ಮಾರುಕಟ್ಟೆಯಲ್ಲಿ ಲಭ್ಯವಿರುವ ಪುಸ್ತಕದ ಕುರಿತು ಚರ್ಚಿಸುವುದು ಕಳಂಕವಲ್ಲ ! – ಕೇರಳ ಉಚ್ಚ ನ್ಯಾಯಾಲಯ

ಒಂದು ವಾರ್ತಾ ವಾಹಿನಿಯಲ್ಲಿ ಮಾತಾ ಅಮೃತನಂದಮಯಿ ಇವರನ್ನು ಟೀಕಿಸಿರುವ ಪುಸ್ತಕವನ್ನು ಆಧಾರವಾಗಿಟ್ಟುಕೊಂಡು ಕಾರ್ಯಕ್ರಮ ಪ್ರಸಾರ ಮಾಡಿತ್ತು !

ತಿರುವನಂತಪುರಂ (ಕೇರಳ) – ‘ಅಮ್ಮ’ ಎಂದೇ ಖ್ಯಾತಿ ಪಡೆದಿರುವ ಸಂತ ಮಾತಾ ಅಮೃತಾನಂದಮಯಿ ಇವರ ಕುರಿತು ಒಂದು ಪುಸ್ತಕದಲ್ಲಿ ಟೀಕಿಸಲಾಗಿತ್ತು. ಈ ಪುಸ್ತಕದಿಂದ ಒಂದು ವಾರ್ತಾ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸ್ತುತಪಡಿಸಲಾಗಿತ್ತು. ಮಾತಾ ಅಮೃತನಂದಮಯಿ ಇವರ ಭಕ್ತರೊಬ್ಬರು ಸಂಬಂಧಪಟ್ಟ ವಾಹಿನಿಯ ವಿರೋಧದಲ್ಲಿ ದೂರು ದಾಖಲಿಸಿದ್ದರು. ಅದರಿಂದ ಆ ವಾಹಿನಿಯ ವಿರುದ್ಧ ಮೊಕದ್ದಮೆ ಕೂಡ ನಡೆಸಲಾಗಿತ್ತು. ನ್ಯಾಯಾಲಯವು ಈ ಮೊಕದ್ದಮೆ ರದ್ದುಪಡಿಸುವ ಆದೇಶ ನೀಡಿದೆ. ‘ವಾರ್ತಾ ವಾಹಿನಿಯು ಯಾವುದಾದರೂ ಪುಸ್ತಕದ ಆಧಾರಿತ ಕಾರ್ಯಕ್ರಮ ಮಾಡುವುದು ಅವಮಾನಕಾರಕವಲ್ಲ. ಪ್ರಸಾರ ಮಾಧ್ಯಮಗಳು ಸಾರ್ವಜನಿಕವಾಗಿ ಲಭ್ಯವಿರುವ ಪುಸ್ತಕದ ಕುರಿತು ಚರ್ಚಿಸಬಹುದು ಮತ್ತು ಹಾಗೆ ಮಾಡುವುದನ್ನು ಯೋಗ್ಯ ಟಿಪ್ಪಣಿ ಅಥವಾ ಟೀಕೆ ಎಂದು ತಿಳಿಯಲಾಗುವುದು. ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒಳಪಡುತ್ತದೆ’, ಎಂದು ಕೇರಳ ಉಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ.

೧. ಉಚ್ಚ ನ್ಯಾಯಾಲಯವು, ಮಾತಾ ಅಮೃತಾನಂದಮಯಿ ಅಥವಾ ಅವರ ಮಠದಿಂದ ಈ ಪುಸ್ತಕದ ವಿರುದ್ಧ ಯಾವುದೇ ದೂರು ನೀಡಿದ್ದಾರೆ ಅಥವಾ ಇಲ್ಲ, ಇದು ತಿಳಿದಿಲ್ಲ. ಇಂತಹ ದೂರು ನೀಡಲು ಅವರು ಸ್ವತಂತ್ರರಾಗಿದ್ದಾರೆ.

೨. ವಾಹಿನಿಯ ಕಾರ್ಯಕಾರಿ ಸಂಚಾಲಕ ಪ್ರಕಾಶ ಹಾಗೂ ಸಂಚಾಲಕ ಮತ್ತು ಮುಖ್ಯ ಸಂಪಾದಕ ಎಂ.ವಿ .ನಿಕೇಶ ಕುಮಾರ ಇವರು ಈ ಅರ್ಜಿ ದಾಖಲಿಸಿದ್ದರು. ಮಾತಾಜಿ ಮತ್ತು ಅವರ ಆಶ್ರಮದ ಬಗ್ಗೆ ಟೀಕೆ ಮಾಡಿರುವುದರಿಂದ ೨೦೧೪ ರಲ್ಲಿ ವಾರ್ತಾವಾಹಿನಿಯ ವಿರುದ್ಧ ದೂರು ದಾಖಲಿಸಲಾಗಿತ್ತು.

೩. ಸಂಬಂಧಪಟ್ಟ ವಾರ್ತಾ ವಾಹಿನಿಯು ‘ಬಿಗ್ ಸ್ಟೋರಿ’ ಹೆಸರಿನ ಕಾರ್ಯಕ್ರಮದ ಮೂಲಕ ಮಾತಾ ಅಮೃತಾನಂದಮಯಿ ಮತ್ತು ಅವರ ಆಶ್ರಮದ ಕುರಿತು ಟೀಕಿಸಿದ್ದರು. ಈ ಕಾರ್ಯಕ್ರಮ ಗೆಲ್ ಟ್ರೇಡವೆಲ್ ಹೆಸರಿನ ವ್ಯಕ್ತಿಯ ‘ಹೋಲಿ ಹೆಲ್’ ಈ ಪುಸ್ತಕದ ಆಧಾರಿತವಾಗಿತ್ತು.