ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ 6​ ಸರ್ಕಾರಿ ನೌಕರರು ಅಮಾನತ್ತು

ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ

ಶ್ರೀನಗರ (ಜಮ್ಮು-ಕಾಶ್ಮೀರ) – ಭಯೋತ್ಪಾದಕರ ಪರ ಕೆಲಸ ಮಾಡುತ್ತಿದ್ದ 6 ಸರಕಾರಿ ನೌಕರರನ್ನು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಇವರು ಅಮಾನತ್ತುಗೊಳಿಸಿದ್ದಾರೆ. ಡ್ರಗ್ಸ್ ದಂಧೆ ಮಾಡಿ ಬಂದ ಹಣವನ್ನು ಉಗ್ರರಿಗೆ ನೀಡುತ್ತಿದ್ದರು. ಈ 6 ಜನರಲ್ಲಿ 5 ಪೊಲೀಸರು ಮತ್ತು 1 ಶಿಕ್ಷಕರಾಗಿದ್ದಾರೆ. ಇವರಲ್ಲಿ ಹವಾಲ್ದಾರ್ ಫಾರೂಕ್ ಅಹ್ಮದ್ ಶೇಖ್, ಖಾಲಿದ್ ಹುಸೇನ್ ಶಾ, ರಹಮತ್ ಶಾ, ಇರ್ಷಾದ್ ಅಹ್ಮದ್ ಚಾಕು, ಸೈಫ್ ದಿನ್ ಮತ್ತು ಸರಕಾರಿ ಶಿಕ್ಷಕ ನಜಮ್ ದಿನ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐ.ಎಸ್‌.ಐ.ನಿಂದ ಸಿದ್ಧಗೊಳಿಸಿದ ಭಯೋತ್ಪಾದಕ ಜಾಲಗಳೊಂದಿಗೆ ಸಂಪರ್ಕ ಹೊಂದಿದ್ದರು. ಆಗಸ್ಟ್ 2019 ರಲ್ಲಿ ಕಲಂ 370 ರದ್ದುಪಡಿಸಿದ ನಂತರ, ಅಂತಹ 70 ದೇಶ ದ್ರೋಹಿ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ.

ಸಂಪಾದಕೀಯ ನಿಲುವು

* ಇಂತಹವರನ್ನು ವಜಾಗೊಳಿಸುವುದು ಮಾತ್ರವಲ್ಲ, ಅವರನ್ನು ಜೈಲಿಗೆ ಹಾಕಿ ಗಲ್ಲುಶಿಕ್ಷೆಯಾಗಲು ಸರಕಾರ ಪ್ರಯತ್ನಿಸಬೇಕು !