Fake Birth Certificates : ಉತ್ತರ ಪ್ರದೇಶದ 6 ಗ್ರಾಮಗಳಿಂದ 20 ಸಾವಿರ ನಕಲಿ ಜನನ ಪ್ರಮಾಣಪತ್ರ

  • ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರ ಮುಸ್ಲಿಮರಿಗೆ ಲಾಭ !

  • ಇಲ್ಲಿಯವರೆಗೆ 10 ಜನರ ಬಂಧನ

ಬಂಧಿತ ಆರೋಪಿಗಳು

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶ ಉಗ್ರ ನಿಗ್ರಹ ದಳವು ರಾಜ್ಯದ ರಾಯಬರೇಲಿ ಜಿಲ್ಲೆಯ ಸಲೋನ ತಾಲೂಕಿನ 6 ಗ್ರಾಮಗಳಿಂದ ಸುಮಾರು 20 ಸಾವಿರ ಜನರ ಆನ್‌ಲೈನ್ ಜನನ ಪ್ರಮಾಣಪತ್ರ ಜಾರಿ ಮಾಡಿದ ಪ್ರಕರಣದಲ್ಲಿ ಇದುವರೆಗೆ 10 ಜನರನ್ನು ಬಂಧಿಸಲಾಗಿದೆ. ಅವರಲ್ಲಿ ಗೋವಿಂದ್ ಕೇಸರಿ, ಆಕಾಶ್, ಸಂಜೀವ್ ಸಿಂಗ್, ವೈಭವ್ ಉಪಾಧ್ಯಾಯ, ಸಲ್ಮಾನ್ ಅಲಿ ಮತ್ತು ಶಾನವಾಜ್ ಹೆಸರುಗಳಾಗಿವೆ. ಅವರು ದೇಶದೊಳಗೆ ನುಸುಳಿರುವ ರೊಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿ ಮುಸ್ಲಿಮರಿಗೆ ನಕಲಿ ಜನನ ಪ್ರಮಾಣ ಪತ್ರ ನೀಡಿದ್ದರು. ಎಲ್ಲ ಜನನ ಪ್ರಮಾಣಪತ್ರಗಳು ಗ್ರಾಮದ ಗ್ರಾಮಾಭಿವೃದ್ಧಿ ಅಧಿಕಾರಿಗಳ ಡಿಜಿಟಲ್ ಸಹಿಯೊಂದಿಗೆ ಖಾಸಗಿ ಜನ ಸುವಿಧಾ ಕೇಂದ್ರದಿಂದ ಆನ್ ಲೈನ ಮುಖಾಂತರ ನೀಡಲಾಗಿದೆ. ಈ ಮೊದಲೇ ಅಧಿಕಾರಿ ಸಹಿತ 4 ಜನರನ್ನು ಬಂಧಿಸಲಾಗಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರ ಸಹಭಾಗ

ಉಗ್ರ ನಿಗ್ರಹ ದಳವು ಈ ಪ್ರಕರಣದಲ್ಲಿ ನಿಷೇಧಿತ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಓರ್ವ ಸದಸ್ಯನನ್ನು ಬಂಧಿಸಿತ್ತು. ಆತನಿಂದ ವಶಪಡಿಸಿಕೊಂಡ ಎಲ್ಲಾ ದಾಖಲೆಗಳು ರಾಯಬರೇಲಿಯ ಪಲಾಹಿ ಗ್ರಾಮದ ವಿಳಾಸದಿಂದ ತಯಾರಿಸಲಾಗಿತ್ತು. ಪಲಾಹಿ ಗ್ರಾಮದ ಹತ್ತಿರ ಜನ ಸುವಿಧಾ ಕೇಂದ್ರದಿಂದ ಈ ಕಾಗದ ಪತ್ರಗಳನ್ನು ತಯಾರಿಸಲಾಗಿತ್ತು. ಬಂಧಿತ ಈ ಸದಸ್ಯನು ಕೇರಳ, ಮಹಾರಾಷ್ಟ್ರ ಮತ್ತು ಗುಜರಾತ ರಾಜ್ಯಗಳ ಅನೇಕ ಜನರ ಜನನ ಪ್ರಮಾಣ ಪತ್ರಗಳನ್ನು ರಾಯಬರೇಲಿಯಿಂದ ತಯಾರಿಸಲಾಗಿದೆಯೆಂದು ಒಪ್ಪಿಕೊಂಡಿದ್ದಾನೆ.

ಸಂಪಾದಕೀಯ ನಿಲುವು

  • ಇಷ್ಟು ದೊಡ್ಡ ಪ್ರಮಾಣದಲ್ಲಿ ನಕಲಿ ಜನನ ಪ್ರಮಾಣಪತ್ರಗಳನ್ನು ತಯಾರಿಸಿ ವಿತರಿಸುವವರೆಗೆ ಪೊಲೀಸರು, ಗೂಢಾಚಾರರು ಮುಂತಾದವರಿಗೆ ಇದರ ಮಾಹಿತಿ ಹೇಗೆ ಸಿಗಲಿಲ್ಲ ?
  • ನಕಲಿ ಜನನ ಪ್ರಮಾಣ ಪತ್ರ ತಯಾರಿಸಿ ನುಸುಳುಕೋರರಿಗೆ ನೀಡುವ ಇಂತಹ ದೇಶದ್ರೋಹಿಗಳಿಗೆ ಗಲ್ಲು ಶಿಕ್ಷೆ ನೀಡುವ ಆವಶ್ಯಕತೆಯಿದೆ !