ಕಲ್ಯಾಣ್‌ನ ವಿಠ್ಠಲ್-ರುಕ್ಮಿಣಿ ದೇವಸ್ಥಾನದಲ್ಲಿ ಕಳ್ಳತನ !

ಕಲ್ಯಾಣ್-ಡೊಂಬಿವಿಲಿಯಲ್ಲಿ ವರ್ಷದಲ್ಲಿ 7-8 ದೇವಸ್ಥಾನಗಳಲ್ಲಿ ಕಳ್ಳತನ

ಕಲ್ಯಾಣ್ – ಕಲ್ಯಾಣ್ ಪೂರ್ವದ ಖಡೆಗೊಳವಲಿಯಲ್ಲಿರುವ ವಿಠ್ಠಲ್-ರುಕ್ಮಿಣಿ ದೇವಸ್ಥಾನದಲ್ಲಿ ಕಳ್ಳರು 15 ಸಾವಿರ ರೂಪಾಯಿ ಮತ್ತು 14 ಹಿತ್ತಾಳೆ ಪಾತ್ರೆಗಳನ್ನು ಕದ್ದಿದ್ದಾರೆ. ಕಳ್ಳರು ದೇವಸ್ಥಾನದ ಮೇಲೆ ನಿಗಾ ಇಟ್ಟು ದೇವಸ್ಥಾನದ ಮುಖ್ಯದ್ವಾರದ ಬಾಗಿಲನ್ನು ಮಾರಕಾಸ್ತ್ರದಿಂದ ತೆರೆದು ಒಳಗೆ ಪ್ರವೇಶಿಸಿದ್ದನು. ದೇವಸ್ಥಾನದ ಪ್ರದಕ್ಷಿಣೆ ಮಾರ್ಗದಲ್ಲಿರುವ ಕಾಣಿಕೆ ಪೆಟ್ಟಿಗೆ, ದೇವಸ್ಥಾನದ ಗರ್ಭಗುಡಿಯ ಬಳಿಯ ಕೊಠಡಿಯಲ್ಲಿ ದೇವರಿಗೆ ಬೇಕಾದ 12 ಹಿತ್ತಾಳೆ ಪಾತ್ರೆಗಳನ್ನು ಕಳವು ಮಾಡಲಾಗಿದೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ವರ್ಷಗಳಲ್ಲಿ ಕಲ್ಯಾಣ್-ಡೊಂಬಿವಿಲಿಯ 7-8 ದೇವಸ್ಥಾನಗಳಲ್ಲಿ ಕಳ್ಳತನ ನಡೆದಿದ್ದು, ದೇವಸ್ಥಾನದ ಕಾಣಿಕೆ ಹುಂಡಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

ಬೆಳಗ್ಗೆ ಎಂದಿನಂತೆ ಅರ್ಚಕರು ದೇವಸ್ಥಾನ ತೆರೆಯಲು ಬಂದಾಗ ದೇವಸ್ಥಾನದ ಮುಖ್ಯ ಬಾಗಿಲು ಮುರಿದು ಕಳ್ಳತನವಾಗಿರುವುದು ಕಂಡು ಬಂದಿದೆ. ಅರ್ಚಕರು ಕೂಡಲೇ ಈ ಮಾಹಿತಿಯನ್ನು ದೇವಸ್ಥಾನದ ಖಜಾಂಚಿ ಜಗದೀಶ್ ಬಾಲಕೃಷ್ಣ ತಾರೆ ಅವರಿಗೆ ನೀಡಿದರು.

ಸಂಪಾದಕೀಯ ನಿಲುವು

* ದೇಶಾದ್ಯಂತ ಪ್ರತಿದಿನ ದೇವಸ್ಥಾನಗಳಲ್ಲಿ ಕಳ್ಳತನದ ವರದಿಯಾಗುತ್ತಿದೆ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸುವ ಮತ್ತು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳದಿರುವುದು ಕಂಡುಬರುತ್ತಿದೆ, ಅವರನ್ನು ಆಯ್ಕೆ ಮಾಡಿದ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ !