ಪಿ.ಎಫ್.ಐ. ಗೆ ಸಂಬಂಧಿಸಿದ ಮೌಲ್ವಿಯಿಂದ ಹಿಂದೂ ಹುಡುಗಿಯ ಮತಾಂತರ !

  • ಮುಸ್ಲಿಂ ಕುಟುಂಬದವರ ಮಕ್ಕಳಿಗೆ ಪಾಠ ಹೇಳಲು ಹೋಗುತ್ತಿದ್ದಾಗ ಬ್ರೈನ್ ವಾಷ್

  • ಮತಾಂತರ ಆದ ಹುಡುಗಿಯು ಭಯೋತ್ಪಾದಕ ಜಾಕೀರ್ ನಾಯಿಕನ ವಿಡಿಯೋ ನೋಡುತ್ತಿರುವುದು ಪತ್ತೆ !

(ಮೌಲ್ವಿ ಎಂದರೆ ಇಸ್ಲಾಂನ ಧಾರ್ಮಿಕ ನಾಯಕ)

ಪ್ರತೀಕಾತ್ಮಕ ಛಾಯಾಚಿತ್ರ

ಠಾಣೆ – ಜಿಹಾದಿ ಭಯೋತ್ಪಾದನೆಗೆ ಉತ್ತೇಜನ ನೀಡುವ ಜಾಕಿರ್ ನಾಯಕ್‌ನ ವೀಡಿಯೊ ವೀಕ್ಷಿಸಿದ ನಂತರ, ಉಲ್ಲಾಸ್‌ನಗರದಲ್ಲಿನ ಗಣೇಶ ನಗರದ ಹಿಂದೂ ಮಹಿಳೆ ಕಲ್ಪನಾ ಚೌಧರಿಯವರ ದೃಷ್ಟಿ ಹೆಸರಿನ ಮಗಳು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾಳೆ. ಇಲ್ಲಿನ ಮೌಲ್ವಿಗಳು ಸೇರಿದಂತೆ ಕೆಲವು ಮುಸ್ಲಿಮರು ದೃಷ್ಟಿಯನ್ನು ನಿಯೋಜನ ಬದ್ಧವಾಗಿ ಮತಾಂತರ ಮಾಡಿರುವುದಾಗಿ ಕಲ್ಪನಾ ಚೌಧರಿ ದೂರಿನಲ್ಲಿ ತಿಳಿಸಿದ್ದಾರೆ. ಕಲ್ಪನಾ ಚೌಧರಿ ಅವರ ದೂರಿನ ಆಧಾರದ ಮೇಲೆ ವಿಠ್ಠಲವಾಡಿ ಪೊಲೀಸ್ ಠಾಣೆಯಲ್ಲಿ ದೃಷ್ಟಿ ಸೇರಿದಂತೆ 10 ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ 2 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಉಳಿದ 8 ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರು ಅವರನ್ನು ಶೋಧಿಸುತ್ತಿದ್ದಾರೆ.

ಈ ಮತಾಂತರದ ಷಡ್ಯಂತ್ರ್ಯದಲ್ಲಿ ಸ್ಥಳೀಯ ಮದರಸಾದ ಮೌಲ್ವಿ ಭಾಗಿಯಾಗಿದ್ದಾರೆ. ಮೌಲ್ವಿಯೊಂದಿಗೆ ಕೆಲವು ಸ್ಥಳೀಯ ಮುಸಲ್ಮಾನರು ದೃಷ್ಟಿಗೆ ಆಮಿಷವೊಡ್ಡಿ ಅವಳನ್ನು ಮುಸ್ಲಿಂ ಧರ್ಮವನ್ನು ಸ್ವೀಕರಿಸುವಂತೆ ಒತ್ತಾಯಿಸಿದರು. ಈ ಪ್ರಕರಣದ ಮೌಲ್ವಿಯು ನಿಷೇಧಿತ ಪಿ.ಎಫ್.ಐ. (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಈ ಜಿಹಾದಿ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವುದಾಗಿ ತಿಳಿದುಬಂದಿದೆ.

ಹಿಂದೂ ಹುಡುಗಿಗೆ ಇಸ್ಲಾಂನಂತೆ ನಡೆದುಕೊಳ್ಳುವಂತೆ ಅನಿವಾರ್ಯಪಡಿಸಿದರು !

ಕಲ್ಪನಾ ಚೌಧರಿ ಅವರ ಮನೆಯ ಬಳಿ ಶಬೀನಾ ಶೇಖ್ ಮತ್ತು ಮಹೇಕ್ ಶೇಖ್ ಅವರು ವಾಸಿಸುತ್ತಿದ್ದರು. ದೃಷ್ಟಿ ಶಬೀನಾ ಶೇಖ್ ಅವರ ಮನೆಗೆ ಅವರ ಹುಡುಗಿಯರಿಗೆ ಪಾಠ ಕಲಿಸಲು ಹೋಗುತ್ತಿದ್ದಳು. ಈ ಕಾಲಾವಧಿಯಲ್ಲಿ ಶೇಖ ಕುಟುಂಬದವರು ದೃಷ್ಟಿಗೆ ನಮಾಜ ಮಾಡುವಂತೆ ಹೇಳಿದರು, ಹಾಗೆಯೇ ದಿನಾಲೂ ಮಾಡುವಂತೆ ಹೇಳಿದರು. ಅವಳಿಗೆ ಇಸ್ಲಾಂನಲ್ಲಿ ಹೇಳಿರುವಂತೆ ವರ್ತಿಸಲು ಅನಿವಾರ್ಯಪಡಿಸಿದರು. ಶೇಖ ಕುಟುಂಬದವರು ತಮ್ಮ ಹುಡುಗಿಯವರೊಂದಿಗೆ ದೃಷ್ಟಿಯನ್ನು ಬುರ್ಖಾ ಹಾಕಿಕೊಂಡಿರುವ ಛಾಯಾಚಿತ್ರವನ್ನು ಸಂಕೇತಸ್ಥಳದಲ್ಲಿಯೂ ಪ್ರಸಾರ ಮಾಡಿದರು. ಇಷ್ಟಕ್ಕೇ ಸುಮ್ಮನಾಗದೇ ದೃಷ್ಟಿಯ ಮತಾಂತರದ ಕಾಗದಪತ್ರಗಳನ್ನೂ ಸಿದ್ಧಪಡಿಸಿದರು. ಪೋಷಕರ ಖಾತೆಯಲ್ಲಿದ್ದ ಹಣವನ್ನೂ ತೆಗೆದರು. ಉಲ್ಲಾಸನಗರದ ಮದರಸಾದಲ್ಲಿ ದೃಷ್ಟಿಯ ಮತಾಂತರಗೊಳಿಸಿರುವುದಾಗಿ ಕಾಗದ ಪತ್ರಗಳನ್ನು ಸಿದ್ಧಪಡಿಸಿದರು. ಈ ವಿಷಯದಲ್ಲಿ ಕಲ್ಪನಾ ಚೌಧರಿಯವರು ಆಗಾಗ ದೃಷ್ಟಿಗೆ ತಿಳಿಸಿಹೇಳಲು ಪ್ರಯತ್ನಿಸಿದಳು; ಆದರೆ ದೃಷ್ಟಿಯು ಕೇಳದೇ ನನ್ನ ಮೇಲೆ ಹಲ್ಲೆ ಮಾಡಿದಳು’ ಎಂದು ಅವಳ ತಾಯಿ ಕಲ್ಪನಾ ಚೌಧರಿ ದೂರಿನಲ್ಲಿ ತಿಳಿಸಿದ್ದಾರೆ.

ಮತಾಂತರಗೊಂಡ ಹುಡುಗಿಯಿಂದ ತಾಯಿಯ ಮೇಲೆ ಸುಳ್ಳು ಆರೋಪ

ಈ ಪ್ರಕರಣದಲ್ಲಿ ಕಲ್ಪನಾ ಚೌಧರಿಯು ಪೊಲೀಸರಲ್ಲಿ ದೂರು ದಾಖಲಿಸಿದಾಗ, ದೃಷ್ಟಿಯು ‘ತಾಯಿಯು ವೇಶ್ಯಾ ವಾಟಿಕೆ ಮಾಡಲು ನನ್ನನ್ನು ಅನಿವಾರ್ಯಪಡಿಸುತ್ತಿದ್ದಾರೆ, ಹಾಗೆಯೇ ನನ್ನ ಸಹೋದರ ಮತ್ತು ತಂದೆ ನನ್ನ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸುತ್ತಿದ್ದಾರೆ’, ಎಂದು ಸುಳ್ಳು ಆರೋಪಗಳನ್ನು ಮಾಡಿದಳು. (ಇಂತಹ ಸುಳ್ಳು ಆರೋಪಗಳನ್ನು ಮಾಡುವಂತೆ ಮುಸಲ್ಮಾನರೇ ಕಲಿಸಿರಬೇಕು ಎನ್ನುವುದು ಗಮನಕ್ಕೆ ಬರುತ್ತದೆ ! ಇದರಿಂದ ಯಾವ ರೀತಿ ಮನಃಪರಿವರ್ತನೆ ಮಾಡುತ್ತಾರೆ ಎನ್ನುವುದನ್ನು ವಿಚಾರ ಮಾಡಬೇಕಾಗಿದೆ – ಸಂಪಾದಕರು) ಈ ಸಮಯದಲ್ಲಿ ಕಲ್ಪನಾ ಚೌಧರಿಯವರು ದೃಷ್ಟಿಯ ಮತಾಂತರದ ವಿಷಯದಲ್ಲಿ ಕಾಗದ ಪತ್ರಗಳನ್ನು ಪೊಲೀಸರಿಗೆ ತೋರಿಸಿ ನಡೆದಿರುವ ಪ್ರಕರಣವನ್ನು ಹೇಳಿದರು. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳಿಗೆ ಧರ್ಮ ಶಿಕ್ಷಣವಿಲ್ಲದ ಕಾರಣ ಮತ್ತು ಪೋಷಕರೂ ಮಕ್ಕಳಿಗೆ ಧರ್ಮ ಶಿಕ್ಷಣವನ್ನು ನೀಡುವುದಿಲ್ಲ ಮತ್ತು ಹಿಂದೂಗಳಿಗೆ ಧರ್ಮಾಭಿಮಾನವಿಲ್ಲದಿರುವುದರಿಂದ ಮತಾಂಧ ಮುಸ್ಲಿಮರು ಇಂತಹವರ ಮನಸ್ಸನ್ನು ಪರಿವರ್ತಿಸಿ, ಅವರನ್ನು ಮತಾಂತರಿಸಿದರೆ ಆಶ್ಚರ್ಯಪಡಬಾರದು !