ಬಾಂಗ್ಲಾದೇಶದ ಸ್ಥಿತಿಯಂತೆ ಭಾರತದಲ್ಲೂ ಆಗಬಹುದಂತೆ !’ – ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್

ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ದೇಶ ವಿರೋಧಿ ಹೇಳಿಕೆ

ನವ ದೆಹಲಿ – ‘ಭಾರತಲ್ಲಿ ಈಗ ಎಲ್ಲವೂ ಸಾಮಾನ್ಯವಾಗಿದೆಯೆಂದು ಅನಿಸುತ್ತಿದ್ದರೂ, ನಮ್ಮ ದೇಶ ಎಷ್ಟು ದೊಡ್ಡದಾಗಿದೆ ಎಂದರೆ ಬಾಂಗ್ಲಾದೇಶದಂತಹ ಪರಿಸ್ಥಿತಿ ಭಾರತದಲ್ಲಿಯೂ ಸಂಭವಿಸಬಹುದು. ಕಾರಣ, ಒಳಗಿಂದೊಳಗೆ ಎಲ್ಲಿಯೋ ಏನೋ ಕುದಿಯುತ್ತಿದೆ’, ಎಂಬುದು ಸತ್ಯವಾಗಿದೆ, ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಇಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.

ಸಲ್ಮಾನ್ ಖುರ್ಷಿದ್ ಮಾತನಾಡುತ್ತಾ, ಮಹಿಳಾ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ವಿರುದ್ಧ ದೆಹಲಿಯ ಶಾಹೀನ್ ಬಾಗ್‌ನಲ್ಲಿ ನಡೆದ ಪ್ರತಿಭಟನೆ ದೇಶಾದ್ಯಂತ ಇಂತಹ ಪ್ರತಿಭಟನೆಗೆ ಸ್ಫೂರ್ತಿ ನೀಡಿತು. ಶಾಹೀನ್ ಬಾಗ್‌ನಂತಹ ಚಳವಳಿ ಇಂದು ದೇಶದಲ್ಲಿ ನಡೆಯಲು ಸಾಧ್ಯವಿಲ್ಲ. ‘ಶಾಹೀನ್ ಬಾಗ್ ಆಂದೋಲನ ಯಶಸ್ವಿಯಾಯಿತು’, ಎಂದು ನಿಮ್ಮಲ್ಲಿ ಅನೇಕ ಜನರಿಗೆ ಅನಿಸುತ್ತಿದ್ದರೂ, ಶಾಹೀನ ಬಾಗನಲ್ಲಿ ಪ್ರತಿಭಟನೆ ಮಾಡಿದ ಮತ್ತು ಸಂಬಂಧಿತ ಜನರಿಗೆ ಏನಾಗುತ್ತದೆ ಎಂದು ನನಗೆ ತಿಳಿದಿದೆ, ಅವರಲ್ಲಿ ಕೆಲವರು ಇನ್ನೂ ಜೈಲಿನಲ್ಲಿದ್ದಾರೆ, ಅವರಲ್ಲಿ ಎಷ್ಟೋ ಜನರಿಗೆ ಜಾಮೀನು ಪಡೆಯಲು ಇದುವರೆಗೂ ಸಾಧ್ಯವಾಗಿಲ್ಲ ಮತ್ತು ಎಷ್ಟೋ ಜನರನ್ನು ದೇಶದ ಶತ್ರುಗಳು ಎಂದು ಹೇಳಲಾಗುತ್ತಿದೆ. `ಶಾಹೀನ್ ಬಾಗನಂತಹ ಪ್ರತಿಭಟನೆಯ ಪುನರಾವರ್ತನೆಯಾಗುತ್ತದೆಯೇ?’, ಎನ್ನುವ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡೆನು.ಆದರೆ ನನಗೆ ಅದು ಆಗುವುದು ಎನ್ನುವ ಖಾತ್ರಿಯಿಲ್ಲ. ಏಕೆಂದರೆ ಜನರಿಗೆ ನಿಜವಾಗಿಯೂ ಬಹಳಷ್ಟು ತೊಂದರೆಯನ್ನು ಸಹಿಸಬೇಕಾಗುತ್ತಿದೆ.’ ಎಂದು ಹೇಳಿದರು.

ಸಂಪಾದಕೀಯ ನಿಲುವು

ಖುರ್ಷಿದ್ ಮೊದಲು ಮತಾಂಧ ಮುಸಲ್ಮಾನ ನಂತರ ಕಾಂಗ್ರೆಸ್ಸಿಗರು. ಆದ್ದರಿಂದ ಅವರ ಬಾಯಿಯಿಂದ ದೇಶವಿರೋಧಿ ಹೇಳಿಕೆ ಬಾರದಿದ್ದರೆ ಆಶ್ಚರ್ಯವೆನಿಸುತ್ತಿತ್ತು. ಭಾರತವನ್ನು ಇಂತಹವರೇ ಮುಳುಗಿಸಲು ಇಲ್ಲಿಯವರೆಗೆ ಪ್ರಯತ್ನಿಸಿದ್ದಾರೆ. ಬಾಂಗ್ಲಾದೇಶದಂತಹ ಪರಿಸ್ಥಿತಿ ಭಾರತಕ್ಕೆ ಬರಬಾರದೆಂದಿದ್ದರೆ, ಇಂತಹ ದೇಶದ್ರೋಹಿ ಅಪರಾಧಗಳಿಗಾಗಿ ಜೈಲಿಗೆ ಹಾಕಬೇಕು !