ಪೂ. ನ್ಯಾಯವಾದಿ ಸುರೇಶ ಕುಲಕರ್ಣಿ ಮತ್ತು ನ್ಯಾಯವಾದಿ ಉಮೇಶ ಭಡಗಾಂವಕರ ಇವರಿಂದ ಯುಕ್ತಿವಾದ !
ಛತ್ರಪತಿ ಸಂಭಾಜಿನಗರ – ಗೋರಕ್ಷಕರಾದ ಜಿಗ್ನೇಶ್ ಕಂಖರೆ, ಸಂಗ್ರಾಮಸಿಂಗ್ ಪರದೇಶಿ ಮತ್ತು ಇತರರ ವಿರುದ್ಧ ಚೋಪಡಾ (ಜಲಗಾಂವ್ ಜಿಲ್ಲೆ)ಯಲ್ಲಿ ಗೋ ಕಳ್ಳಸಾಗಣಿಕೆದಾರ ಮುಸ್ಲಿಮರಿಂದಲೇ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿತ್ತು. ಹೀಗಾಗಿ ಮೇ 7ರಿಂದ ಎಲ್ಲಾ ಗೋರಕ್ಷಕರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು. ಈ ಬಗ್ಗೆ ಮುಂಬಯಿ ಹೈಕೋರ್ಟ್‌ನ ಸಂಭಾಜಿನಗರ ಪೀಠದ ಮುಂದೆ ಪೂ. ನ್ಯಾಯವಾದಿ ಸುರೇಶ ಕುಲಕರ್ಣಿ ಮತ್ತು ನ್ಯಾಯವಾದಿ ಉಮೇಶ ಭಡಗಾಂವಕರ್ ಯುಕ್ತಿವಾದ ಮಂಡಿಸಿದರು. ಗೋರಕ್ಷಕ ಜಿಗ್ನೇಶ್ ಕಂಖರೆ ಅವರ ಮನವಿಯನ್ನು ಆಲಿಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಜಾನುವಾರು ಕಳ್ಳಸಾಗಣೆದಾರರ ಮತಾಂಧರ ವಿರುದ್ಧ ಗೋರಕ್ಷಕರು ದೂರು ದಾಖಲಿಸಲು ಪ್ರಯತ್ನಿಸಿದ್ದರು; ಆದರೆ, ಮತಾಂಧರೇ ‘ಗೋರಕ್ಷಕರು ನಮ್ಮ ಪಿಕ್ ಅಪ್ ಕಾರನ್ನು ಒಡೆದು, ಕೊಲ್ಲಲು ಯತ್ನಿಸಿದರು’ ಎಂದು ಗೋರಕ್ಷಕರ ವಿರುದ್ಧವೇ ದೂರು ದಾಖಲಿಸುವಂತೆ ಪೊಲೀಸರನ್ನು ಒತ್ತಾಯಿಸಿದರು. ಅಪರಾಧ ನಡೆದಾಗ ಗೋಕಳ್ಳಸಾಗಣಿಕೆದಾರರು ಚೋಪಡಾದ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಿಗೆ ಆದ ಗಾಯಗಳು ಸಣ್ಣಪುಟ್ಟ ಇದೆ ಎಂದು ಪ್ರಮಾಣಪತ್ರವನ್ನು ನೀಡಲಾಗಿತ್ತು; ಆದರೆ, ಖಾಸಗಿ ವೈದ್ಯರ ಬಳಿ ತೆರಳಿ ‘ಅವರು ಗಂಭೀರವಾಗಿ ಗಾಯಗೊಂಡಿದ್ದೂ, ತಲೆಗೆ ತೀವ್ರ ಗಾಯಗಳಾಗಿವೆ’ ಎಂದು ಸುಳ್ಳು ಪ್ರಮಾಣಪತ್ರ ಸಲ್ಲಿಸಿ, ಗೋರಕ್ಷಕರ ವಿರುದ್ಧ 307ನೇ ಕಲಂ ಕೊಲೆ ಯತ್ನದ ಕಲಂ ವಿಧಿಸಲಾಗಿದೆ. ಇದರಿಂದಾಗಿ ಅವರಿಗೆ ಜಾಮೀನು ಸಿಗದಂತೆ ತಡೆಯಲಾಯಿತು. (ಇಂತಹ ಖಾಸಗಿ ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು!- ಸಂಪಾದಕರು)
ಈ ಬಗ್ಗೆ ಯುಕ್ತಿವಾದ ಮಾಡಿದ ಪೂ. ನ್ಯಾಯವಾದಿ ಕುಲಕರ್ಣಿ ಮತ್ತು ನ್ಯಾಯವಾದಿ ಭಡಗಾಂವಕರ್ ಅವರು ನ್ಯಾಯಾಲಯಕ್ಕೆ, ಮೊದಲ ದಿನವೇ ಸಣ್ಣಪುಟ್ಟ ಗಾಯಗಳು ಇರುವಾಗ ಖಾಸಗಿ ವೈದ್ಯರು ಗಂಭೀರ ಗಾಯಗಳ ಪ್ರಮಾಣಪತ್ರವನ್ನು ಹೇಗೆ ನೀಡುತ್ತಾರೆ? ಜಿಗ್ನೇಶ್ ಕಂಖರೆ, ಸಂಗ್ರಾಮಸಿಂಗ್ ಪರದೇಶಿ ಮತ್ತು ಇತರ ಗೋರಕ್ಷಕರು ಈ ಹಿಂದೆ ಗೋಕಳ್ಳಸಾಗಣೆಯ ವಿರುದ್ಧ ಹಲವಾರು ದೂರುಗಳನ್ನು ದಾಖಲಿಸಿದ್ದಾರೆ. ಹೀಗಿರುವಾಗ ಈ ಬಾರಿ ಪೊಲೀಸರು ಉದ್ದೇಶಪೂರ್ವಕವಾಗಿ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಘಟನೆ ನಡೆದಾಗ ಜಿಗ್ನೇಶ್ ಕಂಖರೆ ಅಲ್ಲಿ ಇರಲಿಲ್ಲ ಬದಲಾಗಿ ಮನೆಯಲ್ಲಿದ್ದರು. ಆದರೂ ಅವರ ವಿರುದ್ಧ ಸುಳ್ಳು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಇದಾದ ಬಳಿಕ ಕೋರ್ಟ್ ಕಂಖರೆಗೆ ಜಾಮೀನು ನೀಡಿತು.