ಲಂಡನ್ (ಬ್ರಿಟನ) – ಬ್ರಿಟನನಲ್ಲಿ ಒಂದು ವಾರದಿಂದ ನಡೆಯುತ್ತಿರುವ ಗಲಭೆಯ ಹಿನ್ನೆಲೆಯಲ್ಲಿ ಪ್ರಧಾನಿ ಕೀರ ಸ್ಟಾರ್ಮರ ಅವರು ಮಾತನಾಡಿ, ‘ಗಲಭೆಕೋರರಿಗೆ ಕಾನೂನಿನ ಶಕ್ತಿ ತೋರಿಸಬೇಕು. ಬಂಧಿಸಲಾಗಿರುವವರಿಗೆ ವಾರದಲ್ಲಿಯೇ ನ್ಯಾಯಾಲಯದಿಂದ ಸೂಕ್ತ ಶಿಕ್ಷೆಯನ್ನು ನೀಡಲಾಗುವುದೆಂದು ಭರವಸೆ ಇದೆ’ ಎಂದು ಹೇಳಿದರು. ಕಳೆದ ತಿಂಗಳು ಬ್ರಿಟನ್ನಿನ ಸೌತ್ ಪೋರ್ಟ ನಗರದ ಒಂದು ಡ್ಯಾನ್ಸ್ ಕ್ಲಬ್‌ನಲ್ಲಿ ಚಾಕುವಿನಿಂದ ನಡೆಸಿದ ದಾಳಿಯಲ್ಲಿ 3 ಹುಡುಗಿಯರು ಸಾವನ್ನಪ್ಪಿದ್ದರು. ಹಾಗೂ 10 ಜನರು ಗಾಯಗೊಂಡಿದ್ದರು. ಶಂಕಿತರು ಮುಸಲ್ಮಾನ ನಿರಾಶ್ರಿತರಾಗಿದ್ದಾರೆ ಎಂಬ ಸುದ್ದಿ ಹರಡಿದ್ದರಿಂದ ನಿರಾಶ್ರಿತ ಮುಸಲ್ಮಾನರ ಮೇಲೆ ಮತ್ತು ಮಸಿದಿಗಳ ಮೇಲೆ ದಾಳಿ ನಡೆಯಿತು. ಈ ಕುರಿತು ಪ್ರಧಾನಿ ಸ್ಟಾರ್ಮರ ಇವರು ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.
ಮುಸಲ್ಮಾನರ ಮೇಲೆ ನಡೆದ ದಾಳಿ ಸಹಿಸಲಾಗದು ! – ಸ್ಟಾರ್ಮರಸ್ಟಾರ್ಮರ ತಮ್ಮ ಮಾತನ್ನು ಮುಂದುವರಿಸಿ, ಪರಿಸ್ಥಿತಿಯ ಮೇಲೆ ನಿಯಂತ್ರಣವನ್ನಿಡಲು ಬ್ರಿಟನ್ನಿನಲ್ಲಿ ಸುಮಾರು 6 ಸಾವಿರ ವಿಶೇಷ ಗಲಭೆ ನಿಯಂತ್ರಣ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಕಾರಣ ಏನೇ ಆಗಲಿ ಇದು ನಿಷೇಧದ ಮಾರ್ಗವಲ್ಲ. ಇದು ಹಿಂಸೆಯಾಗಿದೆ ಮತ್ತು ನಾವು ಮಸಿದಿ ಅಥವಾ ನಮ್ಮ ಮುಸಲ್ಮಾನ ಸಮುದಾಯದ ಮೇಲೆ ದಾಳಿಯನ್ನು ಸಹಿಸುವುದಿಲ್ಲ. ಈ ಗಲಭೆಯಲ್ಲಿ ಭಾಗವಹಿಸಿರುವವರ ವಿರುದ್ಧ ಕಾನೂನಿನ ಬಲದಿಂದ ಕೆಲಸ ಮಾಡುತ್ತದೆ ಎಂದು ಹೇಳಿದರು.
|