ಸುಪ್ರೀಂ ಕೋರ್ಟ್ ತೀರ್ಪು
* ಮರು ಪರೀಕ್ಷೆಗೆ ನಿರಾಕರಣೆ !
ನವದೆಹಲಿ – NEET-UG 2024 (ರಾಷ್ಟ್ರೀಯ ಅರ್ಹತೆಯೊಂದಿಗೆ ಪ್ರವೇಶ ಪರೀಕ್ಷೆ) ಪರೀಕ್ಷೆ ಪ್ರಕರಣದಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳುತ್ತಾ ಮರುಪರೀಕ್ಷೆ ನಡೆಸಲು ನಿರಾಕರಿಸಿದೆ. ಹೌದು ‘ಪ್ರಶ್ನೆಪತ್ರಿಕೆಗಳ ಲೀಕ್ ವ್ಯಾಪಕವಾಗಿಲ್ಲ, ಆದರೆ ಬಿಹಾರದ ರಾಜಧಾನಿ ಪಾಟಲಿಪುತ್ರ ಮತ್ತು ಹಜಾರಿಬಾಗ್‌ಗೆ ಮಾತ್ರ ಸೀಮಿತವಾಗಿತ್ತು; ಆದರೆ ಈ ಪ್ರಕರಣದಲ್ಲಿ ‘ಎನ್.ಟಿ.ಎ’ಯು (‘ನ್ಯಾಷನಲ್ ಟೆಸ್ಟ್ ಏಜೆನ್ಸಿ’) ಕಾಳಜಿ ವಹಿಸಬೇಕು ಎಂದು ನ್ಯಾಯಾಲಯ ಹೇಳಿದೆ. ‘ನೀಟ್’ ಪತ್ರಿಕೆ ಲೀಕ್ ಬಗ್ಗೆ ದೇಶದಾದ್ಯಂತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಸುಪ್ರೀಂ ಕೋರ್ಟ್, ಈ ವರ್ಷ ಆಗಿರುವ ಅವ್ಯವಸ್ಥೆಯ ಬಗ್ಗೆ ಕೇಂದ್ರ ಸರಕಾರ ಯೋಚಿಸಬೇಕು. ಇಂತಹ ಘಟನೆಗಳು ಇನ್ನು ಮುಂದೆ ನಡೆಯಬಾರದು. ಸಂಪೂರ್ಣ ಪರೀಕ್ಷೆ ಪ್ರಕ್ರಿಯೆ ಸುಗಮವಾಗಿದೆ. ಈ ವಿಷಯದ ಕುರಿತು ರಚಿಸಲಾದ ಸಮಿತಿಯು ಸೆಪ್ಟೆಂಬರ್ 30, 2024 ರೊಳಗೆ ತನ್ನ ವರದಿಯನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.
Supreme Court finds no evidence of widespread systematic leak in NEET UG 2024; denies plea for exam cancellation
– Directs NTA, Centre to avoid lapsespic.twitter.com/tfcLmT7bMd— Sanatan Prabhat (@SanatanPrabhat) August 2, 2024