Illegal Madrasas : ಉತ್ತರ ಪ್ರದೇಶದ 94 ಕಾನೂನು ಬಾಹಿರ ಮದರಸಾಗಳನ್ನು ಮುಚ್ಚಲಾಗುವುದು

ಮದರಸಾಗಳಲ್ಲಿನ 2 ಸಾವಿರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕಲಿಯುವರು !

ಅಲಿಗಢ್ (ಉತ್ತರ ಪ್ರದೇಶ) – ಅಲಿಘಡ್ ಜಿಲ್ಲಾಡಳಿತವು ಜಿಲ್ಲೆಯಲ್ಲಿನ 94 ಮದರಸಾಗಳನ್ನು ಪರಿಶೀಲಿಸಿ ಅವುಗಳನ್ನು ಕಾನೂನು ಬಾಹಿರ ಎಂದು ಘೋಷಿಸಿದೆ. ಇವೆಲ್ಲವನ್ನೂ ಮುಚ್ಚಲು ಈಗ ಆದೇಶ ನೀಡಲಾಗಿದೆ. ಈ ಮದರಸಾಗಳಲ್ಲಿ ಓದುತ್ತಿರುವ ಸುಮಾರು 2 ಸಾವಿರ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳಿಗೆ ಸ್ಥಳಾಂತರಿಸಲಾಗುವುದು.

ಈ ಪರಿಶೀಲನೆಯ ವ್ಯಾಪ್ತಿಯನ್ನು ಹೆಚ್ಚಿಸಲು ಮಾನ್ಯತೆ ಪಡೆದ ಮದರಸಾಗಳ ಶಿಕ್ಷಕರನ್ನೂ ಸಹ ಸರ್ಕಾರದ ಈ ವಿಶೇಷ ತಂಡದಲ್ಲಿ ಸೇರಿಸಲಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿ ನಿಧಿ ಗೋಸ್ವಾಮಿ ಅವರು ಮಾಧ್ಯಮಗಳಿಗೆ ತಿಳಿಸಿದರು. ಅಕ್ರಮವಾಗಿ ನಡೆಸಲಾಗುತ್ತಿರುವ ಮದರಸಾಗಳ ಯಾದಿಯನ್ನು ತಯಾರಿಸಲು ಮದರಸಾಗಳಲ್ಲಿನ ಶಿಕ್ಷಕರು ಸರ್ಕಾರಕ್ಕೆ ಸಹಾಯ ಮಾಡುವರು ಎನ್ನಲಾಗಿದೆ.

ಸಂಪಾದಕೀಯ ನಿಲುವು

ದೇಶದಲ್ಲಿನ ಅಕ್ರಮ ಮದರಸಾಗಳನ್ನು ಮುಚ್ಚುವುದರೊಂದಿಗೆ ಎಲ್ಲಾ ಮದರಸಾಗಳಿಗೆ ನೀಡಲಾಗುವ ಸರ್ಕಾರದ ಸಹಾಯಧನವನ್ನೂ ಸಹ ನಿಲ್ಲಿಸಬೇಕು !