಗಗೆ ವಿಚಾರ ಮಾಡಬಹುದು.’ಎಂದು ಹೇಳಿದೆ.