ನವದೆಹಲಿ – ರೈಲ್ವೇ ಹಳಿಯ ಮೇಲೆ ಸೈಕಲ್, ಕೋಳಿ, ಸಿಲಿಂಡರ್, ಕಲ್ಲು ಇತ್ಯಾದಿ ವಸ್ತುಗಳನ್ನಿಟ್ಟು ಅದರ ಮೇಲೆ ರೈಲು ಹೋದ ನಂತರ ಆ ವಸ್ತುಗಳ ಸ್ಥಿತಿ ಏನಾಗುವುದು ಎಂಬುದರ ವಿಡಿಯೋ ಮಾಡಿ ಅದನ್ನು ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಿದ ಗುಲ್ಜಾರ್ ಶೇಖ್ ಎಂಬ ಯೂಟ್ಯೂಬರ್ ನನ್ನು ( ಸ್ವಂತದ ಯೂಟ್ಯೂಬ್ ಚಾನೆಲ್ ಮೂಲಕ ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ವ್ಯಕ್ತಿ) ಪೋಲೀಸರು ಬಂಧಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪುನಾವಾಲಾ ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ ಈ ಮಾಹಿತಿ ನೀಡಿದ್ದಾರೆ. ‘ಇಂತಹ ವೀಡಿಯೊಗಳನ್ನು ನೋಡಿದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಗುಲ್ಜಾರ್ ನನ್ನು ವಿರೋಧಿಸಲಾಯಿತು ಮತ್ತು ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು. ಹಾಗಾಗಿ ಆತನನ್ನು ಬಂಧಿಸಲಾಗಿದೆ’ ಎಂದು ತಿಳಿಸಿದ್ದಾರೆ.
“Rail Jihadi” Gulzar arrested
रेल जिहादी गुलज़ार गिरफ़्तार
I assured you that Rail Jihadi won’t be spared by authorities @legalhindudef
Thank you @myogiadityanath @Uppolice @RailMinIndia @AshwiniVaishnaw https://t.co/oMTTc29Up0 pic.twitter.com/AytyZGZBy3
— Shehzad Jai Hind (Modi Ka Parivar) (@Shehzad_Ind) August 1, 2024
ಸಂಪಾದಕೀಯ ನಿಲುವುವೀಡಿಯೋ ಮಾಡುವ ಹೆಸರಲ್ಲಿ ರೈಲು ಅಪಘಾತ ಮಾಡಿ ನೂರಾರು ಜನರ ಸಾವಿಗೆ ಯತ್ನಿಸಿದ ಅಪರಾಧವನ್ನು ದಾಖಲಿಸಿ ಆತನಿಗೆ ಗಲ್ಲು ಶಿಕ್ಷೆಯಾಗುವಂತೆ ಸರ್ಕಾರ ಪ್ರಯತ್ನಿಸಬೇಕು ! |