ಬಸ್ಸಿನಲ್ಲಿ ಹನುಮಂತನ ಸ್ಟಿಕ್ಕರ್ ಅಂಟಿಸಬಾರದಂತೆ ! – ಆರೀಫ್ ಅರವಾಹ್, ನಿಷೇಧಿತ ಭಯೋತ್ಪಾದಕ ಸಂಘಟನೆ PFI ನ ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿ

  • ಕರ್ನಾಟಕ ಸಾರಿಗೆ ಇಲಾಖೆಯ ವಿರುದ್ಧ ದೂರು ನೀಡಿದ ಮುಸಲ್ಮಾನ ಯುವಕ!

  • ಯುವಕ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿ !

  • ಅಕ್ಷೇಪ ವ್ಯಕ್ತಪಡಿಸುವ ಪೋಸ್ಟ್ ಮಾಡಿದ ಯುವಕ; ಸಾರಿಗೆ ಇಲಾಖೆಯಿಂದ ಕ್ರಮ !

ಬೆಂಗಳೂರು – ಚಿಕ್ಕಮಂಗಳೂರಿನ ಬಸ್ ನಿಲ್ದಾಣದಲ್ಲಿನ ಕರ್ನಾಟಕ ಸಾರಿಗೆ ಇಲಾಖೆಯ ಒಂದು ಬಸ್ಸಿನ ಮೇಲೆ ಹನುಮಂತನ ಸ್ಟಿಕರ್ ಅಂಟಿಸಿರುವುದು ಓರ್ವ ಮುಸಲ್ಮಾನ ಯುವಕನಿಗೆ ಕಂಡುಬಂತು. ಇದರಿಂದ ಹೊಟ್ಟೆ ಉರಿ ಆದ ಅವನು ಅದರ ಛಾಯಾಚಿತ್ರ ತೆಗೆದು ಎಕ್ಸ್ ನಲ್ಲಿ (ಟ್ವಿಟರ್ ನಲ್ಲಿ) ಪ್ರಸಾರ ಮಾಡಿದ್ದಾನೆ ಮತ್ತು ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಾರಿಗೆ ಇಲಾಖೆಯನ್ನು ಟ್ಯಾಗ್ ಮಾಡಿದ್ದಾನೆ. ಹಿಂದೂ ದೇವತೆಯ ಚಿತ್ರಗಳು ಸಾರ್ವಜನಿಕ ವಾಹನಗಳ ಮೇಲೆ ಈ ರೀತಿ ಹಚ್ಚುವಂತಿಲ್ಲ. ದಯವಿಟ್ಟು ಬಸ್ ಚಾಲಕ ಮತ್ತು ಆಪರೇಟರ್ ವಿರುದ್ಧ ಕ್ರಮ ಕೈಗೊಳ್ಳಿ ! ಎಂದು ಪೋಸ್ಟ್ ಮಾಡಿದ್ದಾನೆ. ಈ ಬಗ್ಗೆ ಸಾರಿಗೆ ಇಲಾಖೆ ಗಮನ ಹರಿಸಿ ಈ ವಿಷಯ ಚಿಕ್ಕಮಂಗಳೂರಿನ ಡಿಪೋಗೆ ವರ್ಗಾಯಿಸಿದೆ, ಎಂದು ಉತ್ತರ ನೀಡಿದೆ. ವಾಸ್ತವ ಏನೆಂದರೆ, ಬಸ್ಸಿನ ಹಿಂಬದಿಯ ಗಾಜಿನ ಒಂದು ಮೂಲೆಯಲ್ಲಿ ಹನುಮಂತನ ಚಿಕ್ಕ ಚಿತ್ರ ಅಂಟಿಸಲಾಗಿದೆ.

ಈ ಪೋಸ್ಟ್ ಮಾಡಿದ ಯುವಕನ ಹೆಸರು ಆರೀಫ್ ಅರವಾಹ್ ಎಂದಾಗಿದ್ದು, ಈತ ನಿಷೇಧಿತ ಮುಸಲ್ಮಾನ ಸಂಸ್ಥೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿಯಾಗಿದ್ದಾನೆ.

ಸಾರಿಗೆ ಇಲಾಖೆಯು ಈ ಪೋಸ್ಟ್ ಬಗ್ಗೆ ಗಮನಹರಿಸಿರುವುದರಿಂದ ಕರ್ನಾಟಕದಲ್ಲಿನ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ಎಂದು ಆರೋಪಗಳು ಕೇಳಿ ಬರುತ್ತಿವೆ. ಅನೇಕ ಹಿಂದೂಗಳು ಕಾಂಗ್ರೆಸ್ ಸರಕಾರವನ್ನು ಹಿಂದೂ ವಿರೋಧಿ ಎಂದು ಟೀಕಿಸುತ್ತಿದ್ದಾರೆ. ಎಕ್ಸ್ ನ ಓರ್ವ ಯೂಜರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಸರಕಾರದ ಹೇಳಿಕೆಯಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ. ಸರಕಾರ ಹಿಂದೂ ವಿರೋಧಿಯಾಗಿದೆ, ಇಲ್ಲವಾದರೆ ಇಂತಹ ಪೋಸ್ಟಿಗೆ ಸಾರಿಗೆ ಇಲಾಖೆಯು ಯಾವತ್ತೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಎಂದು ಬರೆದಿದ್ದಾರೆ.

ಸಂಪಾದಕೀಯ ನಿಲುವು

ಹನುಮಂತನ ಸ್ಟಿಕರ್ ಹಚ್ಚದೆ ಇರಲು ಇದು ಪಾಕಿಸ್ತಾನ ಅಥವಾ ಬಾಂಗ್ಲಾದೇಶವೇ ? ಹನುಮಂತನ ಸ್ಟಿಕರ್ ಹಚ್ಚುವುದರ ಕುರಿತು ಆಕ್ಷೇಪ ವ್ಯಕ್ತಪಡಿಸಿದವರ ಮೇಲೆಯೇ ಧಾರ್ಮಿಕ ಸಾಮರಸ್ಯಕ್ಕೆ ಅಡ್ಡಿ ತರುವ ಹೆಸರಿನಲ್ಲಿ ಕ್ರಮ ಕೈಗೊಳ್ಳಬೇಕು !

ಬಸ್ಸಿನಲ್ಲಿ ಸ್ಟಿಕರ್ ಹಚ್ಚಿರುವ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳದಿದ್ದರೆ ಆಶ್ಚರ್ಯವೇನಿಲ್ಲ !