ಅಮೇರಿಕಾ ಶೇಖ್ ಹಸೀನಾರಿಗೆ ವೀಸಾ ನಿರಾಕರಿಸಿರುವ ಬಗ್ಗೆ ಚರ್ಚೆ

ಮಗನಿಂದ ಸುದ್ದಿಯ ನಿರಾಕರಣೆ

(ಡೀಪ್ ಸ್ಟೇಟ್ ಎಂದರೆ ಒಂದು ರಾಜಕೀಯ ವ್ಯವಸ್ಥೆಯ ತೋರಿಕೆಗೆ ಅಲ್ಲಿಯ ಸರಕಾರವನ್ನು ನಡೆಸುತ್ತಿದ್ದರೂ, ಸರಕಾರದ ನಿರ್ಣಯವನ್ನು ನಿರ್ಧರಿಸುವಲ್ಲಿ ಕೆಲವು ಅತ್ಯಂತ ಶಕ್ತಿಶಾಲಿ ಜನರು ತೆಗೆದುಕೊಳ್ಳುತ್ತಾರೆ. ಈ ವ್ಯವಸ್ಥೆಯನ್ನು ‘ಡೀಪ್ ಸ್ಟೇಟ್’ ಎಂದು ಕರೆಯಲಾಗುತ್ತದೆ.)

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಶೇಖ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಒಂದು ಸುದ್ದಿವಾಹಿನಿಯು ಅಮೇರಿಕೆಯಲ್ಲಿ ವಾಸಿಸುತ್ತಿರುವ ಅವರ ಮಗ ಸಜೀಬ ವಾಜೇದನೊಂದಿಗೆ ಸಂಪರ್ಕಿಸಿತು. ಅಮೇರಿಕೆಯ ವೀಸಾ (ಒಂದು ದೇಶದಲ್ಲಿ ಕೆಲವು ಕಾಲಾವಧಿಗಾಗಿ ವಾಸಿಸಲು ಸಿಗುವ ಅನುಮತಿ) ರದ್ದುಗೊಳಿಸುವ ಸಂದರ್ಭದಲ್ಲಿ ಚರ್ಚೆಯಾಗುತ್ತಿರುವ ವಿಷಯದಲ್ಲಿ ಅವರನ್ನು ವಿಚಾರಿಸಿದಾಗ ಅವರು ಮಾತನಾಡಿ, ಅಮೇರಿಕೆಯೊಂದಿಗೆ ಇಂತಹ ಯಾವುದೇ ಚರ್ಚೆಗಳು ನಡೆದಿಲ್ಲ. ನನ್ನ ತಾಯಿ ಬಾಂಗ್ಲಾದೇಶದಲ್ಲಿ ಬಹಳಷ್ಟು ವರ್ಷ ಕೆಲಸ ಮಾಡಿದ್ದಾರೆ. ಇದರಿಂದ ಅವಳು ನಿವೃತ್ತಿಯ ವಿಚಾರದಲ್ಲಿದ್ದರು ಎಂದು ಹೇಳಿದರು.

ವಾಜೆದ ತಮ್ಮ ಮಾತನ್ನು ಮುಂದುವರಿಸಿ, ಕುಟುಂಬವು ಈಗ ಒಟ್ಟಿಗೆ ಸಮಯವನ್ನು ಕಳೆಯಲು ಯೋಜಿಸಿದೆ. ಈ ಸಮಯವನ್ನು ಒಟ್ಟಿಗೆ ಮತ್ತು ಎಲ್ಲಿ ಕಳೆಯಬೇಕು ಎನ್ನುವ ಬಗ್ಗೆ ನಾವು ವಿಚಾರ ಮಾಡುತ್ತೇವೆ. ನಾನು ವಾಶಿಂಗ್ಟನನಲ್ಲಿ ವಾಸಿಸುತ್ತಿದ್ದೇನೆ. ನನ್ನ ಕೆಲವು ಸಂಬಂಧಿಕರು ಲಂಡನ್ನಿನಲ್ಲಿದ್ದಾರೆ. ನನ್ನ ಸಹೋದರಿ ದೆಹಲಿಯಲ್ಲಿದ್ದಾಳೆ. ಆದುದರಿಂದ ನನಗೆ ನನ್ನ ತಾಯಿ (ಶೇಖ ಹಸೀನಾ) ಸಧ್ಯಕ್ಕೆ ಎಲ್ಲಿ ಹೋಗುತ್ತಾಳೆಂದು ತಿಳಿದಿಲ್ಲ ಎಂದು ಹೇಳಿದರು.

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆಗೆ ತ್ಯಾಗಪತ್ರ ನೀಡಿ ಹಸೀನಾ ವಾಯುಪಡೆಯ ವಿಮಾನದ ಮೂಲಕ ಭಾರತದ ಗಾಝಿಯಾಬಾದಿಗೆ ಬಂದರು. ಇಲ್ಲಿಂದ ಅವರು ಮುಂದೆ ಲಂಡನ್ನಿಗೆ ಪ್ರವಾಸ ಮಾಡುವವರಿದ್ದರು’, ಹೀಗಿದ್ದರೂ, ಆ ನಿಯೋಜನೆಯಲ್ಲಿ ತೊಂದರೆ ನಿರ್ಮಾಣವಾಗಿದೆ. ಹಸೀನಾರ ಬಳಿ ರಾಜಕೀಯ ಪಾಸ್‌ಪೋರ್ಟ್ ಅಥವಾ ಅಧಿಕೃತ ವೀಸಾ ಇಲ್ಲ. ಆದ್ದರಿಂದ, ಮೊದಲು ವೀಸಾ ಪಡೆದು ನಂತರ ಲಂಡನ್‌ಗೆ ಹೋಗಿ, ಅವರಿಗೆ ಆಶ್ರಯವನ್ನು ಪಡೆಯಬೇಕಾಗುತ್ತದೆ. ಈ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನವನ್ನು ಲಂಡನ ಮತ್ತು ದೆಹಲಿಯಿಂದ ಮಾಡಲಾಗುತ್ತಿದೆಯೆಂದು ತಿಳಿದುಬಂದಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದ ಅಧಿಕಾರ ಬದಲಾವಣೆ ಮತ್ತು ರಾಷ್ಟ್ರವ್ಯಾಪಿ ಹಿಂಸಾಚಾರದ ಹಿಂದೆ ಅಮೇರಿಕೆಯ `ಡೀಪ ಸ್ಟೇಟ’ ಕಾರ್ಯನಿರ್ವಹಿಸುತ್ತಿದೆಯೆಂದು ಹೇಳಲಾಗುತ್ತಿದೆ. ಬಾಂಗ್ಲಾದೇಶದ ವಿರೋಧಿ ರಾಜಕೀಯ ಪಕ್ಷಗಳು ಅಮೇರಿಕೆಗೆ ಬಾಂಗ್ಲಾದೇಶದ ಆಂತರಿಕ ಸ್ಥಿತಿಯ ಬಗ್ಗೆ ಗಮನಹರಿಸುವಂತೆ ಕೆಲವು ದಿನಗಳ ಹಿಂದೆ ವಿನಂತಿಸಿತ್ತೆಂದು ಹೇಳಲಾಗುತ್ತಿದೆ. ಇದರಿಂದಲೇ ಶೇಖ ಹಸೀನಾರಿಗೆ ಅಮೇರಿಕೆಯಲ್ಲಿ ಪ್ರವೇಶವನ್ನು ನಿರಾಕರಿಸಲಾಗುತ್ತಿದ್ದು, ಇದು ಷಡ್ಯಂತ್ರದ ಭಾಗವಾಗಿಲ್ಲವೆನ್ನುವುದು ಹೇಗೆ ನಂಬುವುದು?