|
ಆಗ್ರಾ (ಉತ್ತರ ಪ್ರದೇಶ) – ಇಲ್ಲಿನ ತಾಜ ಮಹಲ್‌ನಲ್ಲಿ, ಅಂದರೆ ತೇಜೋ ಮಹಲಿಯಾದಲ್ಲಿ, ಇಬ್ಬರು ಹಿಂದುತ್ವನಿಷ್ಠರು ಗಂಗಾಜಲವನ್ನು ಅರ್ಪಿಸಿದರು. ಇದರೊಂದಿಗೆ ‘ಓಂ’ ಎಂದು ಬರೆದಿರುವ ಸ್ಟಿಕ್ಕರ್ ಕೂಡ ಅಂಟಿಸಲಾಗಿದೆ. ಇದರ ವಿಡಿಯೋ ಕೂಡ ಮಾಡಲಾಗಿದ್ದು, ಇಬ್ಬರು ಯುವಕರು ನೀರಿನ ಬಾಟಲಿಯೊಂದಿಗೆ ಒಳ ಪ್ರವೇಶಿಸುತ್ತಿರುವುದು ಕಂಡು ಬಂದಿದೆ. ಯುವಕರು ಮುಖ್ಯ ಗೋರಿಯ ನೆಲಮಾಳಿಗೆಯ ಬಳಿ ಬಾಟಲಿಯಿಂದ ನೀರನ್ನು ಸುರಿದರು. ಘಟನೆಯ ಬಗ್ಗೆ ಮಾಹಿತಿ ಪಡೆಯುತ್ತಲೇ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಇಬ್ಬರನ್ನೂ ವಶಕ್ಕೆ ಪಡೆದು ತಾಜಗಂಜ ಪೊಲೀಸರಿಗೆ ಒಪ್ಪಿಸಿದೆ.
1. ಈ ಯುವಕರು ಅಖಿಲ ಭಾರತ ಹಿಂದೂ ಮಹಾಸಭಾದ ಕಾರ್ಯಕರ್ತರಾಗಿದ್ದೂ ಅವರು ಮಾಥುರಾ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಶಾಮ್ ಮತ್ತು ಜಿಲ್ಲಾ ಕಚೇರಿಯ ಸಚಿವ ವಿನೇಶ್ ಕುಂತಲ್ ಎಂದು ಗುರುತಿಸಲಾಗಿದೆ.
2. ಆಗ್ರಾ ನಗರ ಉಪ ಪೊಲೀಸ್ ಆಯುಕ್ತ ಸೂರಜ್ ರಾಯ ಅವರು, ಗಂಗಾಜಲವನ್ನು ಅರ್ಪಿಸಿರುವ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ ಮತ್ತು ತನಿಖೆ ಮುಂದುವರೆದಿದೆ ಎಂದು ಹೇಳಿದರು.
3. ಮಥುರಾದಲ್ಲಿ ಅಖಿಲ ಭಾರತೀಯ ಹಿಂದೂ ಮಹಾಸಭಾದ ಜಿಲ್ಲಾಧ್ಯಕ್ಷೆ ಛಾಯಾ ಗೌತಮ್ ಮಾತನಾಡಿ, ಜುಲೈ 31 ರಂದು ನಾನು ಕಾವಾಡ ಯಾತ್ರಿಕರಾದ ಶ್ಯಾಮ್ ಮತ್ತು ವಿನೇಶ್ ಕುಂತಲ್ ಅವರೊಂದಿಗೆ ಹೋಗಿದ್ದೆ. ಆಗಸ್ಟ್ 2 ರ ರಾತ್ರಿ 12 ಗಂಟೆಗೆ ಆಡಳಿತವು ನನ್ನನ್ನು ಗೃಹಬಂಧನದಲ್ಲಿ ಇರಿಸಿತು; ಆದರೆ ನಾನು ಅವರನ್ನು ಮೋಸಗೊಳಿಸಿ ಅಲ್ಲಿಂದ ಹೊರಟುಹೋದೆ. ಬೆಳಗ್ಗೆ 7 ಗಂಟೆಗೆ ತಾಜ ಮಹಲ್ ತಲುಪಿದೆ. ಅಲ್ಲಿ ಶ್ಯಾಮ್ ಮತ್ತು ವಿನೇಶ್ ತಾಜ ಮಹಲ್ ನಲ್ಲಿ ಗಂಗಾಜಲವನ್ನು ಅರ್ಪಿಸಿದರು ಎಂದು ಹೇಳಿದರು.
4. 5 ದಿನಗಳ ಹಿಂದೆ ಜಲ ಹಿಂದೂ ಮಹಾಸಭಾದ ಮೀನಾ ರಾಥೋಡ್ ಕೂಡ ಕಾಣಿಕೆ ನೀಡಲು ಹೋಗಿದ್ದರು. ಅವರು, ತಾಜಮಹಲ್‌ನಲ್ಲಿ ಶಿವನ ದೇವಾಲಯವಿದೆ. ನಾನು ಎಲ್ಲಿಯ ವರೆಗೆ ದೇವಸ್ಥಾನದಲ್ಲಿ ಜಲ ಅಪ್ಣೆ ಮಾಡುವುದಿಲ್ಲವೋ ಅಲ್ಲಿಯವರೆಗೆ ನಾನು ಇಲ್ಲಿಂದ ಹೋಗುವುದಿಲ್ಲ; ಎಂದು ಹೇಳಿದೆ. ಆದರೆ ಪೊಲೀಸರು ಅವರನ್ನು ಪಶ್ಚಿಮ ದ್ವಾರದಲ್ಲಿ ತಡೆದರು.